Thursday, 19th December 2024

Viral News: ಥೂ! ರೀಲ್ಸ್‌ಗಾಗಿ ಈ ಮಟ್ಟಕ್ಕೂ ಇಳಿತಾರಾ? ನಾಯಿಯ ಮೊಲೆ ಚೀಪಿ ಹಾಲು ಕುಡಿದ ಯುವತಿಯ ಶಾಕಿಂಗ್‌ ವಿಡಿಯೊ ನೋಡಿ

Viral News

ಹೊಸದಿಲ್ಲಿ: ಹೇಳಿ ಕೇಳಿ ಇದು ರೀಲ್ಸ್‌ ಯುಗ. ಕುಂತಾಗ-ನಿಂತಾಗ, ಊಟ ಮಾಡುವಾಗ, ಆಟವಾಡುವಾಗ ರೀಲ್ಸ್‌ ಮಾಡುವುದು ಕೆಲವರಿಗೆ ಚಟವಾಗಿ ಬಿಟ್ಟಿದೆ. ತೀರಾ ಖಾಸಗಿ, ವೈಯಕ್ತಿಕ ವಿಚಾರಗಳನ್ನು ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವವರು ಒಂದಡೆಯಾದರೆ, ಹುಚ್ಚು ಹುಚ್ಚಾಗಿ ವರ್ತಿಸಿ ಟ್ರೋಲ್‌ ಆಗಿ ಆ ಮೂಲಕ ವೈರಲ್‌ ಆಗಬೇಕು ಎನ್ನುವ ಮನಸ್ಥಿತಿಯವರು ಇನ್ನೊಂದೆಡೆ. ಈ 2ನೇ ವರ್ಗಕ್ಕೆ ಸೇರಿದವರು ವೈರಲ್‌ ಆಗಲು, ಲೈಕ್ಸ್‌ ಗಿಟ್ಟಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಎಂತಹ ನಾಚಿಕೆಗೇಡಿನ ವರ್ತನೆಯನ್ನು ತೋರಲೂ ಅವರು ಹೇಸುವುದಿಲ್ಲ. ಅಂತಹದ್ದೇ ಘಟನೆಯೊಂದು ಇದೀಗ ವೈರಲ್‌ ಆಗುತ್ತಿದೆ (Viral News). ಯುವತಿಯೊಬ್ಬಳು ರೀಲ್ಸ್‌ಗಾಗಿ ನಾಯಿಯೊಂದಿಗೆ ವರ್ತಿಸಿದ ವಿಡಿಯೊ ಇದಾಗಿದ್ದು, ಆಕೆಯ ಕೃತ್ಯ ನೋಡಿದವರು ಬೆಚ್ಚಿ ಬಿದ್ದಿದ್ದಾರೆ. ಆಕೆಯನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಈ ವಿಡಿಯೊ ನೋಡಿದರೆ ನೀವೂ ಆಕೆಯ ಕೃತ್ಯಕ್ಕೆ ಉರಿದು ಬೀಳುವುದು ಗ್ಯಾರಂಟಿ! ಅಷ್ಟಕ್ಕೂ ಆಕೆ ಮಾಡಿದ್ದೇನು?

ನೆಟ್ಟಿಗರ ಗಮನ ಸೆಳೆಯಲು, ಫಾಲೋವರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳಲು ಕೆಲವರು ಅಪಾಯಕಾರಿ ಸಾಹಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದನ್ನು ರೀಲ್ಸ್‌ ಮಾಡಿ ಅಪ್‌ಲೋಡ್‌ ಮಾಡುತ್ತಾರೆ. ಜಲಪಾತದ ಬಳಿ ಸರ್ಕಸ್‌ ಮಾಡುವುದು, ನದಿಗೆ ಹಾರುವುದು, ಚಲಿಸುವ ವಾಹದಲ್ಲಿ ಸಾಹಸ ಪ್ರದರ್ಶಿಸುವುದು, ಬೆಟ್ಟದ ಮೇಲೆ, ಗುಡ್ಡದ ತುದಿಯಲ್ಲಿ ಡ್ಯಾನ್ಸ್‌ ಮಾಡುವುದು…ಇತ್ಯಾದಿ ಹುಚ್ಚು ವರ್ತನೆ ತೋರುತ್ತಾರೆ. ಆದರೆ ಈ ಯುವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ.

