ಆಗ್ರಾ: ಇತ್ತೀಚಿನ ದಿನಗಳಲ್ಲಿ ಪಾದಚಾರಿಗಳ ಮೇಲೆ ಬೀದಿ ನಾಯಿಗಳ ದಾಳಿ ನಡೆಸಿರುವ ಘಟನೆಗಳ ಬಗ್ಗೆ ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಅಂತಹದ್ದೇ ಮತ್ತೊಂದು ಭೀಕರ ಘಟನೆ ಉತ್ತರ ಪ್ರದೇಶದ ಆಗ್ರಾದ ಈದ್ಗಾ ಪ್ರದೇಶದ ಕಟ್ಘರ್ ಕಾಲೋನಿಯಲ್ಲಿ ನಡೆದಿದೆ., ವೃದ್ಧೆಯೊಬ್ಬರು ಬೆಳಿಗ್ಗೆ ವಾಕಿಂಗ್ ಮಾಡುವಾಗ ಬೀದಿ ನಾಯಿಗಳು ದಾಳಿ ನಡೆಸಿದ್ದಾವೆ. ಕಿರಿದಾದ ಓಣಿಯಲ್ಲಿ ಸುಮಾರು 7-8 ಬೀದಿ ನಾಯಿಗಳ ಗುಂಪು ವೃದ್ಧೆಯ ಮೇಲೆ ಹಲ್ಲೆ ನಡೆಸಿ ಎಳೆದೊಯ್ದಿದೆ. ಈ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ನಾಯಿಗಳು ವೃದ್ಧೆಯ ಮೇಲೆ ದಾಳಿ ಮಾಡಿದಾಗ ಆಕೆ ಸಹಾಯಕ್ಕಾಗಿ ಕಿರುಚಿದ್ದಾರೆ. ಏಳು ಬೀದಿ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಸಹಾಯಕ್ಕಾಗಿ ಅವರು ಕಿರುಚಿದರೂ, ಯಾರೂ ಸಮಯಕ್ಕೆ ಸರಿಯಾಗಿ ಅವರ ರಕ್ಷಣೆಗೆ ಬರಲಿಲ್ಲ. ಅವರು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ನಾಯಿಗಳು ಹೆಚ್ಚು ಆಕ್ರಮಣಕಾರಿಯಾಗಿದ್ದರಿಂದ ಅವರಿಗೆ ಅದು ಸಾಧ್ಯವಾಗಲಿಲ್ಲ. ನಾಯಿಗಳು ವೃದ್ಧೆಯನ್ನು ಎಳೆದುಕೊಂಡು ಹತ್ತಿರದ ಹೊಲಕ್ಕೆ ಕರೆದೊಯ್ದು ಕಚ್ಚಿ ಹಲ್ಲೆ ಮಾಡಿದ್ದಾವೆ.
आगरा – आगरा का एक रोंगटे खड़े करने वाला सीसीटीवी
— भारत समाचार | Bharat Samachar (@bstvlive) December 24, 2024
➡आवारा कुत्तों ने महिला पर बोला जानलेवा हमला
➡आदमखोर कुत्ते महिला को खींचते प्लाट में ले गया
➡बचने के लिए चीखती चिल्लाती रही बुजुर्ग महिला
➡आधा दर्जन से ज्यादा कुत्तों ने महिला पर बोला हमला
➡सुबह के समय घर से टहलने निकली थी… pic.twitter.com/tHhWAa7aRU
ಮುಂಜಾನೆ ಬೀದಿಗಳಲ್ಲಿ ಯಾರೂ ಇಲ್ಲದ ಕಾರಣ ವೃದ್ಧೆಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ಆಕ್ರಮಣಕಾರಿ ನಾಯಿಗಳಿಂದ ವೃದ್ಧೆ ತನ್ನ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದರೇ? ಇಲ್ಲವೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಆದರೆ ನಾಯಿಗಳು ಅವರನ್ನು ಕಚ್ಚಿದ್ದರಿಂದ ದಾಳಿಯಿಂದ ಅವರಿಗೆ ತೀವ್ರ ಗಾಯಗಳಾಗಿರುವುದಂತು ಖಚಿತ.
ಈ ಸುದ್ದಿಯನ್ನೂ ಓದಿ: ಜೀವ ಉಳಿಸಿದ ದೇವತೆಯನ್ನು 8 ವರ್ಷದ ನಂತರ ಭೇಟಿಯಾದ ಪೈಲೆಟ್! ಈ ಹೃದಯಸ್ಪರ್ಶಿ ವಿಡಿಯೊ ನೋಡಿ
ಈ ಭಯಾನಕ ಘಟನೆಯನ್ನು ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ. ಇತ್ತೀಚಿನ ದಿನಗಳಲ್ಲಿ ನಾಯಿ ದಾಳಿಯ ಘಟನೆಗಳಲ್ಲಿ ಮಕ್ಕಳು ಸೇರಿದಂತೆ ಅನೇಕ ಜನರು ಗಂಭೀರ ಗಾಯಗೊಂಡಿದ್ದಾರೆ. ಈ ವಿಷಯವು ಈಗ ಗಂಭೀರವಾಗುತ್ತಿದೆ ಮತ್ತು ಭವಿಷ್ಯದಲ್ಲಿ ನಾಯಿಗಳ ಹಾವಳಿಯನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.