ಕೊಲಂಬಿಯಾ: ಪ್ರಾಣಿ ಹಿಂಸೆ ಮಾಡುವುದು ಅಪರಾಧವೆನ್ನುತ್ತಾರೆ. ಅದರಲ್ಲೂ ಪ್ರಾಣಿಗಳ ಜೊತೆಗೆ ಲೈಂಗಿಕತೆಯಲ್ಲಿ ತೊಡಗಿದರೆ ಅದನ್ನು ಅಸ್ವಾಭಾವಿಕ ಲೈಂಗಿಕತೆ ಎಂದು ಘೋರ ಶಿಕ್ಷೆಗೆ ಒಳಪಡಿಸುತ್ತಾರೆ. ಆದರೆ ಇಲ್ಲೊಂದು ದೇಶದಲ್ಲಿ ಮದುವೆಗೂ ಮುನ್ನ ಕತ್ತೆಯ ಜೊತೆಗೆ ಲೈಂಗಿಕತೆ ಹೊಂದಿದರೆ ಮಾತ್ರ ಆತನು ಮದುವೆಯಾಗಲು ಯೋಗ್ಯ ಎಂದು ಪರಿಗಣಿಸುತ್ತಾರಂತೆ. ಇಂತಹ ವಿಚಿತ್ರ ಆಚರಣೆಗೆ ಕಾರಣವೇನು? ಇದನ್ನು ಎಲ್ಲಿ ಆಚರಿಸುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ. ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿದೆ.
ಕೆರಿಬಿಯನ್ ದೇಶದ ಕೊಲಂಬಿಯಾ ನಗರದ ಕಾರ್ಟೀಜಿನಾ ಪ್ರದೇಶದಲ್ಲಿ ಈ ಪದ್ಧತಿಯನ್ನು ಆಚರಿಸುತ್ತಾರಂತೆ. ಇದೊಂದು ಸಣ್ಣ ಪ್ರದೇಶವಾದರೂ ಕೂಡ ಇದು ಈ ವಿಚಿತ್ರ ಪದ್ಧತಿಯಿಂದಾಗಿ ಹೆಚ್ಚು ಪ್ರಸಿದ್ಧವಾಗಿದೆ. ಇಲ್ಲಿನ ಯುವಕರು ಮದುವೆಯಾಗುವ ಮೊದಲು ಕತ್ತೆಯ ಜೊತೆ ಲೈಂಗಿಕತೆಯನ್ನು ಹೊಂದಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ ಬಳಿಕ ಅವರು ಮದುವೆಗೆ ಯೋಗ್ಯರೆಂದು ಪರಿಗಣಿಸಲಾಗುತ್ತದೆ. ಇಂತಹವರಿಗೆ ಆ ಪ್ರದೇಶದ ಜನರು ಹೆಣ್ಣನ್ನು ನೀಡುತ್ತಾರಂತೆ. ಇದಕ್ಕೆ ಯುವತಿಯರು ಕೂಡ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ. ಈ ಪದ್ಧತಿಯನ್ನು ಅಲ್ಲಿನ ಜನರು ಕಾನೂನಿನಂತೆ ಪಾಲಿಸುತ್ತಾರಂತೆ.
ಈ ಪದ್ಧತಿಯ ಹಿಂದಿರುವ ಕಾರಣ:
ಈ ಪದ್ಧತಿ ಹಿಂದೆ ಅವರ ಒಂದು ವಿಚಿತ್ರವಾದ ನಂಬಿಕೆ ಇದೆ. ಅದೇನೆಂದರೆ ಕತ್ತೆಯ ಜೊತೆ ಯುವಕರು ಲೈಂಗಿಕ ಸಂಬಂಧ ಬೆಳೆಸಿದರೆ ಇದರಿಂದ ಅವರ ಖಾಸಗಿ ಭಾಗದ ಉದ್ದ ಹೆಚ್ಚಾಗುತ್ತದೆ. ಇದು ಮುಂದೆ ಅವರ ಪತ್ನಿಯ ಲೈಂಗಿಕ ಬಯಕೆಗಳನ್ನು ನೀಗಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಅವರ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ, ಮತ್ತು ಸುಖಕರವಾದ ದಾಂಪತ್ಯ ಜೀವನ ಸಾಗಿಸುತ್ತಾರೆ ಎಂಬ ನಂಬಿಕೆ ಅಲ್ಲಿನ ಜನರಲ್ಲಿದೆ. ಹಾಗೆಯೇ ಹುಡುಗ ಮುಂದೆ ಸಲಿಂಗಕಾಮಿ ಆಗುವುದಿಲ್ಲ ಎಂಬುದು ಅವರ ನಂಬಿಕೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಹುಡುಗರಿಗೆ ಕತ್ತೆಯ ಜೊತೆ ಲೈಂಗಿಕತೆ ಹೊಂದಲು ಪ್ರೇರೇಪಿಸುತ್ತಾರೆ. ವಿಶೇಷವೆಂದರೆ ಇಲ್ಲಿನ ವೈದ್ಯರು ಕೂಡ ಇದನ್ನು ನಂಬುತ್ತಾರೆ ಮತ್ತು ಮದುವೆಗೆ ಮೊದಲು ಕತ್ತೆ ಜೊತೆ ಸಂಬಂಧ ಬೆಳೆಸಲು ಯುವಕರ ಮೇಲೆ ವೈದ್ಯರು ಒತ್ತಡ ಹೇರುತ್ತಾರೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಈ ಸುದ್ದಿಯನ್ನೂ ಓದಿ: ಅಧಿಕಾರಿಗಳ ವೇಷ ಧರಿಸಿ ಚಿನ್ನದಂಗಡಿ ಮಾಲೀಕನ ಮನೆ ಲೂಟಿ ಮಾಡಿದ ಖತರ್ನಾಕ್ ಕಳ್ಳರು! ಕೊನೆಗೆ ಆಗಿದ್ದೇನು?
ಇಲ್ಲಿನ ಜನರು ಈ ಪದ್ಧತಿಯನ್ನು ನೂರಾರು ವರ್ಷಗಳ ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಇಂದಿಗೂ ಇದು ಈ ಪ್ರದೇಶದಲ್ಲಿ ರೂಢಿಯಲ್ಲಿದೆ. ಆದರೆ ಬೇರೆ ದೇಶದವರು ಇದನ್ನು ಅಪರಾಧವಾಗಿ ಪರಿಗಣಿಸುವುದರಿಂದ ಇಂತಹ ಕೆಟ್ಟ ಪದ್ಧತಿಯನ್ನು ನಿಲ್ಲಿಸಬೇಕೆಂದು ಹೇಳಿದ್ದಾರೆ.