Wednesday, 8th January 2025

Viral Video: ದುಬಾರಿ ಕಾರಿನಲ್ಲಿ ಬಂದು ಮೊಟ್ಟೆ ವ್ಯಾಪಾರಿಗೆ ಟೋಪಿ ಹಾಕಿದ “ಅಂಡಾ ಚೋರ್”! ವಿಡಿಯೊ ವೈರಲ್‌

Viral Video

ಚಂಡೀಗಢ: ದುಬಾರಿ ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಹೂವಿನ ಪಾಟ್‌ ಕದ್ದುಕೊಂಡು ಹೋದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಅಂಥದ್ದೇ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿದೆ. ಕಾರಿನಲ್ಲಿ ಬಂದ ವ್ಯಕ್ತಿ ಆರು ಬಾಕ್ಸ್‌ ಮೊಟ್ಟೆ ಖರೀದಿಸಿ ಹಣ ನೀಡದೆ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವ್ಯಕ್ತಿಯು ಆನ್‍ಲೈನ್‍ನಲ್ಲಿ ಹಣ ಪಾವತಿಸುವುದಾಗಿ ಹೇಳಿ  ಕ್ಯೂಆರ್ ಕೋಡ್ ಅನ್ನು ತೋರಿಸುವಂತೆ ಮಾರಾಟಗಾರನನ್ನು ಕೇಳಿದ್ದಾನೆ. ಅಂಗಡಿಯವನು ಕ್ಯೂಆರ್ ಸ್ಕ್ಯಾನರ್  ಅನ್ನು ಕಾರಿನ ಬಳಿಗೆ ತರುತ್ತಿದ್ದಂತೆ ಆತ ಕಾರಿನೊಂದಿಗೆ ಪರಾರಿಯಾಗಿದ್ದಾನೆ. 2,100 ರೂ.ಗಳ ಮೊಟ್ಟೆ ಖರೀದಿಸಿ ಒಂದು ರೂಪಾಯಿಯನ್ನೂ ನೀಡದೆ ಅಲ್ಲಿಂದ ಪರಾರಿಯಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಪಂಜಾಬ್‍ನ ಈ ವ್ಯಕ್ತಿ ಮೊಟ್ಟೆಗಳ ಬಾಕ್ಸ್‌ಗಳನ್ನು ಖರೀದಿಸಿದ ನಂತರ ತನ್ನ ಕಾರಿನಲ್ಲಿ  ಇರಿಸಿಕೊಂಡು ಪರಾರಿಯಾದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಮೊಟ್ಟೆಗಳಿಗೆ ಹಣ ನೀಡದೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಆತನನ್ನು “ಅಂಡಾ ಚೋರ್” ಎಂದು ಕರೆದಿದ್ದಾರೆ.

ಮೊಟ್ಟೆ ಖರೀದಿಗೆ ಹಣ ಪಾವತಿಸದೆ ತಪ್ಪಿಸಿಕೊಂಡಿರುವ ವಿಡಿಯೊ ವೈರಲ್ ಆದ ಕೂಡಲೇ ಮರುದಿನ ಆ ವ್ಯಕ್ತಿಯು ಅಂಗಡಿಗೆ ಬಂದು ಹಣ ಪಾವತಿಸಿದ್ದಾನೆ ಎನ್ನಲಾಗಿದೆ. ಆತ ತಾನು ಹಣ ಪಾವತಿ ಮಾಡಿದ್ದೇನೆ ಅಂದುಕೊಂಡು ಅಲ್ಲಿಂದ ಹೋಗಿರುವುದಾಗಿ ತಿಳಿಸಿದ್ದಾನೆ. ಆದರೆ ತನ್ನ ಆನ್‍ಲೈನ್‍ ಪಾವತಿ ವಿಫಲವಾಗಿರುವುದು ತಿಳಿದು ಮತ್ತೆ ಅಂಗಡಿಗೆ ಬಂದು ಹಣ ಪಾವತಿಸಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: ಈ ಬಸ್‌ ಚಾಲಕನ ಶ್ವಾನ ಪ್ರೀತಿಯನ್ನೊಮ್ಮೆ ನೋಡಿ; ಹೃದಯಸ್ಪರ್ಶಿ ವಿಡಿಯೊ ಭಾರೀ ವೈರಲ್‌

ಈ ರೀತಿ ಮೊಟ್ಟೆಗಳನ್ನು ಕಳ್ಳತನ ಮಾಡಿರುವ ಘಟನೆ ಇದೆ ಮೊದಲಲ್ಲ. ಈ ಹಿಂದೆ ಪಂಜಾಬ್ ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ ಒಬ್ಬರು ಗಾಡಿಯಿಂದ ಮೊಟ್ಟೆಗಳನ್ನು ಕದಿಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊವನ್ನು ಪಂಜಾಬ್ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ವಿಡಿಯೊದಲ್ಲಿ, ಮೊಟ್ಟೆ ಗಾಡಿಯ ಮಾಲೀಕರು ದೂರದಲ್ಲಿದ್ದುದ್ದನ್ನು ಗಮನಿಸಿದ ಹೆಡ್ ಕಾನ್ಸ್‌ಟೇಬಲ್‌ ಪ್ರೀತಪಾಲ್ ಸಿಂಗ್ ಗಾಡಿಯಲ್ಲಿರುವ ಮೊಟ್ಟೆಗಳನ್ನು ಕದ್ದು ತನ್ನ ಸಮವಸ್ತ್ರದ ಪ್ಯಾಂಟ್‍ನಲ್ಲಿ ಇಟ್ಟುಕೊಂಡಿದ್ದರು. ಹಾಗಾಗಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು.

Leave a Reply

Your email address will not be published. Required fields are marked *