Friday, 10th January 2025

Viral News: ಅಬ್ಬಬ್ಬಾ… 2,10,42,08,405 ರೂಪಾಯಿ ವಿದ್ಯುತ್‌ ಬಿಲ್;‌ ಉದ್ಯಮಿ ತಬ್ಬಿಬ್ಬು!

ಶಿಮ್ಲಾ:ಹಿಮಾಚಲ ಪ್ರದೇಶದ(Himachala Pradesh) ಹಮೀರ್‌ಪುರ(Hamirpur) ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಇನ್ನೂರು ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಬಂದಿದ್ದು,ಬಿಲ್‌ ನೋಡಿ ಅವರು ಆಘಾತಕ್ಕೊಳಗಾಗಿದ್ದಾರೆ. ಇದೀಗ ಆ ಸುದ್ದಿ ಭಾರೀ ವೈರಲ್‌ ಆಗಿದೆ(Viral News)

ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಕಾಂಕ್ರೀಟ್ ಇಟ್ಟಿಗೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮದ ಮಾಲೀಕರು 210 ಕೋಟಿ ರೂ.ಗಳ ವಿದ್ಯುತ್ ಬಿಲ್​ ಪಡೆದಿದ್ದಾರೆ. ಬಿಲ್ ನೋಡಿದ ಉದ್ಯಮ ಮಾಲೀಕರು ತಬ್ಬಿಬ್ಬಾಗಿದ್ದಾರೆ. ಕೂಡಲೇ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. 2,10,42,08,405 ರೂಪಾಯಿ ವಿದ್ಯುತ್ ಬಿಲ್ ನೋಡಿ ಉದ್ಯಮಿ ಅಕ್ಷರಶಃ ಆಘಾತಗೊಂಡಿದ್ದಾರೆ.(Electricity Bill)

ವಿದ್ಯುತ್ ಇಲಾಖೆಯ ಉದ್ಯಮಿಯೊಬ್ಬರಿಗೆ 210 ಕೋಟಿ ರೂ.ಗಳ ಬೃಹತ್ ಬಿಲ್ ಕಳುಹಿಸಿದೆ. ಬಿಲ್ ನೋಡಿದ ಉದ್ಯಮಿ ಕೆಲಕಾಲ ಪ್ರಜ್ಞೆ ತಪ್ಪಿದ್ದರು ಎನ್ನಲಾಗಿದೆ. ಆದರೆ, ದೂರಿನ ನಂತರ ವಿದ್ಯುತ್ ಇಲಾಖೆ ಬಿಲ್ ಸರಿಪಡಿಸಿದೆ ಎಂಬ ಮಾಹಿತಿಯಿದೆ. ಇದು ಹಮೀರ್‌ಪುರದ ಭೋರಂಜ್ ಉಪವಿಭಾಗದ ಬೆಹದ್ವಿನ್ ಜತ್ತನ್ ಗ್ರಾಮದಲ್ಲಿ ನಡೆದ ಘಟನೆಯಾಗಿದೆ. ಇಲ್ಲಿ ಉದ್ಯಮಿ ಲಲಿತಾ ಧಿಮಾನ್ ಕಾಂಕ್ರೀಟ್ ಇಟ್ಟಿಗೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮವನ್ನು ನಡೆಸುತ್ತಿದ್ದಾರೆ. ಲಲಿತಾ ಅವರಿಗೆ ವಿದ್ಯುತ್ ಇಲಾಖೆ 210 ಕೋಟಿ ರೂ.ಗೂ ಹೆಚ್ಚು ವಿದ್ಯುತ್ ಬಿಲ್ ಕಳುಹಿಸಿದೆ. ಈ ವೇಳೆ ಮಹಿಳಾ ಉದ್ಯಮಿ 2,10,42,08,405 ರೂಪಾಯಿ ಬಿಲ್ ನೋಡಿದಾಗ ದಿಗ್ಭ್ರಮೆಗೊಂಡಿದ್ದಾರೆ.

ವಿದ್ಯುಚ್ಛಕ್ತಿ ಮಂಡಳಿ ನೌಕರ ಅವರಿಗೆ ಕೋಟ್ಯಂತರ ರೂಪಾಯಿ ಬಿಲ್ ನೀಡಿದ್ದು, ಬಳಿಕ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಬಳಿಕ ಇದೀಗ 4,047 ರೂಪಾಯಿ ಬಿಲ್ ಬಂದಿದೆ. ಘಟನೆ ಕುರಿತು ವಿದ್ಯುತ್ ಮಂಡಳಿ ಭೋರಂಜ್‌ನ ಎಸ್‌ಡಿಒ ಅನುರಾಗ್ ಚಾಂಡೇಲ್ ಮಾತನಾಡಿ, ತಾಂತ್ರಿಕ ಕಾರಣಗಳಿಂದ ಇಷ್ಟು ಬಿಲ್ ಬಂದಿದೆ. ದೂರು ಸ್ವೀಕರಿಸಿ ಬಿಲ್ ಸರಿಪಡಿಸಿ ಇದೀಗ ಗ್ರಾಹಕರಿಗೆ 4047 ರೂ. ಬಿಲ್ ನೀಡಲಾಗಿದೆ ಎಂದಿದ್ದಾರೆ.

ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಕೆಲವರು ಇದನ್ನು ವಿದ್ಯುತ್ ಸಬ್ಸಿಡಿಗೂ ಲಿಂಕ್ ಮಾಡಿದ್ದಾರೆ. ನೆಟ್ಟಿಗರು ಸಾಕಷ್ಟು ಚರ್ಚೆ ನಡೆಸಿದ್ದಾರೆ.

3,419 ಕೋಟಿ ರೂ. ವಿದ್ಯುತ್ ಬಿಲ್

ಕೆಲ ವರ್ಷಗಳ ಹಿಂದೆಯಷ್ಟೇ ಮಧ್ಯಪ್ರದೇಶದ ಗ್ವಾಲಿಯರ್‌ ನಿವಾಸಿ ಪ್ರಿಯಾಂಕಾ ಗುಪ್ತಾ ಎಂಬುವವರಿಗೆ ₹ 3,419 ಕೋಟಿಯಷ್ಟು ವಿದ್ಯುತ್‌ ಬಿಲ್‌ ಬಂದಿತ್ತು. ಬಿಲ್ ನೋಡಿದ ಪ್ರಿಯಾಂಕಾ ಅವರ ಮಾವ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿತ್ತು.

ಟೆಕ್ನಿಕಲ್‌ ದೋಷದಿಂದ ಹೀಗಾಗಿದೆ ಎನ್ನಲಾಗಿತ್ತು. ಸರಿಪಡಿಸಿದ ಬಿಲ್ ನೀಡಿದ್ದು, ಅದರಲ್ಲಿ ₹ 1,300 ಅನ್ನು ಪಾವತಿಸಬೇಕಿದೆ ಎಂದಿತ್ತು. ಹೊಸ ಬಿಲ್ ನಗರದ ಶಿವ ವಿಹಾರ್ ಕಾಲೋನಿ ನಿವಾಸದಲ್ಲಿರುವ ಗುಪ್ತಾ ಕುಟುಂಬದ ಆತಂಕವನ್ನು ನಿವಾರಿಸಿತ್ತು.

ಈ ಸುದ್ದಿಯನ್ನೂ ಓದಿ:Raichur News: ಲಿಂಗಸುಗೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ಕೊಲೆ ಶಂಕೆ

Leave a Reply

Your email address will not be published. Required fields are marked *