ಮುಂಬೈ: ಪ್ರಸಿದ್ಧ ತಾಜ್ ಹೋಟೆಲ್ (Taj Hotel) ಬಳಿ ವಿಚಿತ್ರ ಘಟನೆಯೊಂದು ನಡೆದಿದ್ದು, ಆರ್ಥಿಕ ಸಂಕಷ್ಟದಿಂದ ಪಾರಾಗಲು ಕ್ಯಾಬ್ ಚಾಲಕನೊಬ್ಬ ತನ್ನ ಕಾರ್‌ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿದೆ (Viral News). ಸೋಮವಾರ ಮಧ್ಯಾಹ್ನ ಎರಡು ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ತಲುಪಿದವು. ಎರಡೂ ಕಾರುಗಳು ಒಂದೇ ನಂಬರ್ ಪ್ಲೇಟ್‌ಗಳನ್ನು ಹೊಂದಿದ್ದನ್ನು ಗಮಸಿನಿದ ವಾಹನದ ಮಾಲೀಕ ಸಾಕೀರ್ ಅಲಿ ಪೊಲೀಸರಿಗೆ ತಿಳಿಸಿದ್ದಾರೆ.
2008 ರ ದಾಳಿಯ ನಂತರ ತಾಜ್ ಹೊಟೆಲ್ ಮೇಲೆ ದಾಳಿ ನಡೆದ ನಂತರ ಹೋಟೆಲ್ ಸುತ್ತ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಮಾಹಿತಿ ಪಡೆದ ತಕ್ಷಣ ಕಾರ್ಯನಿರತವಾದ ಪೊಲೀಸರು ವಾಹನ ಜಪ್ತಿ ಮಾಡಿ, ಚಾಲಕನ್ನು ಕೊಲಬಾ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಬಂಧಿತನ್ನು ಚಾಲಕ ಪ್ರಸಾದ್ ಚಂದ್ರಕಾಂತ್ ಕದಂ (38) ಅವರು ಸಾಲ ಪಡೆದ ಫೈನಾನ್ಸ್ ಕಂಪನಿಯಿಂದ ತಮ್ಮ ವಾಹನವನ್ನು ವಶಪಡಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ನಕಲಿ ನಂಬರ್ ಪ್ಲೇಟ್ ಮಾಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯೇನು?
ದೂರುದಾರ ಸಾಕೀರ್ ಅಲಿ ಅವರಿಗೆ ಆಗಾಗ ಟ್ರಾಫಿಕ್ ಉಲ್ಲಂಘನೆ ಇ-ಚಲನ್‌ಗಳನ್ನು ಪಡೆಯುತ್ತಿದ್ದರು. ಏನೋ ತಪ್ಪಾಗಿದೆ ಎಂದು ಅರಿತುಕೊಂಡ ಅವರು ಗೊಂದಲಕ್ಕೊಳಗಾಗಿದ್ದರು. ಈ ಬಗ್ಗೆ ಅವರು ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ರೀತಿಯ ಪರಿಹಾರವಾಗಿರಲಿಲ್ಲ. ಇದಕ್ಕೂ ಮೊದಲು ಅಲಿ ಅವರ ಚಾಲಕ ಬಾಂದ್ರಾದಲ್ಲಿ ಒಂದೇ ನಂಬರ್ ಪ್ಲೇಟ್ ಇರುವ ಕಾರಿನ ಫೋಟೋವನ್ನು ತೆಗೆದಿದ್ದರೂ ಕಳ್ಳರನ್ನು ಪತ್ತೆ ಮಾಡಲು ಸಾಧ್ಯವಿರಲಿಲ್ಲ.
ಸೋಮವಾರ ತಾಜ್ ಹೋಟೆಲ್ ಬಳಿ ಸುಮಾರು 12.30 ರ ಸುಮಾರಿಗೆ ಪ್ರಯಾಣಿಕರೊಬ್ಬರನ್ನು ಇಳಿಸುವಾಗ ನಕಲಿ ನಂಬರ್ ಪ್ಲೇಟ್ ಇರುವ ಕಾರನ್ನು ಅಲಿ ಅವರು ನೋಡಿದ್ದಾರೆ. ನಂತರ ಕಾರು ಚಾಲಕನನ್ನು ಹಿಡಿಯಲು ಪ್ರಯತ್ನಿಸಿದ್ದರು. ಆದರೆ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಪೊಲೀಸರು ಮಾಹಿತಿ ನೀಡಿದ್ದು, ಕಾರು ಚಾಲಕನ್ನು ಬಂಧಿಸಲಾಗಿದೆ. ಕಾರಿನ ಚಾಲಕ ಲೋನ್‌ಮರುಪಾವತಿಸಲಾಗದೆ ಹಾಗೂ ಆರ್ಥಿಕ ಸಂಕಷ್ಟದಿಂದ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ : Viral Video: ಏಕಾಏಕಿ ಕುಸಿದು ಬಿದ್ದ 533 ಮೀ. ಉದ್ದದ ಸೇತುವೆ; ಭೀಕರ ದೃಶ್ಯ ಭಾರೀ ವೈರಲ್