Tuesday, 10th December 2024

Viral News: ಪರೀಕ್ಷೆ ಅರ್ಜಿಯಲ್ಲಿ ತಂದೆ ಇಮ್ರಾನ್ ಹಶ್ಮಿ, ತಾಯಿ ಸನ್ನಿ ಲಿಯೋನ್ ಎಂದು ಉಲ್ಲೇಖಿಸಿದ ವಿದ್ಯಾರ್ಥಿ!

Viral News

ತಂದೆ ಇಮ್ರಾನ್ ಹಶ್ಮಿ (Emran Hasmi), ತಾಯಿ ಸನ್ನಿ ಲಿಯೋನ್ (Sunny Leone) ಎಂದು ವಿದ್ಯಾರ್ಥಿಯೊಬ್ಬ ಪರೀಕ್ಷೆ ನಮೂನೆಯಲ್ಲಿ ಬರೆದಿರುವ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral News) ಆಗಿದ್ದು, ಸಾಕಷ್ಟು ಮಂದಿಯ ಗಮನ ಸೆಳೆದಿರುವುದು ಮಾತ್ರವಲ್ಲ ವಿವಿಧ ರೀತಿಯ ಚರ್ಚೆಗೂ ಕಾರಣವಾಗಿದೆ.

ಬಾಲಿವುಡ್ ನ ಸಿನಿಮಾ ತಾರೆಯರಾದ (Bollywood actors) ಇಮ್ರಾನ್ ಹಶ್ಮಿ ಮತ್ತು ಸನ್ನಿ ಲಿಯೋನ್ ಅವರನ್ನು ತಮ್ಮ ಪೋಷಕರೆಂದು ವಿದ್ಯಾರ್ಥಿಯೊಬ್ಬ ತನ್ನ ಪರೀಕ್ಷಾ ಅರ್ಜಿಯಲ್ಲಿ ಉಲ್ಲೇಖಿಸಿರುವ ಹಳೆಯ ಪೋಸ್ಟ್ ಇದೀಗ ಮತ್ತೆ ವೈರಲ್ ಆಗಿದೆ.

ಬಿಹಾರದ ವಿದ್ಯಾರ್ಥಿಯೊಬ್ಬನ ಪರೀಕ್ಷಾ ನಮೂನೆಯಲ್ಲಿ ಇದು ಕಾಣಿಸಿಕೊಂಡಿದೆ. ಈ ಪರೀಕ್ಷೆ ನಮುನೆ 2017ರದ್ದು ಎನ್ನಲಾಗಿದೆ. ಆದರೆ ಅದು ಈಗ ಮತ್ತೊಮ್ಮೆ ವೈರಲ್ ಆಗಿದೆ.

ವಿದ್ಯಾರ್ಥಿಯೊಬ್ಬ ತನ್ನ ಪದವಿ ಪರೀಕ್ಷೆಯ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ತನ್ನ ಹೆಸರು ಕುಂದನ್, ತಂದೆ ಇಮ್ರಾನ್ ಹಶ್ಮಿ, ತಾಯಿ ಸನ್ನಿ ಲಿಯೋನ್ ಎಂದು ಉಲ್ಲೇಖಿಸಿದ್ದಾನೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ ಎನ್ನಲಾಗಿದೆ.
ವಿದ್ಯಾರ್ಥಿಯು ಜಾತಿ ಜಾಗದಲ್ಲಿ ‘ಬಿಸಿ’ (ಹಿಂದುಳಿದ ವರ್ಗ) ಎಂದು ಬರೆದಿದ್ದು, ಧರ್ಮ ‘ಹಿಂದೂ’ ಎಂದು ಉಲ್ಲೇಖಿಸಿದ್ದಾನೆ. ತಂದೆಯ ಹೆಸರು ಮುಸ್ಲಿಂ ಆಗಿದ್ದರೂ ವಿದ್ಯಾರ್ಥಿ ತನ್ನ ಧರ್ಮವನ್ನು ಹಿಂದೂ ಎಂದು ಬರೆದಿರುವುದನ್ನು ವೈರಲ್​ ಪೋಸ್ಟ್​ನಲ್ಲಿ ಕಾಣಬಹುದು.

ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ 2 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದ್ದು, ಹಲವರು ಮಂದಿ ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ.

ಕಾಮೆಂಟ್ ವಿಭಾಗದಲ್ಲಿ ಒಬ್ಬರು, ಕುಂದನ್ ಗೆ ತನ್ನ ಹೇಳಿಕೆಯನ್ನು ಹೇಗೆ ಮಾಡಬೇಕೆಂದು ಸ್ಪಷ್ಟವಾಗಿ ತಿಳಿದಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ನಮಗೆ ಬೇಕು ಎಂದು ನಮಗೆ ತಿಳಿದಿರದ ಬಾಲಿವುಡ್ ಟ್ವಿಸ್ಟ್ ಎಂದಿದ್ದಾರೆ.
ಇನ್ನೊಬ್ಬರು ಕುಂದನ್ ಚಲನಚಿತ್ರ ನಿರ್ಮಾಣದಲ್ಲಿ ವೃತ್ತಿ ಜೀವನವನ್ನು ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. ಮತ್ತೊಬ್ಬರು ನೀವು ಶಿಕ್ಷಣವನ್ನು ಮರೆತುಬಿಡಿ; ಸ್ಕ್ರಿಪ್ಟ್ ಬರೆಯಿರಿ ಎಂದಿದ್ದಾರೆ.

ಪರೀಕ್ಷಾ ದಾಖಲೆಯಲ್ಲಿ ಬಾಲಿವುಡ್ ತಾರೆಯರ ಹೆಸರು ಬರೆಯುವುದು ಇದೇ ಮೊದಲೇನಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್ ಹೆಸರು ಬಂದಿತ್ತು. ಪರೀಕ್ಷಾ ಕೇಂದ್ರವನ್ನು ಕನೌಜ್‌ನ ಶ್ರೀಮತಿ ಸೋನೆಶ್ರೀ ಸ್ಮಾರಕ ಬಾಲಕಿಯರ ಕಾಲೇಜು ಎಂದು ಗುರುತಿಸಲಾಗಿತ್ತು.

Viral Video: 1 ವರ್ಷದ ಕಂದನಿಗೆ ಕಪಾಳಮೋಕ್ಷ ಮಾಡಿದ ದುಷ್ಟ ಅರೆಸ್ಟ್

ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಪ್ರಚಾರ ಮಂಡಳಿ (UPPRB) ಇದಕ್ಕೆ ಪ್ರತಿಕ್ರಿಯಿಸಿ ಇದು ನಕಲಿ ಎಂದು ಸ್ಪಷ್ಟಪಡಿಸಿತ್ತು.