Sunday, 15th December 2024

Viral Video: ನಡು ರಸ್ತೆಯಲ್ಲಿ ಬೈಕ್ ಮೇಲೆ ಯುವ ಜೋಡಿಯ ರೋಮ್ಯಾನ್ಸ್!

Viral video

ಸಿನಿಮಾಗಳಿಂದ (film) ಪ್ರೇರಿತರಾಗಿ ರಸ್ತೆಯಲ್ಲಿ ಓಡಾಡುವಾಗ ಹುಚ್ಚು ಸಾಹಸಗಳನ್ನು ಮಾಡುವ ಘಟನೆಗಳು ಇತ್ತೀಚಿಗೆ ಹೆಚ್ಚಾಗಿದೆ. ಜೀವಕ್ಕೆ ಅಪಾಯಕಾರಿಯಾಗಿರುವ ಈ ಘಟನೆಗಳನ್ನು ತಡೆಯಲು ಸಾಕಷ್ಟು ಮಂದಿ ಒತ್ತಾಯಿಸುತ್ತಲೇ ಇರುತ್ತಾರೆ. ಈಗ ಮತ್ತೆ ಇಂತಹ ವಿಡಿಯೋವೊಂದು ವೈರಲ್ (Viral Video) ಆಗಿದ್ದು, ಮತ್ತೆ ಸಾಮಾಜಿಕ ಜಾಲತಾಣದಲ್ಲಿ(social media) ಚರ್ಚೆಯನ್ನು ಹುಟ್ಟು ಹಾಕಿದೆ.

ಎಕ್ಸ್ ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜೋಡಿಯೊಂದು ಸ್ಪೋರ್ಟ್ಸ್ ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಈ ಹಿಂದೆಯೂ ಇಂತಹ ವಿಡಿಯೋ ವೈರಲ್ ಆಗಿತ್ತು. ಈ ರೀತಿ ಬೈಕ್‌ನಲ್ಲಿ ಕೃತ್ಯಗಳನ್ನು ಮಾಡುವುದು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾತ್ರವಲ್ಲ ಇತರ ವಾಹನ ಚಾಲಕರನ್ನು ಅಪಾಯಕ್ಕೆ ದೂಡುವ ಸಾಧ್ಯತೆ ಇರುತ್ತದೆ. ಒಬ್ಬ ವ್ಯಕ್ತಿ ತನ್ನ ಗೆಳತಿಯನ್ನು ಸ್ಪೋರ್ಟ್ಸ್ ಬೈಕ್‌ನಲ್ಲಿ ಮುಂದೆ ಕೂರಿಸಿಕೊಂಡು ಅತಿ ವೇಗದಲ್ಲಿ ಹೋಗುತ್ತಿರುವಾಗ ರೋಮ್ಯಾನ್ಸ್ ಮಾಡುವುದನ್ನು ಕಾಣಬಹುದು. ರಸ್ತೆಯಲ್ಲಿ ಸಾಕಷ್ಟು ವಾಹನಗಳು ಈ ಸಂದರ್ಭದಲ್ಲಿ ಚಲಿಸುತ್ತಿರುತ್ತದೆ. ಅದ್ಯಾವುದನ್ನೂ ಲೆಕ್ಕಿಸದೆ ಜೋಡಿಯು ರಸ್ತೆ ಮಧ್ಯೆ ಸಾಗುತ್ತಿತ್ತು.

ಇಂತಹ ಸಾಹಸಗಳನ್ನು ಅಪಾಯಕಾರಿ ಮತ್ತು ಬೇಜವಾಬ್ದಾರಿ ಎಂದು ಹಲವಾರು ನೆಟ್ಟಿಗರು ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಬೈಕ್ ಸವಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಲವು ಮಂದಿ ಆಗ್ರಹಿಸಿದ್ದಾರೆ.

Viral News: ಹಾಕಿ ಫೈನಲ್‌ ಪಂದ್ಯದ ವೇಳೆ ಚೀನಾ ಧ್ವಜ ಹಿಡಿದು ಭಾರತಕ್ಕೆ ಕೇಡು ಬಯಸಿದ ಪಾಕ್‌ ಆಟಗಾರರು

ಇಂತಹ ಘಟನೆಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆಗ ಯಾವುದೇ ವ್ಯಕ್ತಿಯು ಇಂತಹ ಕೆಲಸವನ್ನು ಮಾಡುವ ಮೊದಲು ನೂರು ಬಾರಿ ಯೋಚಿಸುತ್ತಾನೆ ಎಂದು ಒಬ್ಬರು ಕಾಮೆಂಟ್ ವಿಭಾಗದಲ್ಲಿ ಹೇಳಿದ್ದಾರೆ.