Tuesday, 7th January 2025

Viral News: ನಾಯಿಯ ತಟ್ಟೆಯಲ್ಲಿದ್ದ ಆಹಾರವನ್ನು ವಿದ್ಯಾರ್ಥಿಗಳಿಗೆ ಬಡಿಸಿದ ಶಾಲಾ ಸಿಬ್ಬಂದಿ; ಬೆಚ್ಚಿಬಿದ್ದ ಪೋಷಕರು

Viral News

ಬೀಜಿಂಗ್: ಚೀನಾದ ಶಾಲೆಯೊಂದರಲ್ಲಿ  ನಾಯಿಗಳಿಗೆ ಬಳಸುತ್ತಿದ್ದ ಊಟದ ಪಾತ್ರೆಯಲ್ಲಿದ್ದ ಆಹಾರವನ್ನು ವಿದ್ಯಾರ್ಥಿಗಳಿಗೆ ಬಡಿಸಿದ್ದು, ಈ ಆಘಾತಕಾರಿ ಘಟನೆ ವೈರಲ್(Viral News) ಆಗಿದೆ. ಇದು ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಕ್ಕಳಿಗೆ ನೀಡಿದ ಆಹಾರದಿಂದ ಅವರಿಗೆ  ವಾಂತಿ ಮತ್ತು ಭೇದಿ ಸಮಸ್ಯೆ ಉಂಟಾಗಿದೆ ಎಂದು ವರದಿಯಾಗಿದೆ.

ಚೀನಾದ ಶಾಲೆಯಲ್ಲಿ ನಾಯಿಗಳಿಗೆ ಆಹಾರ ನೀಡಲು ಬಳಸುವ ಪಾತ್ರೆಯಲ್ಲಿ ಇರಿಸಲಾದ ಆಹಾರ ಪದಾರ್ಥಗಳನ್ನು ತನ್ನ ವಿದ್ಯಾರ್ಥಿಗಳಿಗೆ ಬಡಿಸುವ ವಿಡಿಯೊ  ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ನೆಟ್ಟಿಗರ  ಗಮನ ಸೆಳೆದಿದೆ. ನಾಯಿಯ ಬಕೆಟ್‌ನಲ್ಲಿ ಇಟ್ಟಿದ್ದ ಆಹಾರವನ್ನು ಮಕ್ಕಳಿಗೆ ನೀಡಲಾಗಿದೆ ಎಂದು ತಿಳಿದು ಪೋಷಕರು ಆಘಾತಕ್ಕೊಳಗಾಗಿದ್ದಾರೆ.

ವರದಿ ಪ್ರಕಾರ,  ಶಾಲಾ ಸಿಬ್ಬಂದಿ ಹೆಚ್ಚಾದ  ಊಟವನ್ನು  ನಾಯಿಯ ಊಟದ ತಟ್ಟೆಗೆ ಎಸೆದಿದ್ದಾರೆ.  ನಂತರ ಅದನ್ನು ತಂದು ಇತರ ಮಕ್ಕಳಿಗೆ ಬಡಿಸಿದ್ದಾರೆ. ಈ  ವಿಡಿಯೊವನ್ನು ಪೋಷಕರು ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ. ಈ ಊಟವನ್ನು ಸೇವಿಸಿದ ಹಲವು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಈಗ, ಈ ವಿಷಯಕ್ಕೆ ಸಂಬಂಧಿಸಿದಂತೆ  ಆಹಾರ ಸುರಕ್ಷತೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಪ್ರಶ್ನೆ ಉಂಟಾಗಿದೆ.  ಈ ವಿಚಾರದ ಬಗ್ಗೆ  ಪೋಷಕರಿಂದ ತೀವ್ರ ಖಂಡನೆ ವ್ಯಕ್ತವಾದ  ನಂತರ ಸರ್ಕಾರ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:ಭಾರತೀಯನನ್ನು ಮದುವೆಯಾದ ಅಮೆರಿಕನ್‌ ಮಹಿಳೆ ಅತ್ತೆ-ಮಾವನ ಬಗ್ಗೆ ಹೀಗಾ ಹೇಳೋದು…?

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಈ ವಿಡಿಯೊಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.  “ಅವರು ನಮ್ಮ ಶತ್ರುಗಳಲ್ಲ. ಅವರು ನಮ್ಮ ಮಕ್ಕಳು, ನಮ್ಮ ದೇಶದ ಭವಿಷ್ಯ. ಅವರಿಗೆ ಅಂತಹ ಆಹಾರವನ್ನು ನೀಡಲು ನಿಮಗೆ ಎಷ್ಟು ಧೈರ್ಯ?” ಒಬ್ಬ ನೆಟ್ಟಿಗರು ಕೇಳಿದ್ದಾರೆ. “ಶಾಲೆ ಮತ್ತು ಸಂಬಂಧಿತ ಸಿಬ್ಬಂದಿ ಇಬ್ಬರೂ ಕಠಿಣ ಶಿಕ್ಷೆಗೆ ಗುರಿಯಾಗಬೇಕು” ಎಂದು ಮತ್ತೊಬ್ಬರು ಹೇಳಿದ್ದಾರೆ.

Leave a Reply

Your email address will not be published. Required fields are marked *