Wednesday, 8th January 2025

Viral Video: ಈ ವೃದ್ಧನ ಸಾಹಸಕ್ಕೊಂದು ಸಲಾಂ! ಹಗ್ಗದಲ್ಲೇ 1 ಕಿ.ಮೀ. ದೂರ ಜಾರಿದ ವಿಡಿಯೊ ವೈರಲ್

Viral Video

ಶಿಮ್ಲಾ: ಹಿಮಾಚಲ ಪ್ರದೇಶದ ಸ್ಪೈಲ್ ಕಣಿವೆಯಲ್ಲಿ ವ್ಯಕ್ತಿಯೊಬ್ಬ ಹಗ್ಗದ ಮೂಲಕ ಸುಮಾರು 1 ಕಿ.ಮೀ. ದೂರ ಜಾರಿಕೊಂಡು ಹೋದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ. ಇದು 40 ವರ್ಷಗಳ ನಂತರ ‘ಭುಂಡಾ ಮಹಾಯಜ್ಞ’ದ ಸಮಯದಲ್ಲಿ ನಡೆದ ಆಚರಣೆಗಳಲ್ಲಿ ಒಂದು ಎನ್ನಲಾಗಿದೆ. 65 ವರ್ಷದ ಇವರು ಹಳೆಯ ‘ಹಗ್ಗ-ಜಾರುವಿಕೆ’ ಸಂಪ್ರದಾಯವನ್ನು ಜೀವಂತವಾಗಿರಿಸುತ್ತ ಮರದ ತೆಪ್ಪದಲ್ಲಿ ಕಣಿವೆಯ ಮೂಲಕ ಸಂಚರಿಸಿದ್ದಾರೆ.

ಹಿಮಾಚಲ ಪ್ರದೇಶದ ಶಿಮ್ಲಾದ ‘ಸಾವಿನ ಕಣಿವೆ’ಯಲ್ಲಿ ಬೇರೂರಿರುವ ಈ ಆಚರಣೆಯು 4 ದಿನಗಳ ಕಾಲ ನಡೆಯಿತು. ರಾಜ್ಯದ ಶ್ರೀಮಂತ ಪರಂಪರೆಗೆ ಸಂಬಂಧಿಸಿದ ‘ಭುಂಡಾ ಮಹಾ ಯಜ್ಞ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರ್ದಿಷ್ಟ ಸಮುದಾಯದ ವ್ಯಕ್ತಿಯೊಬ್ಬರು ಮರದ ತೆಪ್ಪವನ್ನು ತೆಗೆದುಕೊಂಡು ಒಂದು ಕಿಲೋಮೀಟರ್ ಉದ್ದದ ಹಗ್ಗದ ಮೂಲಕ ಜಾರಿ ಹಳೆಯ ಪದ್ಧತಿಯನ್ನು ಪ್ರದರ್ಶಿಸಿದ್ದಾರೆ.

ಬೇಡ ಜಾತಿಯ ‘ಜೇಡಿ’ ಸಮುದಾಯವನ್ನು ಪ್ರತಿನಿಧಿಸುವ ಸೂರತ್ ರಾಮ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಹಗ್ಗದ ಮೂಲಕ ಜಾರುವ ಮೂಲಕ ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ಪ್ರಯಾಣಿಸುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ.  ಅವರು ತಮ್ಮ ಹಳೆಯ ಅಭ್ಯಾಸವನ್ನು ಜೀವಂತವಾಗಿರಿಸಲು  ಹಗ್ಗದ ಮಾರ್ಗವನ್ನು ಬಳಸಿಕೊಂಡು ಆ ಮೂಲಕ ಜಾರುತ್ತಾ ಕಣಿವೆಯ ಮೂಲಕ ಹಾದು ಹೋದರು.

ಅಪಾಯಕಾರಿಯಾಗಿ ಕಾಣುತ್ತಿದ್ದ ಈ ಚಟುವಟಿಕೆಯಲ್ಲಿ ಆ ವ್ಯಕ್ತಿಯು ಇನ್ನೊಂದು ಬದಿಗೆ ಬಂದಾಗ ಹಗ್ಗವನ್ನು ಒಂದು ತುದಿಯಿಂದ ಸಡಿಲಗೊಳಿಸಲಾಗಿದೆ ಎಂದು ವರದಿಯಾಗಿದೆ. ಸೂರತ್ ರಾಮ್ ಅವರಿಗೆ ಕಟ್ಟಿದ ಹಗ್ಗವು ಅದನ್ನು ಹಿಡಿದಿದ್ದ ಜನರ ಕೈಯಿಂದ ಸ್ವಲ್ಪ ಸಮಯದಲ್ಲೆ ಜಾರಿದೆ. ಆದರೆ ಯಾವುದೇ ಅಪಾಯ ಸಂಭವಿಸುವ ಮೊದಲು ಜನರು ಅವರನ್ನು ಹಿಡಿಯುವಲ್ಲಿ ಯಶಸ್ವಿಯಾದರು ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:ಪ್ರಯಾಣಿಕನ ಬೋರ್ಡಿಂಗ್ ಪಾಸ್‍ ನೋಡಿ ಶಾಕ್‌ ಆದ ಭದ್ರತಾ ಸಿಬ್ಬಂದಿ; ಅಂತಹದ್ದೇನಿದೆ ಇದ್ರಲ್ಲಿ?

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಮ್ಲಾದ ರೋಹ್ರು ಉಪವಿಭಾಗದ ದೂರದ ಗ್ರಾಮವಾದ ದಲ್ಗಾಂವ್‍ನಲ್ಲಿ ನಡೆದಿದ್ದ ಈ ಆಚರಣೆಯನ್ನು ವೀಕ್ಷಿಸಲು ಸಾವಿರಾರು ಜನರು ಆವರಣದಲ್ಲಿ ಜಮಾಯಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

Leave a Reply

Your email address will not be published. Required fields are marked *