Saturday, 28th December 2024

Viral News: ಬಾಲಕನ ಅಕೌಂಟಿಗೆ ಬಿತ್ತು 87 ಕೋಟಿ ರೂ.! ಬ್ಯಾಲೆನ್ಸ್ ಚೆಕ್ ಮಾಡಿದವನಿಗೆ ‘ಸ್ವರ್ಗ ಒಂದು ಕ್ಷಣ ರಪ್ ಅಂತ ಪಾಸಾದ ಅನುಭವ..!’

ಮುಝಾಫರ್‌ಪುರ: ಹೀಗೊಂದು ಸನ್ನಿವೇಶವನ್ನು ಊಹಿಸಿಕೊಳ್ಳಿ, ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಒಂದು ಸ್ವಲ್ಪ ಹಣವಿರುತ್ತದೆ. ಆದರೆ ಒಂದು ದಿನ ನೀವು ನಿಮ್ಮ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡುವಾಗ ಅದರಲ್ಲಿ ಕೋಟಿಗಟ್ಟಲೆ.. ಬೇಡ ಲಕ್ಷಗಟ್ಟಲೆ ಬ್ಯಾಂಕ್ ಬ್ಯಾಲೆನ್ಸ್ (Bank Balance) ತೋರಿಸಿದ್ರೆ ನಿಮ್ಗೆ ಹೇಗಾಗ್ಬೇಡ.. ಮಿಸ್ಟೇಕ್ ಆಗಿರ್ಬೊದು ಅಂತ ರಿ-ಚೆಕ್ ಮಾಡಿದಾಗ್ಲೂ ಅಷ್ಟೇ ದೊಡ್ಡ ಮೊತ್ತದ ಬ್ಯಾಲೆನ್ಸ್ ಕಾಣಿಸಿದ್ರೆ ನಿಮ್ಮ ಸ್ಥಿತಿ ಹೇಗಿರುತ್ತೆ.. ಎಕ್ಸಾಕ್ಟ್ ಲೀ ಅಂತದ್ದೇ ಒಂದು ಸಿಚುವೇಷನ್ ಇಲ್ಲೊಬ್ಬ 9ನೇ ತರಗತಿ ಹುಡುಗನಿಗೆ ಆಗಿದ್ದು, ಆಮೇಲೇನಾಯ್ತು ಎಂಬುದೇ ಸದ್ಯಕ್ಕೆ ಇಂಟರೆಸ್ಟಿಂಗ್ ವಿಚಾರ ಮತ್ತು ಇದು ಈಗ ಎಲ್ಲಡೆ ವೈರಲ್ (Viral News) ಆಗುತ್ತಿರುವ ಸುದ್ದಿ!

ಬಿಹಾರದ (Bihar) ಮುಝಾಫರ್‌ಪುರದ (Muzaffarpur) 9ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಖಾತೆಯಿಂದ 500 ರೂಪಾಯಿಗಳನ್ನು ತೆಗೆಯಲೆಂದು ಸೈಬರ್ ಕೆಫೆಗೆ (Cyber Café) ಹೋಗಿ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಶಾ‍ಕ್ ಆಗುವ ಸರದಿ ಈ ಬಾಲಕನದ್ದಾಗಿತ್ತು.

ಮಾಧ್ಯಮ ವರದಿಗಳ ಪ್ರಕಾರ, ಸೈಫ್ ಅಲಿ ಎಂಬ 9ನೇ ತರಗತಿ ಬಾಲಕ ಸೈಬರ್ ಕೆಫೆಯೊಂದರಲ್ಲಿ ತನ್ನ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಅದು 87.65 ಕೋಟಿ ರೂಪಾಯಿಗಳ ಬ್ಯಾಲೆನ್ಸ್ ತೋರಿಸಿದೆ. ಸ್ವರ್ಗ ರಪ್ ಅಂತ ಒಂದು ಕ್ಷಣ ಪಾಸಾದ ಫೀಲಿನಲ್ಲಿ ಬಾಲಕ ಇನ್ನೊಮ್ಮೆ ಚೆಕ್ ಮಾಡಿದಾಗಲೂ ಅದೇ ಮೊತ್ತ ಕಾಣಿಸಿದೆ. ಇದನ್ನು ನೋಡಿ ಆ ಬಾಲಕ ಮತ್ತು ಸೈಬರ್ ಕೆಫೆ ಮಾಲಿಕ ಇಬ್ಬರೂ ಅಚ್ಚರಿಗೊಳಗಾಗಿದ್ದಾರೆ.

