ಮುಂಬೈ: ಪ್ರಖ್ಯಾತ ಯೂಟ್ಯೂಬರ್ ಮಿಥಿಲೇಶ್ ಬ್ಯಾಕ್‌ಪ್ಯಾಕರ್(Mithilesh Backpacker) ಅವರ ರಷ್ಯನ್ ಮೂಲದ ಪತ್ನಿ ರಾಜಸ್ಥಾನದ ಉದಯಪುರದಲ್ಲಿ ಕಿಡಿಗೇಡಿಗಳಿಂದ ಅವಮಾನಕ್ಕೊಳಗಾದರು. ಆ ಘಟನೆಯ ಬೆನ್ನಲ್ಲೇ ಸ್ಟ್ಯಾಂಡ್-ಅಪ್ ಹಾಸ್ಯನಟ ಹರ್ಷ್ ಗುಜ್ರಾಲ್(Harsh Gujral) ಅವರು ತಮ್ಮ ಸ್ಟಾಂಟ್-ಅಪ್ ಕಾಮಿಡಿ ಪ್ರದರ್ಶನವೊಂದರಲ್ಲಿ ವೀಕ್ಷಕನೊಬ್ಬನಿಗೆ ಆರು ಸಾವಿರಕ್ಕೆ ರಷ್ಯನ್ ಹುಡುಗಿ ಸಿಗುತ್ತಾಳೆ ಎಂದು ಹೇಳಿರುವ ಹೇಳಿಕೆ ಇದೀಗ ಭಾರೀ ಟೀಕೆಗೆ ಗುರಿಯಾಗಿದ್ದಾರೆ(Viral News)
This one line is Harsh Gujral's entire career https://t.co/9VWnAtaplq
— mighty 🍉 (@MightBeing) January 10, 2025
ಭಾರತ ಮೂಲದ ಮಿಥಿಲೇಶ್ ಎಂಬ ಯೂಟ್ಯೂಬರ್ ತಮ್ಮ ರಷ್ಯನ್ ಮೂಲದ ಹೆಂಡತಿಯೊಂದಿಗೆ ರಾಜಸ್ಥಾನದ ಉದಯಪುರ ಕೋಟೆಯನ್ನು ತೋರಿಸಲು ಪ್ರವಾಸಕ್ಕೆ ಕರೆತಂದಾಗ ಅಲ್ಲಿನ ಕೆಲ ಕಿಡಿಗೇಡಿ ಯುವಕರ ಗುಂಪೊಂದು ಅವರ ಹೆಂಡತಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದೆ. “6000 ರೇಟ್ ಕೊಡ್ತೀವಿ ಬರ್ತೀಯಾ?ʼ ಎಂದು ಹೇಳಿ ಅವಮಾನ ಮಾಡಿದ್ದಾರೆ. ಮಿಥಿಲೇಶ್ ಈ ಬಗ್ಗೆ ದೂರು ನೀಡಿದ್ದಾರೆ. ಭಾರತದಲ್ಲಿ ವಿದೇಶಿ ಪತ್ನಿಯರನ್ನು ಕರೆದುಕೊಂಡು ಪ್ರವಾಸ ಮಾಡಲು ಸಾಧ್ಯವಿಲ್ಲ ಎಂದು ಯುವಕ ತಮ್ಮ ಸ್ವದೇಶದ ವಿರುದ್ಧವೇ ಅಳಲು ತೋಡಿಕೊಂಡಿದ್ದಾರೆ.
“ರಾಜಸ್ಥಾನದ ಉದಯಪುರಕ್ಕರ ಭೇಟಿ ನೀಡಲು ಬಂದಿದ್ದ ವೇಳೆ ಕೆಲ ಯುವಕರು ನನ್ನ ರಷ್ಯನ್ ಪತ್ನಿಯ ಮೇಲೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ ಈ ದೇಶದಲ್ಲಿ ಪತ್ನಿಯೊಂದಿಗೆ ಓಡಾಡುವುದು ಕೂಡ ಕಷ್ಟವಾಗಿದೆ” ಎಂದು ಯೂಟ್ಯೂಬರ್ ಹೇಳಿರುವ ವಿಡಿಯೊ ಯೂಟ್ಯೂಬ್‌ನಲ್ಲಿ ಭಾರೀ ವೈರಲ್ ಆಗಿದೆ. ಕಳೆದ 6 ದಿನಗಳ ಹಿಂದೆ ಶೇರ್ ಮಾಡಿದ್ದ ಯೂಟ್ಯೂಬರ್ ಮಿಥಿಲೇಶ್ ಬ್ಯಾಕ್ ಪ್ಯಾಕರ್ ಅವರ ವಿಡಿಯೊವನ್ನು ಈಗಾಗಲೇ 2.5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಉದಯಪುರದ ಸಿಟಿ ಪ್ಯಾಲೇಸ್‌ನಲ್ಲಿ ತನಗೆ ಇಂತಹ ಅನುಭವವಾಗಿದೆ ಎಂದು ಹೇಳಿದ ಅವರು ಘಟನೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ನಡುವೆ ಖ್ಯಾತ ಸ್ಟಾಂಡ್-ಅಪ್ ಕಾಮಿಡಿಯನ್ ಹರ್ಷ ಗುಜ್ರಾಲ್ ವೇದಿಕೆಯೊಂದರಲ್ಲಿ ತಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬನಲ್ಲಿ “ಆರು ಸಾವಿರಕ್ಕೆ ರಷ್ಯನ್ ಹುಡುಗಿ ಸಿಗುತ್ತಾಳೆ ಬೇಕಾ? ಎಂಬಂಥ ಮಾತುಗಳನ್ನು ಹಾಸ್ಯದ ದಾಟಿಯಲ್ಲಿ ಹೇಳಿದ್ದಾರೆ. ಆದರೆ ನೆಟ್ಟಿಗರು ಯೂಟ್ಯೂಬರ್ ಘಟನೆಯನ್ನು ಪ್ರಸ್ತಾಪಿಸಿ ಕಾಮಿಡಿಯನ್ ರಷ್ಯನ್ ಮಹಿಳೆಯರನ್ನು ಹೀಯಾಳಿಸಿದ್ದಾನೆ ಎಂದು ಟೀಕೆ ಮಾಡಿದ್ದಾರೆ. ಇಂತಹ ಹಾಸ್ಯದಿಂದಾಗಿ ಜನ ರಷ್ಯನ್ ಮಹಿಳೆಯರನ್ನು ಕೇವಲವಾಗಿ ನೋಡುತ್ತಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಇದೀಗ ಯೂಟ್ಯೂಬರ್ ವಿಡಿಯೊ ಮತ್ತು ಹರ್ಷ ಗುಜ್ರಾಲ್ ಅವರ ಮಾತಿನ ವಿಡಿಯೊ ಎರಡೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಯಾಗಿ ಹರಿದಾಡುತ್ತಿದೆ.
ಈ ಸುದ್ದಿಯನ್ನೂ ಓದಿ:Viral Video: ಲೈವ್ ಸಂದರ್ಶನದ ವೇಳೆ ಕಾಲಿಗೆ ಗುಂಡು ಹಾರಿಸಿಕೊಂಡ ರ‍್ಯಾಪರ್; ವಿಡಿಯೊ ವೈರಲ್