ಜೈಪುರ: ಮನುಷ್ಯನಿಗೆ ಆಸ್ತಿ, ಹಣದ ಮೇಲೆ ಇರುವ ಪ್ರೀತಿ ಇನ್ನೊಬ್ಬರ ಜೀವದ ಮೇಲಿಲ್ಲ. ಆಸ್ತಿಯ ವಿಚಾರಕ್ಕೆ ಏನು ಬೇಕಾದರೂ ಮಾಡುವ ಮನಸ್ಥಿತಿ ಈಗಿನವರದ್ದು! ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಛತ್ತರ್ಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವಿನ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಇದರಿಂದ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ಈ ಘೋರ ದೃಶ್ಯವನ್ನು ರೆಕಾರ್ಡ್ ಮಾಡಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೈರಲ್ ವಿಡಿಯೊದಲ್ಲಿ, ಜನರು ಕೋಲುಗಳನ್ನು ಹಿಡಿದು ಹೊಡೆದಾಡಿದ್ದಾರೆ. ಮಹಿಳೆಯರು ಸಹ ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ. ಕೆಲವು ಪುರುಷರು ವಾಗ್ವಾದದಲ್ಲಿ ತೊಡಗಿ ಮಹಿಳೆಯರ ಕೂದಲನ್ನು ಎಳೆದಿದ್ದಾರೆ. ಇದು ಮತ್ತಷ್ಟು ಜಗಳಕ್ಕೆ ಕಾರಣವಾಗಿದೆ.
#WATCH | MP: Over Dozen Injured In Violent Clash Between Two Families Over Land Dispute In Chhatarpur#MadhyaPradesh #chhatarpur #MPNews pic.twitter.com/JAE9TCrW6N
— Free Press Madhya Pradesh (@FreePressMP) November 24, 2024
ಈ ಘರ್ಷಣೆಯಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಎರಡೂ ಪಕ್ಷಗಳು ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರುಗಳನ್ನು ದಾಖಲಿಸಿವೆ. ವರದಿ ಪ್ರಕಾರ, ಕರ್ರಿ ಗ್ರಾಮದ ಮುನ್ನಾ ಲಾಲ್ ಸೋನಿ ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಆರಿಸಿದ ಭೂಮಿಯ ವಿಚಾರದಲ್ಲಿ ಈ ವಿವಾದ ಶುರುವಾಗಿದೆ. ನಾಥೂರಾಮ್ ಸೋನಿ ಮತ್ತು ಅವರ ಕುಟುಂಬ ಸೇರಿ ಈ ಭೂಮಿ ತಮ್ಮ ಪೂರ್ವಜರ ಆಸ್ತಿ ಎಂದು ಹೇಳಿ ಮನೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಇದನ್ನೂ ಓದಿ:ನಡುಬೀದಿಯಲ್ಲಿ ನಟ-ನಿರ್ದೇಶಕನ ನಡುವೆ ಬಿಗ್ ಫೈಟ್! ಡಿಸಿಪಿ ಕಚೇರಿ ಎದುರೇ ಹೈಡ್ರಾಮಾ
ಘಟನೆಯ ನಂತರ, ಎರಡೂ ಪಕ್ಷಗಳು ಸಿವಿಲ್ ಲೈನ್ ಪೊಲೀಸ್ ಠಾಣೆಗೆ ಹೋಗಿ ಪರಸ್ಪರರ ವಿರುದ್ಧ ದೂರುಗಳನ್ನು ದಾಖಲಿಸಿವೆ. ದೂರುಗಳ ಆಧಾರದ ಮೇಲೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದು, ಈ ವಿಷಯದ ಬಗ್ಗೆ ತನಿಖೆ ಮಾಡಿದ್ದಾರೆ. ಎರಡೂ ಕಡೆಯವರು ದೂರುಗಳನ್ನು ದಾಖಲಿಸಿದ್ದಾರೆ ಮತ್ತು ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಛತ್ತರ್ಪುರದ ಸಿವಿಲ್ ಲೈನ್ನ ಸ್ಟೇಷನ್ ಉಸ್ತುವಾರಿ ವಾಲ್ಮಿಕ್ ಚೌಬೆ ಖಚಿತಪಡಿಸಿದ್ದಾರೆ.