ತಕ್ಷಣವೇ, ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಲೆಂದು ಬಾಲಕ ಸೈಫ್ ಮನೆಗೆ ಓಡಿ ಬಂದು ವಿಷಯ ತಿಳಿಸಿದಾಗ, ಅವರು ನೇರವಾಗಿ ಗ್ರಾಹಕ ಸೇವಾ ಕೇಂದ್ರಕ್ಕೆ (CSP) ಬಂದು ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ ಬ್ಯಾಂಕ್ ಸ್ಟೇಟ್ಮೆಂಟ್ ತೆಗೆದ ಸಂದರ್ಭದಲ್ಲಿ ಅಲ್ಲಿ ಬ್ಯಾಲೆನ್ಸ್ ಕೇವಲ 532 ರೂಪಾಯಿಗಳು ತೋರಿಸುತ್ತಿತ್ತು. ಆಗ ರಪ್ ಅಂತ ಪಾಸಾದ ಸ್ವರ್ಗ ಈಗ ವಾಸ್ತವ ದರ್ಶನ ಮಾಡಿಸಿತ್ತು.

ಈ ಅನಿರೀಕ್ಷಿತ ಖುಷಿಯಾಘಾತದಿಂದ ಕ್ಷಣಕಾಲ ಚೇತರಿಸಿಕೊಂಡ ಬಾಲಕ ಮತ್ತು ಆತನ ಮನೆಯವರು ಈ ವಿಚಾರವ್ನು ನೇರವಾಗಿ ತಮ್ಮ ಅಕೌಂಟ್ ಇರುವ ಬ್ಯಾಂಕಿನ ಗಮನಕ್ಕೆ ತರುತ್ತಾರೆ. ಅಲ್ಲಿಯೂ ಅಕೌಂಟ್ ಚೆಕ್ ಮಾಡಿದ ಬ್ಯಾಂಕ್ ಅಧಿಕಾರಿಗಳು, ಆ ಬೃಹತ್ ಮೊತ್ತ ಕಣ್ಮರೆಯಾಗಿರುವುದನ್ನು ಕನ್ಫರ್ಮ್ ಮಾಡುತ್ತಾರೆ ಮತ್ತು ಬ್ಯಾಲೆನ್ಸ್ ಯಥಾಸ್ಥಿತಿಯಲ್ಲಿರುವುದು ಕಂಡುಬಂದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Viral News: ಥಂಡಿ ಹವಾಗೆ ‘ಥಂಡಿ’ ಹೊಡೆದ ವರ; ಮಂಟಪದಲ್ಲೇ ಮದುವೆ ಬೇಡವೆಂದ ವಧು! ಇದು ಮುರಿದ ಮದುವೆಯ ಕ(ವ್ಯ)ಥೆ!

ನಾರ್ತ್ ಬಿಹಾರ್ ಗ್ರಾಮೀಣ ಬ್ಯಾಂಕ್ ನಲ್ಲಿದ್ದ (North Bihar Gramin Bank) ಅಕೌಂಟ್ ನಲ್ಲಿ ಈ ಅಸಹಜ ಘಟನೆ ನಡೆದಿದ್ದು ಇದೀಗ ಆ ಬಾಲಕನ ಅಕೌಂಟ್ ನಲ್ಲಿ ಇಷ್ಟೊಂದು ದೊಡ್ಡ ಮೊತ್ತ ಹೇಗೆ ಕಾಣಿಸಿತು ಎಂಬುದನ್ನು ಕಂಡುಕೊಳ್ಳಲು ಬ್ಯಾಂಕ್ ಒಂದು ಆಂತರಿಕ ತನಿಖೆಗೆ ಆದೇಶಿಸಿದೆ. ಆದರೆ ಈ ಮಿಸ್ಟೇಕ್ ಮತ್ತು ಇದಕ್ಕೆ ಯಾರು ಕಾರಣರಾಗಿದ್ದರು ಎಂಬ ಬಗ್ಗೆ ಸಂಬಂಧಪಟ್ಟ ಬ್ಯಾಂಕ್ ಇದುವರೆಗೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

ಸೈಬರ್ ವಂಚನೆ (cyber fraud) ಮೂಲಕ ದೊಡ್ಡ ಮೊತ್ತದ ಹಣ ತಪ್ಪಿ ಇನ್ನೊಬ್ಬರ ಖಾತೆಗೆ ವರ್ಗಾವಣೆಗೊಂಡಿರುವ ಸಾಧ್ಯತೆಗಳಿವೆ, ಮತ್ತು ಇಂತಹ ಘಟನೆಗಳು ಅಸಹಜವಾದುದಲ್ಲ ಎಂದು ಸೈಬರ್ ಡಿ.ಎಸ್.ಪಿ. ಸೀಮಾ ದೇವಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಂಚಕರು ಈ ಬಾಲಕನ ಅಕೌಂಟನ್ನು ಕೆಲ ಕ್ಷಣಗಳವರೆಗೆ ಮಿಸ್ ಯೂಸ್ ಮಾಡಿರುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಾಲಕ ಸೈಫ್ ಮತ್ತು ಆತನ ಮನೆಯವರು ಇದುವರೆಗೂ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ.