ಪುಣೆ: ಸಾಮಾನ್ಯವಾಗಿ ಯಾವುದೇ ರೆಸ್ಟೊರೆಂಟ್ ಆಗಲಿ ಯಾವುದೇ ಕೆಫೆಯಾಗಲಿ ಆ ಹೊಟೇಲಿನ ಸ್ಪೇಷಲ್ ಫುಡ್ ಏನು? ಏನೆಲ್ಲಾ ವೆರೈಟಿ ಡೆಸರ್ಟ್ ಇದೆ ಇತ್ಯಾದಿ ಮೆನುವಿನಲ್ಲಿ ಹಾಕಿರುತ್ತಾರೆ. ಆದರೆ ಪುಣೆಯ ಕೆಫೆಯೊಂದರ ಮೆನು ರೂಲ್ಸ್ ಕಂಡು ನಿಮಗೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುವುದು ಖಂಡಿತ. ಇದರ ಜೊತೆ ಈ ರೂಲ್ಸ್ ಕಂಡು ನಿಮಗೆ ಆಶ್ಚರ್ಯವೂ ಆಗಲಿದೆ(Viral Post).
ಗ್ರಾಹಕರೊಬ್ಬರು ಇತ್ತೀಚೆಗೆ ಇಲ್ಲಿನ ಕೆಫೆಯ ಮೆನುವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುಣೆಯ ಈ ಮೆನು ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ಟ್ರೆಂಡ್ ಆಗ್ತಿದೆ. ಈ ಮೆನು ನೋಡಿದ ನೆಟ್ಟಿಗರು ಅರೇ! ಈ ನಿಯಮ ಮಾಡಿದ ಮಾಲೀಕ ಯಾರು ಎಂದು ತಮಾಷೆ ಮಾಡಿದ್ದಾರೆ. ಈ ಪೋಸ್ಟ್ ಅಂತು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
irani cafe you diva pic.twitter.com/DaE4XfXGm9
— discarded cd player (@saysomethingsus) January 6, 2025
ಮೆನುನಲ್ಲಿ ಏನಿದೆ?
ಲ್ಯಾಪ್ಟಾಪ್ ಬಳಕೆ ಇಲ್ಲ, ಚಾರ್ಜಿಂಗ್ ಬಳಕೆ ಇಲ್ಲ ಧೂಮಪಾನ ಮಾಡಬೇಡಿ, ಯಾವುದೇ ಸಾಲ ಇಲ್ಲ ಚೌಕಾಶಿ ಮಾಡುವಂತಿಲ್ಲ, ಹೊರಗಿನ ಆಹಾರ ತರುವಂತಿಲ್ಲ, ಜೋರಾಗಿ ಮಾತನಾಡುವಂತಿಲ್ಲ, ಜೂಜಿನ ಬಗ್ಗೆ ಚರ್ಚಿಸಬೇಡಿ, ಟೇಬಲ್ ಮೇಲೆ ಮಲಗಬೇಡಿ, ಕ್ಯಾಷಿಯರ್ನೊಂದಿಗೆ ಫ್ಲರ್ಟಿಂಗ್ ಮಾಡಬೇಡಿ, ಮೂಗು ಮುರಿಯಬೇಡಿ, ಹಲ್ಲುಜ್ಜುವಂತಿಲ್ಲ, ಮೊಬೈಲ್ ಆಟ ಆಡುವಂತಿಲ್ಲ ಇತ್ಯಾದಿ ಮೆನುವಲ್ಲಿ ಬರೆದಿದ್ದಾರೆ.
ಕೆಫೆ ಮಾಲೀಕನ ಹಾಸ್ಯಪ್ರಜ್ಞೆ ಮೆನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಅನೇಕರು ಈ ಮೆನು ಕಂಡು ತಮಾಷೆಯ ಕಾಮೆಂಟ್ ಮಾಡಿದ್ದಾರೆ. “ಕ್ಯಾಷಿಯರ್ ಜೊತೆ ಫ್ಲರ್ಟಿಂಗ್ ಇಲ್ಲ ಬಹಳ ಚೆನ್ನಾಗಿದೆ ಈ ರೂಲ್ಸ್ ಬಹುಶ: ಕ್ಯಾಷಿಯರ್ ಅವರ ಚಿಕ್ಕಪ್ಪ ಆಗಿರಬೇಕು ಎಂದು ”ಒಬ್ಬ ಬಳಕೆದಾರ ತಮಾಷೆ ಮಾಡಿದ್ದಾನೆ. ಮತ್ತೊಬ್ಬ ನೆಟ್ಟಿಗರು ಈ ನಿಯಮ ಯಾರೆಲ್ಲ ಫಾಲೋ ಮಾಡಲು ರೆಡಿ ಇದ್ದೀರಾ ಕಾಮೆಂಟ್ ಮಾಡಿ ಅಂತ ಪ್ರತಿಕ್ರಿಯೆ ನೀಡಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಏಳು ಖಂಡಕ್ಕೆ ಪ್ರವಾಸ; 102ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ಮಹಿಳೆ!