Monday, 13th January 2025

Viral Video: ಇಂಗ್ಲಿಷ್‌ ಮಾತನಾಡೋಕೆ ಬರಲ್ಲ ಅಂತ ವಿಮಾನದಿಂದ UFC ಚಾಂಪಿಯನ್‌ ಕಿಕ್‌ಔಟ್‌-ಅಷ್ಟಕ್ಕೂ ಆಗಿದ್ದೇನು? ವಿಡಿಯೊ ನೋಡಿ

Viral Video

ಅಲಾಸ್ಕಾ: ನಿವೃತ್ತ ಯುಎಫ್‌ಸಿ ಫೈಟರ್ ಖಬೀಬ್ ನುರ್ಮಾಗೊಮೆಡೊವ್ ಅವರನ್ನು ಇಂಗ್ಲಿಷ್‌ ಸರಿಯಾಗಿ ಬಾರದೇ ಇರುವುದಕ್ಕೆ ಅಲಾಸ್ಕಾ ಏರ್‌ಲೈನ್ಸ್ ವಿಮಾನದಿಂದ ಹೊರದಬ್ಬಿದ ಘಟನೆ ನಡೆದಿತ್ತು. ಲಾಸ್ ವೇಗಾಸ್‍ನ ಹ್ಯಾರಿ ರೀಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆ ಈ ಘಟನೆ ನಡೆದಿತ್ತು. ವಿಮಾನದಲ್ಲಿದ್ದ ಸಹಪ್ರಯಾಣಿಕರು ಈ ಘಟನೆಯನ್ನು ರೆಕಾರ್ಡ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್ (Viral Video)ಆಗಿದೆ.

ನಡೆದಿದ್ದೇನು?

ಜನವರಿ 11ರಂದು ಈ ಘಟನೆ ನಡೆದಿದ್ದು, ಹಾಲ್ ಆಫ್ ಫೇಮ್ ಯುಎಫ್‌ಸಿ ಫೈಟರ್ ವಿಮಾನದ ನಿರ್ಗಮನ(Exit) ಸಾಲಿನ ಸೀಟಿನಲ್ಲಿ ಕುಳಿತಿದ್ದರು. ಈ ಸೀಟಿನಲ್ಲಿ ಕುಳಿತವರು ಯಾವುದಾದರೂ ಅಗತ್ಯ ಪರಿಸ್ಥಿತಿ ಬಂದರೆ ಸಹಾಯ ಮಾಡಬೇಕಾಗಬಹುದಂತೆ. ಹಾಗಾಗಿ ವಿಮಾನ ಸಿಬ್ಬಂದಿಯವರು ಖಬೀಬ್ ನುರ್ಮಾಗೊಮೆಡೊವ್ ಬಳಿ ಯಾವುದಾದರೂ ತುರ್ತು ಸಂದರ್ಭ ಬಂದರೆ ಇತರ ಪ್ರಯಾಣಿಕರಿಗೆ ಸಹಾಯ ಮಾಡಬಹುದೇ ಎಂದು ಕೇಳಿದ್ದಾರೆ. ಆದರೆ ಖಬೀಬ್ ಇದಕ್ಕೆ ಒಪ್ಪಿಗೆ ಸೂಚಿಸದೇ ಇದ್ದಾಗ ಸಿಬ್ಬಂದಿ ನಿರ್ಗಮನ ಸಾಲಿನಲ್ಲಿ ಕುಳಿತುಕೊಳ್ಳಲು ನಾವು ನಿಮಗೆ ಅನುಮತಿಸುವುದಿಲ್ಲ. ನಾನು ಸೂಪರ್‌ವೈಸರ್‌ ಅನ್ನು ಕರೆಯುತ್ತೇನೆ. ನೀವು ಬೇರೆ ಸೀಟಿನಲ್ಲಿ ಕುಳಿತುಕೊಳ್ಳಿ ಅಥವಾ ವಿಮಾನದಿಂದ ಕೆಳಗಿಳಿಯಬಹುದುʼ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಖಬೀಬ್‌ ಇದು ನ್ಯಾಯವಲ್ಲ. ಅದು ಅಲ್ಲದೇ, ʼನಾನು ಚೆಕ್-ಇನ್‌ನಲ್ಲಿದ್ದಾಗ, ವಿಮಾನ ಸಿಬ್ಬಂದಿ ನಿಮಗೆ ಇಂಗ್ಲಿಷ್ ಬರುತ್ತದೆಯೇʼ ಎಂದು ಕೇಳಿದ್ದರು ನಾನು ʼಹೌದುʼ ಎಂದು ಹೇಳಿದ್ದೇನೆ. ಮತ್ಯಾಕೆ ನೀವು ಹೀಗೆ ಮಾಡುತ್ತೀರಿ ಎಂದು ಖಬೀಬ್‌ ಪ್ರಶ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಇಂಗ್ಲಿಷ್‌ ಸರಿಯಾಗಿ ಮಾತನಾಡಲು ಬಂದಿಲ್ಲ ಎಂಬ ಕಾರಣಕ್ಕೆ ಸುಮ್ಮನೆ ಬೇರೆ ನೆಪ ಹೇಳಿ ಈ ರೀತಿ ಅವಮಾನಿಸಿದ್ದಾರೆ ಎಂದು ಖಬೀಬ್‌ ದೂರಿದ್ದಾರೆ.

