ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ದೆಹಲಿ- ಮಂಬಯಿ ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ (Delhi-Mumbai Gareeb Rath Express) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು (female police officer ) ಕಪಾಳ ಮೋಕ್ಷ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಇದು ರೈಲ್ವೆ ಭದ್ರತಾ ಸಿಬ್ಬಂದಿಯ (railway security personnel) ನಡವಳಿಕೆ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.
ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದನ್ನು ಕಾಣಬಹುದು. ಗರೀಬ್ ರಥದಲ್ಲಿ ಟಿಕೆಟ್ ಇಲ್ಲದೆ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ ಕಿವಿ ಹಿಂಡಿದ್ದಾರೆ. ಸುತ್ತಮುತ್ತ ಸಾಕಷ್ಟು ಮಂದಿ ಇದ್ದು, ಹಲವು ಮಂದಿ ಆತನ ಅಭಿಪ್ರಾಯವನ್ನೊಮ್ಮೆ ಕೇಳಿ ಎಂದು ಸಿಬ್ಬಂದಿಗೆ ಹೇಳಿದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರ ಸಂಪೂರ್ಣ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
Delhi Mumbai Gareeb Rath: When there is a ticketless or rowdy female passenger in a train then railways do not have any female police to handle her but they having enough female cops to assault and slap male passengers.Pls take cognisance @AshwiniVaishnawpic.twitter.com/e1qeKbRo46
— NCMIndia Council For Men Affairs (@NCMIndiaa) September 17, 2024
ಕೆಲವರು ಈ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯು ವ್ಯಾಪಕ ಟೀಕೆಗೆ ಗುರಿಯಾಗಿದೆ. ವಿಶೇಷವಾಗಿ ಮಹಿಳಾ ಪ್ರಯಾಣಿಕರಿರುವ ಸ್ಥಳಗಳಲ್ಲಿ ಇಂತಹ ಸಮಸ್ಯೆಗಳನ್ನು ಬಗೆ ಹರಿಸಲು ಮಹಿಳಾ ಪೊಲೀಸ್ ಅಧಿಕಾರಿಗಳ ಕೊರತೆಯ ಬಗ್ಗೆ ಅನೇಕರು ಪ್ರಶ್ನಿಸಿದ್ದಾರೆ. ರೈಲ್ವೇ ಭದ್ರತೆಯಲ್ಲಿನ ಲೋಪಗಳ ಕುರಿತು ಹಲವಾರು ವಿಷಯಗಳನ್ನು ಈ ವಿಡಿಯೋ ಬಹಿರಂಗಪಡಿಸಿದೆ. ಪುರುಷ ಪ್ರಯಾಣಿಕರನ್ನು ನಿಭಾಯಿಸಲು ಮಹಿಳಾ ಅಧಿಕಾರಿಗಳು ಏಕೆ ಇದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮಹಿಳಾ ಪ್ರಯಾಣಿಕರು ಒಳಗೊಂಡ ವಿವಾದಗಳನ್ನು ನಿಭಾಯಿಸಲು ಯಾರು ಯಾಕೆ ಇರುವುದಿಲ್ಲ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಕೆಲವರು ಇಂತಹ ಸಂದರ್ಭಗಳಲ್ಲಿ ಬಲ ಪ್ರಯೋಗ ಮಾಡುವುದು ಅನಗತ್ಯ ಎಂದು ಹೇಳಿದ್ದಾರೆ. ರೈಲ್ವೇ ಪೊಲೀಸರಿಗೆ ಒದಗಿಸಲಾದ ಪ್ರೋಟೋಕಾಲ್‌ಗಳು ಮತ್ತು ತರಬೇತಿಯ ಪರಿಶೀಲನೆಗೆ ಹಲವು ಮಂದಿ ಒತ್ತಾಯಿಸಿದ್ದಾರೆ. ಇನ್ನು ಕೆಲವರು ಲಿಂಗವನ್ನು ಲೆಕ್ಕಿಸದೆ ಟಿಕೆಟ್‌ರಹಿತ ಪ್ರಯಾಣಿಕರೊಂದಿಗೆ ಸಮವಾಗಿ ಮತ್ತು ಪರಿಣಾಮಕಾರಿ ವಿಧಾನಗಳ ಮೂಲಕ ಕ್ರಮಕೈಗೊಳ್ಳಬೇಕು ಅಗತ್ಯವನ್ನು ತಿಳಿಸಿದ್ದಾರೆ.
Self Harming: ಅತಿಯಾದ ಕೆಲಸದ ಒತ್ತಡ ತಾಳಲಾರದೆ 26 ವರ್ಷದ ಯುವತಿ ಆತ್ಮಹತ್ಯೆ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಗಳು ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಅಧಿಕಾರಿಗಳು ತಮ್ಮ ನೀತಿಗಳನ್ನು ಸ್ಪಷ್ಟಪಡಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಹೆಚ್ಚಾಗುತ್ತಿದೆ.