Tuesday, 7th January 2025

Viral News: ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮಾಲೀಕನಿಗಾಗಿ ಕಣ್ಣೀರು ಸುರಿಸಿದ ನೆಚ್ಚಿನ ಶ್ವಾನ; ಈ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ…?

Viral News

ಕೆಲವು ದಿನಗಳ ಹಿಂದೆಯಷ್ಟೇ ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದ ವಿಮಾನವೊಂದು  ಅಪಘಾತಕ್ಕೀಡಾಗಿ 179 ಜನರು ಸಾವನ್ನಪ್ಪಿದ್ದರು. 80 ವರ್ಷದ ಮಾಲೀಕ ಮತ್ತು ಅವರ ಇತರ ಎಂಟು ಕುಟುಂಬ ಸದಸ್ಯರು ಈ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಇದೀಗ ಅವರ ಪ್ರೀತಿಯ ಶ್ವಾನ ತನ್ನ ಮಾಲೀಕ ಮತ್ತು ಆತನ ಕುಟುಂಬದವರ ಸ್ಮಾರಕಕ್ಕೆ ಭೇಟಿ ನೀಡಿ ಕಣ್ಣೀರು ಸುರಿಸಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ವಿಮಾನ ಪ್ರಯಾಣದ ವೇಳೆ ಮಾಲೀಕ ತನ್ನ ಸಾಕು ನಾಯಿ ಪುಡ್ಡಿಂಗ್ ಅನ್ನು  ಹಳ್ಳಿಯಲ್ಲಿ ಬಿಟ್ಟು ಹೋಗಿದ್ದಾನಂತೆ. ಆದರೆ ಈ ಕುಟುಂಬವು ಥೈಲ್ಯಾಂಡ್ ಪ್ರವಾಸದಿಂದ ಹಿಂದಿರುಗುತ್ತಿದ್ದಾಗ, ಅವರ ಪ್ರಯಾಣಿಸುತ್ತಿದ್ದ ಜೆಜು ಏರ್ ವಿಮಾನವು ಮುವಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಇದರಿಂದ ಅವರೆಲ್ಲರೂ ಸಾವಿಗೀಡಾಗಿದ್ದಾರೆ.

ವಿಮಾನ ಅಪಘಾತದಲ್ಲಿ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದುಕೊಂಡ ನಂತರ ಪುಡ್ಡಿಂಗ್ ಅನಾಥವಾಯಿತು. ಅದನ್ನು ಅಲ್ಲಿಂದ ರಕ್ಷಿಸುವವರೆಗೂ ಅದು ತನ್ನ ಪ್ರೀತಿಪಾತ್ರರಿಗಾಗಿ ಕಾಯುತ್ತಾ ಹಳ್ಳಿಯಲ್ಲಿ ಅಲೆದಾಡುತ್ತಿರುವುದು ಕಂಡುಬಂದಿದೆ. ಭಾನುವಾರ, ನಾಯಿಯನ್ನು ಅದರ ಮೃತ ಕುಟುಂಬ ಸದಸ್ಯರಿಗೆ ಅಂತಿಮ ಗೌರವ ಸಲ್ಲಿಸಲು ಸಿಯೋಲ್ ಸಿಟಿ ಹಾಲ್‍ಗೆ ಕರೆದೊಯ್ಯಲಾಯಿತು.

ನಾಯಿ  ಜೆಜು ವಿಮಾನ ಅಪಘಾತದಲ್ಲಿ ಬಲಿಯಾದವರ ಜಂಟಿ ಸ್ಮಾರಕಕ್ಕೆ ಭೇಟಿ ನೀಡಿತು, ಮತ್ತು ಸ್ಮಾರಕವನ್ನು ನೋಡುತ್ತಾ ಕಣ್ಣೀರು ಸುರಿಸಿದೆ.  ಪುಡ್ಡಿಂಗ್ ಆವರಣದಲ್ಲಿ ಬೊಗಳಲಿಲ್ಲ ಅಥವಾ ಜಿಗಿಯಲಿಲ್ಲ, ಬದಲಾಗಿ ಅದು  ಮೌನವಾಗಿ ಕುಳಿತಿರುವುದನ್ನು ಹಲವರು ಗಮನಿಸಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:ಹುಲಿ.. ಸಿಂಹಗಳೇ ತುಂಬಿರುವ ಕಾಡಿನಲ್ಲಿ ಕಳೆದುಹೋದ 8 ವರ್ಷದ ಬಾಲಕ- ಈತ ಬದುಳಿದ ಕಥೆಯೇ ರಣರೋಚಕ!

ಅಪಘಾತವಾದ ಕೆಲವು ದಿನಗಳ ನಂತರ ಪುಡ್ಡಿಂಗ್ ಹಳ್ಳಿಯಲ್ಲಿ ಅಲೆದಾಡುತ್ತಿದ್ದು, ಇದೀಗ ಪ್ರಾಣಿ ಹಕ್ಕುಗಳ ತಂಡ ‘ಕೇರ್’ ಈ  ಸಾಕು ನಾಯಿಗೆ ಆಶ್ರಯ ನೀಡಿದೆ. ಕೇರ್ ಅಧಿಕಾರಿಯೊಬ್ಬರು, “ಪುಡ್ಡಿಂಗ್ ಸಮುದಾಯ ಕೇಂದ್ರದಲ್ಲಿ ಸುಮ್ಮನೆ ಕುಳಿತಿತ್ತು. ಆದರೆ ಅದು ಕುಟುಂಬಕ್ಕಾಗಿ ಕಾಯುತ್ತಿರುವಾಗ ನಮ್ಮನ್ನು ನೋಡಿ  ಸಂತೋಷದಿಂದ ನಮ್ಮ ಬಳಿಗೆ ಓಡಿಬಂದಿದೆ. ನಾಯಿ ಅಲೆದಾಡುತ್ತಿರುವುದನ್ನು ನೋಡಿ, ನಾವು ಅದನ್ನು ರಕ್ಷಿಸಲು ನಿರ್ಧರಿಸಿದೆವು ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *