Monday, 13th January 2025

Viral Video: ಮೋಜಿಗಾಗಿ ಕಾಡಾನೆಗೆ ಕಿರಿಕಿರಿ ಮಾಡಿದ ಯುವಕ; ಆಮೇಲೆ ಆಗಿದ್ದೇನು? ವಿಡಿಯೊ ಇದೆ

Viral Video

ನವದೆಹಲಿ: ಯಾವುದೇ ಪ್ರಾಣಿಗಳು ತಮಗೆ ತೊಂದರೆಯುಂಟಾಗದ ಹೊರತು ಸುಖಾ ಸುಮ್ಮನೆ ಮನುಷ್ಯರ ಮೇಲೆ ದಾಳಿಗೆ ಮುಂದಾಗುವುದಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಮಾತ್ರ ತಮ್ಮ ಪಾಡಿಗೆ ತಾವಿರುವ ಪ್ರಾಣಿಗಳನ್ನೇ ಕೆಣಕಲು ಯತ್ನಿಸಿ ಕೊನೆಗೆ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇದೀಗ ಅಂತಹದ್ದೇ ಒಂದು ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ(Viral Video).

ಭಾರತೀಯ ಅರಣ್ಯ ಸೇವೆಯ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಯುವಕನೊಬ್ಬ ಆನೆಗಳಿಗೆ ಕಿರುಕುಳ ನೀಡುತ್ತಿರುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಆನೆಗೆ ಕಿರುಕುಳ ನೀಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅವರು ವಿವರಿಸಿದ್ದಾರೆ.ನೀವು ಮೋಜಿಗಾಗಿ ಆನೆಗೆ ತೊಂದರೆ ಕೊಟ್ಟರೆ ಅದು ಕೂಡ ಆಕ್ರಮಣಕಾರಿಯಾಗಿ ಮನುಷ್ಯರ ಮೇಲೆ ದಾಳಿ ಮಾಡಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿ ತನ್ನ ಸೋಶಿಯಲ್ ಮೀಡಿಯಾದ ಎಕ್ಸ್‌ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು “ನೀವು ಆನೆಗಳನ್ನು ಎದುರಿಸುವಷ್ಟು ಸಾಮರ್ಥ್ಯ ಹೊಂದಿರಬಹುದು. ಆದರೆ ಈ ಕಿರಿಕಿರಿಗೊಂಡ ಪ್ರಾಣಿಗಳು ಮುಂದಿನ ಕೆಲವು ದಿನಗಳವರೆಗೆ ಇತರ ಮನುಷ್ಯರನ್ನು ನೋಡಿದರೆ ಶಾಂತಿಯುತವಾಗಿ ವರ್ತಿಸುವುದಿಲ್ಲ. ನಿಮ್ಮ ಮೋಜಿಗಾಗಿ ಕಾಡು ಪ್ರಾಣಿಗಳಿಗೆ ಕಿರಿಕಿರಿ ಮಾಡಬೇಡಿ” ಎಂದು ಬರೆದಿದ್ದಾರೆ.

ಆನೆಗಳು ಹೆಚ್ಚು ಬುದ್ಧಿವಂತ ಮತ್ತು ಸಾಮಾಜಿಕ ಪ್ರಾಣಿಗಳು. ಮಾನವರಿಂದ ಕಿರುಕುಳ ಅಥವಾ ಕಿರಿಕಿರಿಯು ಮುಂದಿನ ದಿನಗಳಲ್ಲಿ ಆನೆಗಳ ನಡವಳಿಕೆಯಲ್ಲಿ ಹಲವಾರು  ಬದಲಾವಣೆಗಳಿಗೆ ಕಾರಣವಾಗಬಹುದು.ಹಿಂದೆ ಮಾಡಿದ ಕಿರಿಕಿರಿಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯದಿಂದಾಗಿ, ಆನೆಗಳು ತಕ್ಷಣ ಹೆದರದಿದ್ದರೂ ಕೂಡ, ಮಾನವರನ್ನು ಎದುರಿಸುವಾಗ ರಕ್ಷಣಾತ್ಮಕ ನಡವಳಿಕೆಗಳನ್ನು ಪ್ರದರ್ಶಿಸಬಹುದು ಎಂದು ಅವರು ಹೇಳಿದ್ದಾರೆ.

ಒಂದು ಆನೆಗೆ ಕಿರುಕುಳ ನೀಡಿದರೆ ಇಡೀ ಆನೆಗಳ ಗುಂಪು ರೊಚ್ಚಿಗೇಳಬಹುದು.  ಅವು ತಮ್ಮ ದುರ್ಬಲ ಸದಸ್ಯರನ್ನು ರಕ್ಷಿಸಲು ಪ್ರಯತ್ನಿಸುವಾಗ ಕರ್ಕಶ ಧ್ವನಿಯಲ್ಲಿ ಕೂಗುತ್ತಾ ಮತ್ತು  ಅಡ್ಡಾದಿಟ್ಟಿಯಾಗಿ ಓಡುತ್ತಾ ಬರಬಹುದು. ಇದರಿಂದ ಬೇರೆಯವರಿಗೆ ಹಾನಿಯಾಗಬಹುದು. ವನ್ಯಜೀವಿಗಳಿಗೆ ಕಿರುಕುಳ ನೀಡುವುದು ಧೈರ್ಯಶಾಲಿಯೂ ಅಲ್ಲ ಅಥವಾ ತಮಾಷೆಯೂ ಅಲ್ಲ – ಇದು ಬೇಜವಾಬ್ದಾರಿಯುತ ಮತ್ತು ಅಪಾಯಕಾರಿ ಎಂದು ಭಾರತೀಯ ಅರಣ್ಯ ಸೇವೆಯ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಒಲೆ ಮೇಲೆ ‘ಚೋಲೆ ಮಸಾಲೆ’ ಇಟ್ಟು ಮಲಗಿದವರು ಬೆಳಗ್ಗೆ ಹೆಣವಾದರು; ಅಷ್ಟಕ್ಕೂ ಆಗಿದ್ದೇನು?

Leave a Reply

Your email address will not be published. Required fields are marked *