ಇನ್ನು ಖಬೀಬ್‌ ವಿರೋಧದ ನಡುವೆಯೇ, ವಿಮಾನ ಪರಿಚಾರಕರ ವ್ಯವಸ್ಥಾಪಕರನ್ನು ಕರೆತರಲಾಗಿತ್ತು. ಬೇರೆ ಸೀಟನ್ನು ನೀಡಿದ್ದರೂ, ಪರಿಸ್ಥಿತಿ ಬಗೆಹರಿಯಲಿಲ್ಲ. ಕೊನೆಗೆ ಖಬೀಬ್‌ ಮತ್ತು ಅವರ ಸಹಚರರನ್ನು ವಿಮಾನದಿಂದ ಹೊರಗೆ ಕಳುಹಿಸಲಾಗಿತ್ತು. ಜನವರಿ 18 ರಂದು ನಡೆಯಲಿರುವ ಯುಎಫ್‌ಸಿ 311 ಕಾರ್ಯಕ್ರಮಕ್ಕೆ ತಮ್ಮ ತಂಡದ ಆಟಗಾರರನ್ನು ಬೆಂಬಲಿಸಲು ಅವರು ಮುಂಚಿತವಾಗಿ ಕ್ಯಾಲಿಫೋರ್ನಿಯಾಕ್ಕೆ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.

ಈ ಘಟನೆಯನ್ನು ನೋಡಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು “ಸಿಬ್ಬಂದಿ ಸರಿಯಾದ ಕೆಲಸ ಮಾಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡಲು ಒಪ್ಪದಿದ್ದರೆ, ಅವರನ್ನು ಸ್ಥಳಾಂತರಿಸಬೇಕು. ಅವರು ವಾಸ್ತವವಾಗಿ ಅವರನ್ನು ಅನೇಕ ಬಾರಿ ಕೇಳಿದರೆ ಮತ್ತು ಅವರು “ಹೌದು” ಹೊರತುಪಡಿಸಿ ಬೇರೆ ಯಾವುದೇ ಉತ್ತರದೊಂದಿಗೆ ಪ್ರತಿಕ್ರಿಯಿಸದಿದ್ದರೆ, ಅವರು ಆಸನಗಳನ್ನು ಬದಲಾಯಿಸಲು ಅಥವಾ ವಿಮಾನದಿಂದ ಇಳಿಯಲು ಹೇಳುವ ಮೂಲಕ ಸರಿಯಾದ ಕೆಲಸವನ್ನು ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಜಸ್ಟಿನ್ ಬೀಬರ್ ‘ಬೇಬಿ’ ಹಾಡಿಗೆ ಸಿಕ್ಕಿದೆ ಅದ್ಭುತ ಖವ್ವಾಲಿ ಸ್ಪಿನ್; ನೆಟ್ಟಿಗರು ಹೇಳಿದ್ದೇನು?

ಇನ್ನೊಬ್ಬರು, “ವಿಮಾನ ಪರಿಚಾರಕನನ್ನು ಕೆಲಸದಿಂದ ತೆಗೆದುಹಾಕಬೇಕು! ತಪ್ಪು ತಿಳುವಳಿಕೆಯಿಂದ ಅವರನ್ನು ಹೊರಹಾಕುವ ಮಟ್ಟಕ್ಕೆ ಬಂದಿದ್ದಾರೆ. ತುರ್ತು ಸಂದರ್ಭದಲ್ಲಿ ಅಗತ್ಯವಾದ ಕ್ರಮಗಳನ್ನು ನಿರ್ವಹಿಸಲು ಅವರು ಒಪ್ಪಿಕೊಂಡ ನಂತರವೂ ಅವರನ್ನು ಹೊರಗೆ ಕಳಿಸಿದ್ದಾರೆ” ಎಂದಿದ್ದಾರೆ.

Leave a Reply

Your email address will not be published. Required fields are marked *