ಲೇಹ್: ಲಡಾಖ್ ಹಿಮ ಚಿರತೆಗಳಿಗೆ ಹೆಸರುವಾಸಿಯಾಗಿದೆ. ಇವು ಸಾಮಾನ್ಯವಾಗಿ ಚಳಿಗಾಲದಲ್ಲಿ ಕೇಂದ್ರಾಡಳಿತ ಪ್ರದೇಶದ ಜನ್ಸ್ಕರ್ ಪ್ರದೇಶದಲ್ಲಿ ಕಂಡುಬರುತ್ತದೆ. ಇತ್ತೀಚೆಗೆ, ಜನ್ಸ್ಕರ್ ಪ್ರದೇಶದಲ್ಲಿ ಹಿಮ ಚಿರತೆಗಳು ಆಟವಾಡುತ್ತಾ ಆನಂದಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಹಿಮ-ಚಿರತೆಗಳು ಆಟವಾಡುವ ವಿಡಿಯೊವನ್ನು ಟೂರ್ ಆಪರೇಟರ್ ತಾಶಿ ಸೆವಾಂಗ್ ಸೆರೆಹಿಡಿದಿದ್ದಾರೆ. ಟೂರ್ ಆಪರೇಟರ್ ಜನವರಿ 5 ರಂದು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಹಂಚಿಕೊಂಡ ಈ ವಿಡಿಯೊಗೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, “ಲಡಾಖ್‍ನ ಜನ್ಸ್ಕರ್ ಕಣಿವೆಯಲ್ಲಿ ಹಿಮ ಚಿರತೆಗಳ ಖುಷಿಯ ಕುಣಿತ” ಎಂದು ಬರೆದಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಹಿಮ ಚಿರತೆಗಳನ್ನು ಕಂಡು ನೆಟ್ಟಿಗರು ಆಶ್ವರ್ಯಚಕಿತರಾಗಿದ್ದಾರೆ. ನೆಟ್ಟಿಗರೊಬ್ಬರು ಸಾಹು ಅವರ ಪೋಸ್ಟ್‌ಗೆ ಉತ್ತರಿಸುತ್ತಾ, “ಅದ್ಭುತ ಮತ್ತು ಆಕರ್ಷಕ” ಎಂದು ಬರೆದಿದ್ದಾರೆ. “ಎಂತಹ ಸುಂದರವಾದ ಕ್ಷಣ” ಎಂದು ಎಕ್ಸ್ ನೆಟ್ಟಿಗರೊಬ್ಬರು ತ್ಸೆವಾಂಗ್ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
A fleeting dance of wild joy – Snow leopards somewhere in Zanskar valley in Ladakh
— Supriya Sahu IAS (@supriyasahuias) January 6, 2025
🎥 tashizkr pic.twitter.com/gkZ8pmDbZM
ಹಿಮ ಚಿರತೆಗಳು ಅಪರೂಪದ ಪ್ರಬೇಧಗಳಾಗಿವೆ. ವರ್ಲ್ಡ್ ವೈಡ್ ಫಂಡ್ ಪ್ರಕಾರ, ಅವು ಮಧ್ಯ ಮತ್ತು ದಕ್ಷಿಣ ಏಷ್ಯಾದ 12 ದೇಶಗಳಲ್ಲಿ ಮಾತ್ರ ವಾಸವಾಗಿವೆಯಂತೆ. ಎತ್ತರದ ಪ್ರದೇಶಗಳಲ್ಲಿ ಕಂಡುಬರುವ ಈ ಚಿರತೆಗಳು ಹವಾಮಾನ ಬದಲಾವಣೆ, ಬೇಟೆಗಳಿಂದಾಗಿ ಅಪಾಯದಂಚಿನಲ್ಲಿವೆಯಂತೆ.
ಈ ಸುದ್ದಿಯನ್ನೂ ಓದಿ:ಮನೆಗೆ ಕನ್ನ ಹಾಕಲು ಬಂದವನು ಏನೂ ಸಿಗದೇ ಸಿಟ್ಟಿನಲ್ಲಿ ಮಹಿಳೆಗೆ ಕಿಸ್ ಮಾಡಿಬಿಟ್ಟ!
ವರದಿ ಪ್ರಕಾರ, ಭಾರತದಲ್ಲಿ 718 ಹಿಮ ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ, ಲಡಾಖ್‍ನಲ್ಲಿ ಗರಿಷ್ಠ ಸಂಖ್ಯೆಯ ಅಪರೂಪದ ಚಿರತೆಗಳಿವೆ. 2024 ರಲ್ಲಿ ಲಡಾಖ್‍ನಲ್ಲಿ 477, ಉತ್ತರಾಖಂಡದಲ್ಲಿ 124 ಮತ್ತು ಹಿಮಾಚಲ ಪ್ರದೇಶದಲ್ಲಿ 51 ಹಿಮ ಚಿರತೆಗಳಿವೆ ಎಂದು ವರದಿಯಾಗಿದೆ. ಅರುಣಾಚಲ, ಸಿಕ್ಕಿಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 2024 ರಲ್ಲಿ 36, 21 ಮತ್ತು 9 ಹಿಮ ಚಿರತೆಗಳಿವೆ ಎನ್ನಲಾಗಿದೆ.