ನವದೆಹಲಿ: ಹೊಸ ವರ್ಷದ ಸಂದರ್ಭದಲ್ಲಿ ಬ್ಲಿಂಕಿಟ್‌ನಲ್ಲಿ ಜನ ಹೆಚ್ಚು ಆರ್ಡರ್ ಮಾಡಿದ್ದು ಕಾಂಡೋಮ್ ಎನ್ನುವ ಬಗ್ಗೆ ಬ್ಲಿಂಕಿಟ್ ಸಿಇಒ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಕುರಿತಾಗಿ ಹಲವು ನೆಟ್ಟಿಗರು ಮಹಿಳೆಯರ ಕುರಿತಾಗಿ ಅವಹೇಳನಕಾರಿ ಪೋಸ್ಟ್ ಹಾಕಿದ ನಂತರ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಎಕ್ಸ್ ಬಳಕೆದಾರರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ(Viral News).
ಹೊಸ ವರ್ಷದ ಸಂದರ್ಭದಲ್ಲಿ ಭಾರತದಾದ್ಯಂತ 1.2 ಲಕ್ಷ ಕಾಂಡೋಮ್‌ಗಳನ್ನು ವಿತರಿಸಲಾಗಿದೆ ಎನ್ನುವ ಬ್ಲಿಂಕಿಟ್‌ನ ಸಿಇಒ ಪೋಸ್ಟ್‌ಗೆ ವೆನಮ್ ಅನ್ನುವ ಬಳಕೆದಾರ ಪ್ರತಿಕ್ರಿಯೆ ನೀಡಿದ್ದು ಈ ಪೀಳಿಗೆಯಲ್ಲಿ ಮದುವೆಯಾಗಲು ಕನ್ಯೆಯನ್ನು ಹುಡುಕುವ ಅದೃಷ್ಟ ಎಂದು ಬರೆದಿದ್ದರು ಈ ಕಾಮೆಂಟಿಗೆ ನಟಿ ಚಿನ್ಮಯಿ ಗರಂ ಆಗಿದ್ದಾರೆ.
ಈ ಕಾಮೆಂಟಿನ ಸ್ಕ್ರೀನ್‌ಶಾಟ್ ಅನ್ನು ಲಗತ್ತಿಸಿ ಗಾಯಕಿ ಚಿನ್ಮಯಿ ಶ್ರೀಪಾದ ಹೀಗೆ ಬರೆದಿದ್ದಾರೆ, “ಪುರುಷರು ಮಹಿಳೆಯರೊಂದಿಗೆ ಸೆಕ್ಸ್ ಮಾಡುತ್ತಾರೆ”ಮತ್ತೆ ಪುರುಷರು ತಮಗೆ ಕನ್ಯೆಯರು ಬೇಕು ಎಂದು ದೂರುತ್ತಾರೆ. ಪುರುಷರು ಮಹಿಳೆಯರೊಂದಿಗೆ ಮದುವೆಗೆ ಮೊದಲು ಸಂಭೋಗ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ,ಮದುವೆಯ ತನಕ ಎಂದಿಗೂ ಲೈಂಗಿಕವಾಗಿ ಇರಬಾರದು ಎಂದು ನಿಮ್ಮ ಸಹೋದರರು ಮತ್ತು ಪುರುಷ ಸ್ನೇಹಿತರಿಗೆ ಹೇಳಿ ಎಂದು ಬರೆದು ಕೊಂಡಿದ್ದಾರೆ.
ಖ್ಯಾತ ಗಾಯಕಿ ಚಿನ್ಮಯಿ ಮಹಿಳೆಯ ಪರ ಸದಾ ಧ್ವನಿ ಎತ್ತುವ ಸ್ತ್ರೀವಾದಿ ಆಗಿದ್ದು ಮಹಿಳೆಯರ ಕುರಿತಾಗಿ ಅವಹೇಳನ ಪ್ರತಿಕ್ರಿಯೆ ನೀಡಿದ್ರೆ ಧ್ವನಿ ಎತ್ತುತ್ತಾರೆ. ಅವರು ಚಿತ್ರರಂಗದಲ್ಲಿ ಮಾತ್ರವಲ್ಲದೇ ಸಮಾಜದಲ್ಲಿ ಎಲ್ಲಿಯಾದರೂ ಹೆಣ್ಣುಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದರೆ ತಕ್ಷಣವೇ ಸಾಮಾಜಿಕ ಜಾಲತಾಣಗಳ ಮೂಲಕ ಧ್ವನಿ ಎತ್ತುತ್ತಾರೆ.ಇದೀಗ ಈ ವಿಚಾರವಾಗಿಯು ಗಾಯಕಿ ಸೋಷಿಯಲ್ ಮೀಡಿಯಾದಲ್ಲಿ ಅಕ್ರೋಶ ಹೊರ ಹಾಕಿದ್ದಾರೆ. ಮಹಿಳೆಯರದ್ದೇ ತಪ್ಪು ಎಂದು ಹೇಳುವುದು ಸರಿಯಲ್ಲ. ಸಾರ್ವಜನಿಕವಾಗಿ ಪುರುಷರ ಸಮೂಹದ ಬಗ್ಗೆಯೂ ಮಾತನಾಡಿ, ಇಂಥ ವರ್ತನೆಯನ್ನು ಪುರುಷರು ಯಾವಾಗ ಸರಿ ಮಾಡಿಕೊಳ್ಳುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Virat Kohli: ಮತ್ತೆ ಮುಂದುವರಿದ ಕೊಹ್ಲಿಯ ಉದ್ಧಟತನ; ವಿಡಿಯೊ ವೈರಲ್