ಲಖನೌ: ಮುಸ್ಲಿಂ ಕುಟುಂಬದ (Muslim family) ಮದುವೆ ಆಮಂತ್ರಣ (wedding invitation) ಪತ್ರಿಕೆಯಲ್ಲಿ ಹಿಂದೂ ದೇವರುಗಳಾದ ಶ್ರೀಕೃಷ್ಣ, ಗಣೇಶನ ಚಿತ್ರವನ್ನು ಮುದ್ರಿಸಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ. ಮದುವೆಯಲ್ಲಿ ಆಮಂತ್ರಿಸಲಿರುವ ಹಿಂದೂ ಸ್ನೇಹಿತರಿಗಾಗಿ ಈ ಕಾರ್ಡ್ ಮುದ್ರಿಸಿರುವುದಾಗಿ ಕುಟುಂಬ ಹೇಳಿದ್ದು, ಈ ಮೂಲಕ ಕೋಮು ಸೌಹಾರ್ದತೆಯ ಸಂದೇಶವನ್ನು ಸಾರುವುದಾಗಿ ತಿಳಿಸಿದೆ.
ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ತಿಲೋಯ್ ತೆಹ್ಸಿಲ್‌ನ ಪ್ಯೂರ್ ಅಲ್ಲಾದೀನ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿದೆ. ಆಮಂತ್ರಣ ಪತ್ರಿಕೆಯಲ್ಲಿ ವಧು, ವರ ಮತ್ತು ಕುಟುಂಬದ ಸದಸ್ಯರ ಹೆಸರು, ಮದುವೆಯ ವಿವರಗಳೊಂದಿಗೆ ಗಣೇಶ ಮತ್ತು ಶ್ರೀ ಕೃಷ್ಣನ ಚಿತ್ರಗಳನ್ನು ರಚಿಸಲಾಗಿದೆ. ಸಾಮರಸ್ಯದ ಸಾಂಕೇತ ನೀಡುವ ಈ ಕಾರ್ಡ್ ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
#BigNews 🚨 A #Muslim family from Amethi, UP has got a card printed for their daughter's wedding as per #Hindu customs. Photo of Hindu Lord #Ganesha is printed on the card. #Amethi #UttarPradeshNews pic.twitter.com/8BK2Xqbrbx
— Uday India Magazine (@Udayindiaonline) November 8, 2024
ಶಬ್ಬೀರ್ ಅವರು ತಮ್ಮ ಮಗಳು ಸೈಮಾ ಬಾನೊ ರಾಯ್ ಬರೇಲಿಯ ಮಹಾರಾಜ್ ಗಂಜ್ ಪ್ರದೇಶದ ಸೆನ್ಪುರ್ ಗ್ರಾಮದ ಇರ್ಫಾನ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಹೇಳಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಶಬ್ಬೀರ್, ಮದುವೆ ಕಾರ್ಡ್‌ನ ಎರಡು ಆವೃತ್ತಿಗಳನ್ನು ಮುದ್ರಿಸಿರುವುದಾಗಿ ತಿಳಿಸಿದರು. ಒಂದು ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತದೆ ಮತ್ತು ಇನ್ನೊಂದು ಇಸ್ಲಾಮಿಕ್ ಸಂಪ್ರದಾಯಗಳೊಂದಿಗೆ ಹೊಂದಾಣಿಕೆಯಾಗುತ್ತದೆ. ಹಿಂದೂ ಸ್ನೇಹಿತರಿಗೆ ಹಿಂದೂ ಕಾರ್ಡ್‌ಗಳನ್ನು ಮತ್ತು ಮುಸ್ಲಿಮರಿಗೆ ಮುಸ್ಲಿಂ ಕಾರ್ಡ್‌ಗಳನ್ನು ನೀಡುತ್ತಿದ್ದೇನೆ. ಧರ್ಮದ ವಿಷಯದಲ್ಲಿ ನಮಗೆ ಯಾವುದೇ ವಿವಾದವಿಲ್ಲ. ನಾವು ಒಗ್ಗಟ್ಟಿನಿಂದ ಬದುಕುತ್ತೇವೆ ಎಂದು ಅವರು ತಿಳಿಸಿದರು.
Viral News: ಪ್ರೀತಿಯ ಶ್ವಾನ ಕಣ್ಮರೆ; ಕಂಗಾಲಾದ ದಂಪತಿಯಿಂದ 50,000 ರೂ. ಬಹುಮಾನ ಘೋಷಣೆ!
ಹಿಂದೂ ಶೈಲಿಯ ಕಾರ್ಡ್‌ಗಳನ್ನು ತಮ್ಮ ಹಿಂದೂ ಸ್ನೇಹಿತರಿಗೆ ವಿತರಿಸುವ ಮೂಲಕ ಅವರು ಅದನ್ನು ಗೌರವಯುತವಾಗಿ ಇಟ್ಟುಕೊಳ್ಳುವ ಸಾಧ್ಯತೆಯಿದೆ. ಮುಸ್ಲಿಂ ಸ್ನೇಹಿತರು ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ಕಾರ್ಡ್ ಅನ್ನು ಮೆಚ್ಚುತ್ತಾರೆ. ನಮ್ಮೆಲ್ಲರ ದೇವರು ಒಂದೆ. ಆದರೆ ಪೂಜಿಸುವ ರೀತಿ ಬೇರೆಬೇರೆಯಷ್ಟೇ ಎಂದು ಶಬ್ಬೀರ್ ಹೇಳಿದ್ದಾರೆ.