Tuesday, 7th January 2025

Viral News: ಗೆಳತಿಯನ್ನು ಮೆಚ್ಚಿಸಲು ಸಿಂಹದ ಪಂಜರ ಹೊಕ್ಕ ಭೂಪ! ಆಮೇಲೆ ನಡೆದಿದ್ದೇ ಬೇರೆ

Viral News

ಉಜ್ಬೇಕಿಸ್ತಾನ: ಪ್ರೇಯಸಿ ಎದುರು ಶೋ ಆಫ್‌ ಮಾಡೋಕೆ ಹೋಗಿ ವ್ಯಕ್ತಿಯೊಬ್ಬ ಸಿಂಹಕ್ಕೆ ಆಹಾರವಾದ ಭಯಾನಕ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ  ವೈರಲ್(Viral News) ಆಗಿದೆ. ಇದನ್ನು ಕಂಡು ಅನೇಕರು ಬೆಚ್ಚಿ ಬಿದ್ದಿದ್ದಾರೆ. ವರದಿಗಳ ಪ್ರಕಾರ, ಆ ವ್ಯಕ್ತಿ ಉಜ್ಬೇಕಿಸ್ತಾನದ ಪಾರ್ಕೆಂಟ್‍ನಲ್ಲಿರುವ ಖಾಸಗಿ ಮೃಗಾಲಯದಲ್ಲಿ ಮೃಗಾಲಯಪಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. ಇತ್ತೀಚೆಗೆ ತನ್ನ ಗೆಳತಿಯನ್ನು ಮೆಚ್ಚಿಸಲು ಸಿಂಹದ ಪಂಜರವನ್ನು ಪ್ರವೇಶಿಸಿ ಜೀವಕ್ಕೆ ಕುತ್ತು ತಂದುಕೊಂಡ ಘಟನೆ ನಡೆದಿದೆ.

ವರದಿಯ ಪ್ರಕಾರ, 44 ವರ್ಷದ ವ್ಯಕ್ತಿಯನ್ನು ಎಫ್ ಇರಿಸ್ಕುಲೋವ್ (F Iriskulov)ಎಂದು ಗುರುತಿಸಲಾಗಿದೆ.ವೈರಲ್ ವಿಡಿಯೊದಲ್ಲಿ, ವ್ಯಕ್ತಿಯು ಪ್ಯಾಡ್ಲಾಕ್ ತೆರೆದು ಸಿಂಹಗಳ ಕಡೆಗೆ ಹೋಗಿದ್ದಾನೆ.  ಆಗ ಅಲ್ಲಿ ಮೊದಲಿಗೆ, ಮೂರು ದೈತ್ಯಾಕಾರದ ಸಿಂಹಗಳು ಅವನ ಮೇಲೆ ದಾಳಿ ಮಾಡಿವೆಯಂತೆ. ಆಗ ಅವನು ಸಿಂಹಗಳಲ್ಲಿ ಒಂದನ್ನು “ಸಿಂಬಾ” ಎಂದು ಕರೆದು ನಂತರ ಅವುಗಳಿಗೆ ಸುಮ್ಮನಿರಲು ಹೇಳಿದ್ದಾನಂತೆ. ಆದರೆ ಸಿಂಹಗಳಲ್ಲಿ ಒಂದು ಅವನ ಬಳಿಗೆ ಬಂದು ಭಯಾನಕವಾಗಿ ದಾಳಿ ಮಾಡಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. “ಸಿಂಹಗಳು ಮೃಗಾಲಯ ಪಾಲಕನ ಮುಖದ ಚರ್ಮವನ್ನು ಹರಿದು ಹಾಕಿದ್ದವು” ಎಂದು ರಷ್ಯಾದ ಅಧಿಕಾರಿಗಳನ್ನು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಯಂಗ್‍ ಆಗಿ ಕಾಣಲು 47 ವರ್ಷದ ಈ ಹ್ಯೂಮನ್ ಬಾರ್ಬಿ ಮಾಡಿದ್ದೇನು ಗೊತ್ತೆ?

ಅಧಿಕೃತ ಹೇಳಿಕೆಯ ಪ್ರಕಾರ, “ಸಿಂಹಗಳು ಅವನನ್ನು ಕೊಂದು ದೇಹವನ್ನು ಭಾಗಶಃ ತಿಂದುಹಾಕಿದವು. ಭಯಾನಕ ದಾಳಿಯ ನಂತರ, ಸಿಬ್ಬಂದಿಗಳು ಒಂದು ಸಿಂಹವನ್ನು ಗುಂಡಿಕ್ಕಿ ಕೊಂದರು ಮತ್ತು ಉಳಿದ ಎರಡು ಸಿಂಹಗಳನ್ನು ಶಾಂತಗೊಳಿಸಿದ್ದಾರೆ. ಆಂತರಿಕ ವ್ಯವಹಾರಗಳ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿದ್ದು, ಅದರಂತೆ ಸಿಂಹಗಳನ್ನು ವಿಶೇಷ ಪಂಜರದಲ್ಲಿ ಇರಿಸಲಾಗಿದೆ. ಸುತ್ತಮುತ್ತಲಿನ ಇತರ ಯಾವುದೇ ಜನರಿಗೆ ಹಾನಿಯಾಗಿಲ್ಲ. ಪ್ರಸ್ತುತ ಸ್ಥಳೀಯ ಜನರಿಗೆ ಯಾವುದೇ ಅಪಾಯವಿಲ್ಲ ಎನ್ನಲಾಗಿದೆ.