ವಿಡಿಯೊದಲ್ಲಿ ಏನಿದೆ?

ಬಯಲು ಪ್ರದೇಶವೊಂದರಲ್ಲಿ ನಾಯಿ ಅದರ ಪಾಡಿಗೆ ಅದು ಮಲಗಿರುತ್ತದೆ. ಆಗ ಅಲ್ಲಿಗೆ ಬರುವ ಯುವತಿ ಬಾಗಿ ನಾಯಿಯ ಮೊಲೆಗೆ ಬಾಯಿ ಹಾಕಿ ಚೀಪಿ ಹಾಲು ಹೀರುತ್ತಾಳೆ. 8 ಸೆಕೆಂಡ್‌ಗಳ ವಿಡಿಯೊ ಇದಾಗಿದ್ದು, ಸದ್ಯ ನೆಟ್ಟಿಗರನ್ನು ಕೆರಳಿಸಿದೆ. ರೀಲ್ಸ್‌ ಮಾಡುವ ಉದ್ದೇಶದಿಂದಲೇ ಈ ವಿಡಿಯೊ ಮಾಡಿರುವುದು ಸ್ಪಷ್ಟ.

ಮಮತಾ ರಾಜ್‌ಗರ್‌ ಎನ್ನುವವರು ಈ ಯುವತಿಯ ಹುಚ್ಚಾಟದ ವಿಡಿಯೊವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಜನಪ್ರಿಯತೆ ಗಳಿಸಲು ಇಂತಹ ಕೀಳು ಮಟ್ಟಕ್ಕೆ ಇಳಿದ ಯುವತಿಯ ವರ್ತನೆಗೆ ಹಲವರು ಕಿಡಿ ಕಾರಿದ್ದಾರೆ. ಈಗಾಗಲೇ ಈ ವಿಡಿಯೊವನ್ನು 52 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ. ಯುವತಿಗೆ ನಾಚಿಕೆ, ಮಾನ ಮರ್ಯಾದೆ ಎನ್ನುವುದು ಸ್ವಲ್ಪವೂ ಇಲ್ಲವೇ ಎನ್ನುವುದು ಬಹುತೇಕರ ಪ್ರಶ್ನೆ.

ಇದುವರೆಗೆ ಹಲವರು ಹಲವು ಹುಚ್ಚಾಟ, ಅತಿರೇಕದ ವರ್ತನೆ ತೋರಿದ್ದಾರೆ. ಆದರೆ ಇಂತಹ ಹುಚ್ಚು ಸಾಹಸಕ್ಕೆ ಯಾರೂ ಕೈ ಹಾಕಿರಲಿಲ್ಲ. ನಾಯಿ ಯುವತಿಗೆ ಪರಚಬೇಕಿತ್ತು ಅಥವಾ ಸರಿಯಾಗಿ ಕಚ್ಚಬೇಕಿತ್ತು ಎಂದು ಕೆಲವರು ಹೇಳಿದ್ದಾರೆ. ʼʼಜನಪ್ರಿಯತೆ ಗಳಿಸಲು ಇಂತಹ ನಾಚಿಕೆಗೇಡಿನ ಕೃತ್ಯಕ್ಕೆ ಇಳಿಯುತ್ತಾರೆʼʼ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಹಲವರು ಅಚ್ಚರಿಯ ಜತೆಗೆ ಶಾಕ್‌ ಆಗಿರುವ ಎಮೋಜಿ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಯುವತಿಯ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಪ್ರಾಣಿ ಹಿಂಸೆ ಮಾಡುವ ಇಂತಹವರಿಗೆ ಸೂಕ್ತ ಸಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಮಹಿಳೆಯ ಮೂಗು ಕತ್ತರಿಸಿದ ಭೂಪಾ! ತುಂಡಾದ ಮೂಗನ್ನು ಹಿಡ್ಕೊಂಡೇ ಆಸ್ಪತ್ರೆಗೆ ಬಂದ ಗಟ್ಟಿಗಿತ್ತಿ!