Thursday, 28th November 2024

Viral News: ವಿಶ್ವದಲ್ಲೇ ಅತೀ ಉದ್ದದ ಮೂಗು ಹೊಂದಿದ್ದ ವ್ಯಕ್ತಿಯ ಫೋಟೋ ಈಗ ಭಾರೀ ವೈರಲ್! ಅಷ್ಟಕ್ಕೂ ಯಾರೀತಾ?

Viral News

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ವಿಚಿತ್ರವಾದ ಘಟನೆಗಳು ಕಂಡುಬರುತ್ತವೆ. ಈ ಬಾರಿ, ಅತೀ ಉದ್ದದ ಮೂಗು ಹೊಂದಿರುವ ವ್ಯಕ್ತಿಯ ಪೋಟೊ ವೈರಲ್(Viral News) ಆಗಿದೆ. ಹಿಸ್ಟಾರಿಕ್ ವಿಡ್ಸ್ ಎಂಬ ಟ್ವಿಟರ್ ಪೇಜ್‍ನಲ್ಲಿ ರಿಪ್ಲೆಯ ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಥಾಮಸ್ ವೆಡ್ಡರ್ಸ್ ಅವರ  ಮೇಣದಿಂದ ಮಾಡಿದ ತಲೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ತಿಳಿದು ಬಳಕೆದಾರರು ದಿಗ್ಭ್ರಮೆಗೊಂಡಿದ್ದಾರೆ.  ಹಾಗಾಗಿ ಇದೀಗ  ಥಾಮಸ್ ವೆಡ್ಡರ್ಸ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು  ಗಮನ ಸೆಳೆದಿದ್ದಾರೆ.

ನವೆಂಬರ್ 12ರ ಟ್ವೀಟ್‍ನಲ್ಲಿ, ವೆಡ್ಡರ್ಸ್ ಅವರ ಮೂಗು 7.5 ಇಂಚು ಉದ್ದವಿದೆ ಎಂದು ಟ್ವಿಟರ್ ಹ್ಯಾಂಡಲ್ ಹೇಳಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ವೆಬ್ಸೈಟ್‍ನಲ್ಲಿ ಇವರ ಬಗ್ಗೆ ಮಾಹಿತಿ ನೀಡುವ ಪುಟವೂ ಇದೆ. ಅದರಲ್ಲಿ ಅವರು “ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯ” ಎಂದು ಹೇಳಲಾಗಿದೆ.

“ಥಾಮಸ್ ವೆಡ್ಡರ್ಸ್ 18 ನೇ ಶತಮಾನದಲ್ಲಿ ವಾಸಿಸುತ್ತಿದ್ದ ಇಂಗ್ಲಿಷ್ ಸರ್ಕಸ್ ಪ್ರದರ್ಶಕರಾಗಿದ್ದರು. ಅವರು 7.5 ಇಂಚು (19 ಸೆಂ.ಮೀ) ಉದ್ದದ ವಿಶ್ವದ ಅತೀ ಉದ್ದದ ಮೂಗನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದ್ದರು. ಎಂದು ಹಿಸ್ಟಾರಿಕ್ ವಿಡ್ಸ್ ತನ್ನ ಟ್ವೀಟ್‍ನಲ್ಲಿ ತಿಳಿಸಿದೆ.ಈ ಟ್ವೀಟ್ ಅನ್ನು ಸುಮಾರು 1.20 ಲಕ್ಷ ಬಳಕೆದಾರರು ಲೈಕ್ ಮಾಡಿದ್ದಾರೆ ಮತ್ತು 7,200 ಕ್ಕೂ ಹೆಚ್ಚು ಬಳಕೆದಾರರು ರಿಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಭಾರತದ ಹಜ್ಮೋಲಾ ತಿಂದ ಜಪಾನಿಯರ ರಿಯಾಕ್ಷನ್‌ ಹೇಗಿತ್ತು? ಸಖತ್‌ ವೈರಲ್‌ ಆಗ್ತಿದೆ ಈ ವಿಡಿಯೊ

ಹಾಗೇ ಜಿಡಬ್ಲ್ಯೂಆರ್ ತನ್ನ ವೆಬ್ಸ್‌ಸೈಟ್‌ನಲ್ಲಿ ವೆಡ್ಡರ್ಸ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “1770 ರ ದಶಕದಲ್ಲಿ ಇಂಗ್ಲೆಂಡ್‍ನಲ್ಲಿ ವಾಸಿಸುತ್ತಿದ್ದ ಮತ್ತು ಫ್ರೀಕ್ ಸರ್ಕಸ್‍ನ ಸದಸ್ಯರಾಗಿದ್ದ ಥಾಮಸ್ ವೆಡ್ಡರ್ಸ್ 19 ಸೆಂ.ಮೀ (7.5 ಇಂಚು) ಉದ್ದದ ಮೂಗನ್ನು ಹೊಂದಿದ್ದರು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ ಎನ್ನಲಾಗಿದೆ. 

ಆದರೆ ಟರ್ಕಿಯ ಮೆಹ್ಮೆತ್ ಒಜ್ಯುರೆಕ್ ಅವರು ಅತೀ ಉದ್ದದ ಮೂಗಿನ್ನು ಹೊಂದಿರುವ ಜೀವಂತ ವ್ಯಕ್ತಿಯಾಗಿ ದಾಖಲೆ ಸೇರಿದ್ದಾರೆ. ಇವರು 3.46 ಇಂಚುಗಳಷ್ಟು ಉದ್ದದ ಮೂಗನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಜಿಡಬ್ಲ್ಯೂಆರ್ ದೃಢಪಡಿಸಿತು . ಉದ್ದ ಮೂಗಿಗಾಗಿ ಮೆಹ್ಮೆತ್ ಅವರು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದರು. ಮೊದಲು 2001 ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, 2010ರಲ್ಲಿ ಇಟಲಿಯಲ್ಲಿ ಪ್ರೈಮ್‌ಟೈಮ್‌ ದಾಖಲೆ, ಹಾಗೂ  ಲೋ ಶೋ ಡೀ ರೆಕಾರ್ಡ್ ಸೆಟ್‌ನಲ್ಲಿ 2021 ರಲ್ಲಿ ದಾಖಲೆ ಮಾಡಿದ್ದರು. ಆದರೆ ಕಳೆದ ವರ್ಷ ಮೆಹ್ಮೆತ್ ಅನಾರೋಗ್ಯಕ್ಕೆ ಒಳಗಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದಾರೆ.