Thursday, 26th December 2024

Viral News: ಸರ್ಕಾರದ ಕೋಟಿ ಕೋಟಿ ದುಡ್ಡು ಲೂಟಿ; ಗರ್ಲ್‌ಫ್ರೆಂಡ್‌ಗೆ BMW, 4BHK ಫ್ಲ್ಯಾಟ್‌ ಗಿಫ್ಟ್‌! ಹಗರಣ ಬಯಲಾಗ್ತಿದ್ದಂತೆ ಕಿಲಾಡಿ ಎಸ್ಕೇಪ್‌

ಮುಂಬೈ: ಮಹಾರಾಷ್ಟ್ರದ(Maharashtra) ಗುತ್ತಿಗೆ(Contract) ಸರ್ಕಾರಿ ನೌಕರನೊಬ್ಬ(Government Employee) ತಾನು ಕೆಲಸ ಮಾಡುವ ಇಲಾಖೆಗೆ ಕೋಟಿಗಟ್ಟಲೆ ವಂಚಿಸಿರುವ ಘಟನೆ ವರದಿಯಾಗಿದೆ. ಸರ್ಕಾರಕ್ಕೆ ಬರೋಬ್ಬರಿ 21 ಕೋಟಿ ರೂಪಾಯಿ ವಂಚಿಸಿದ್ದು, ಆ ಹಣದಿಂದ ತನ್ನ ಗೆಳತಿಗೆ ಐಷಾರಾಮಿ ಕಾರು, 4 BHK ಫ್ಲಾಟ್ ಮತ್ತು ಡೈಮಂಡ್‌ ಫ್ರೇಮ್‌ ಇರುವ ಕನ್ನಡಕವನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ(Viral News).

21 ಕೋಟಿ ರೂ. ವಂಚನೆ

13 ಸಾವಿರ ಗುತ್ತಿಗೆ ವೇತನಕ್ಕಾಗಿ ಕೆಲಸ ಮಾಡುತ್ತಿದ್ದ ಹರ್ಷ್ ಕುಮಾರ್ ಕ್ಷೀರಸಾಗರ್(Harsh Kumar Kshirsagar) ಎಂಬ ವ್ಯಕ್ತಿ ತನ್ನ ಪರಿಚಯಸ್ಥ ಸ್ನೇಹಿತರೊಂದಿಗೆ ಸೇರಿಕೊಂಡು ಸರ್ಕಾರಕ್ಕೆ  21 ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ್ದಾನೆ ಎಂಬ ಮಾಹಿತಿಯಿದೆ. ಕ್ಷೀರಸಾಗರ್ ತನ್ನ ಸ್ನೇಹಿತರ ಸಹಾಯದಿಂದ ಛತ್ರಪತಿ ಸಂಭಾಜಿನಗರದ ಕ್ರೀಡಾ ಇಲಾಖೆಗೆ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ಲಪಟಾಯಿಸಿದ್ದಾನೆ ಎನ್ನಲಾಗಿದೆ.

ಆರೋಪಿ ಹರ್ಷ್‌ ಕುಮಾರ್‌ ವಂಚಿಸಿದ ಹಣದಿಂದ ತನ್ನ ಗೆಳತಿಗಾಗಿ ಬಿಎಂಡಬ್ಲ್ಯು ಕಾರು, ಅದೇ ಬ್ರಾಂಡ್‌ನ ಬೈಕು ಮತ್ತು ವಿಮಾನ ನಿಲ್ದಾಣದ ಎದುರಿನ 4 ಬಿಎಚ್‌ಕೆ ಫ್ಲಾಟ್ ಅನ್ನು ಖರೀದಿಸಿದ್ದಾನೆ. ಅಷ್ಟೇ ಅಲ್ಲದೆ, ನಗರದ ಪ್ರಸಿದ್ಧ ಆಭರಣ ವ್ಯಾಪಾರಿಯಿಂದ ಡೈಮೆಂಡ್‌ ಫ್ರೇಮ್ ನ ಕನ್ನಡಕವನ್ನು ಖರೀದಿಸಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ಈ ವಂಚನೆಯಲ್ಲಿ ಭಾಗಿಯಾಗಿರುವ ಮತ್ತೋರ್ವ ಮಹಿಳಾ ಗುತ್ತಿಗೆ ಕಾರ್ಮಿಕರ ಪತಿ 35 ಲಕ್ಷ ರೂಪಾಯಿ ಮೌಲ್ಯದ ಎಸ್‌ಯುವಿ ಖರೀದಿಸಿರುವುದು ತನಿಖೆಯಿಂದ ತಿಳಿದುಬಂದಿದೆ . ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಮುಖ ಆರೋಪಿ ಹರ್ಷ್ ಕುಮಾರ್ ಅನಿಲ್ ಕ್ಷೀರಸಾಗರ್ ಎಸ್‌ಯುವಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಸರ್ಕಾರಿ ಹಣಕ್ಕಾಗಿ ಇಂಡಿಯನ್ ಬ್ಯಾಂಕ್‌ನಲ್ಲಿ ಕ್ರೀಡಾ ಇಲಾಖೆಯ ಹೆಸರಿನಲ್ಲಿ ಖಾತೆ ತೆರೆಯುವ ಮೂಲಕ ಆರೋಪಿಗಳು ವಂಚನೆ ನಡೆಸಿದ್ದಾರೆ. ಹಣದ ವಹಿವಾಟುಗಳಿಗೆ ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಸಹಿ ಮಾಡಿದ ಚೆಕ್‌ಗಳ ಅಗತ್ಯವಿತ್ತು. ಆದರೆ ಹರ್ಷಕುಮಾರ್ ಕ್ಷೀರಸಾಗರ್ ಮತ್ತು ಇತರ ಇಬ್ಬರು ಗುತ್ತಿಗೆ ನೌಕರರಾದ ಯಶೋದಾ ಶೆಟ್ಟಿ ಮತ್ತು ಅವರ ಪತಿ ಬಿಕೆ ಜೀವನ್ ಅವರು ಬ್ಯಾಂಕ್‌ಗೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ನಕಲಿ ದಾಖಲೆಗಳನ್ನು ಬಳಸಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಸಕ್ರಿಯಗೊಳಿಸಿದ ನಂತರ ಅವರ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಲಾಖಾ ಉಪನಿರ್ದೇಶಕರು ಪತ್ತೆ ಹಚ್ಚುವ ಮುನ್ನಈ ವಂಚನೆ ಚಟುವಟಿಕೆಗಳು ಆರು ತಿಂಗಳುಗಳಿಂದ ನಡೆದಿವೆ. ಈ ಪ್ರಕರಣ ಸಂಬಂಧ ಪೊಲೀಸರ ಹೇಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ:Child death: ಕಾರು ರಿವರ್ಸ್ ತೆಗೆಯುವಾಗ ಚಕ್ರಕ್ಕೆ ಸಿಲುಕಿ ಅಸುನೀಗಿದ 2 ವರ್ಷದ ಮಗು