ಕಾನ್ಪುರ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಏನೇನೋ ಸರ್ಕಸ್ ಮಾಡುತ್ತಾರೆ. ಇದೀಗ ಸೋಶಿಯಲ್ ಮೀಡಿಯಾ ಜಮಾನ! ಏನೇ ಮಾಡಿದ್ರೂ, ನೋಡಿದ್ರೂ ರೀಲ್ಸ್ ಮಾಡಿ ಹಾಕಬೇಕು ಎನ್ನುವ ಹಪಾಹಪಿ. ಇದೀಗ ರೀಲ್ಸ್ ಮಾಡುವ ಕ್ರೇಜ್‌ಗೆ ಬಿದ್ದ ಯುವ ಜೋಡಿಯೊಂದು ಚಲಿಸುತ್ತಿರುವ ಬೈಕ್‍ನಲ್ಲಿ ಅಪಾಯಕಾರಿ ರೊಮ್ಯಾಂಟಿಕ್ ಸ್ಟಂಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆದ ನಂತರ ಕಾನ್ಪುರ ಪೊಲೀಸರು ಅವರ ಬಗ್ಗೆ ತನಿಖೆ ಶುರುಮಾಡಿದ್ದಾರೆ. ಈ ವಿಡಿಯೊದಲ್ಲಿ ಯುವಕ-ಯುವತಿಯ ಅಪಾಯಕಾರಿ ನಡವಳಿಕೆಯು ಜನರಲ್ಲಿ ಆಕ್ರೋಶ ಮತ್ತು ಕಳವಳವನ್ನು ಹುಟ್ಟುಹಾಕಿದೆ. ಇವರು ಸಂಚಾರ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವರದಿ ಪ್ರಕಾರ, ನವಂಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಕಾನ್ಪುರದ ಗಂಗಾ ಬ್ಯಾರೇಜ್ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಯುವಕ ಬೈಕ್‍ನಲ್ಲಿ ಯುವತಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಬೈಕ್‍ನಲ್ಲಿ ಮುಂದೆ ಹೋಗಿದ್ದಾನೆ. ನಂತರ ಅವನು ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದಲ್ಲದೇ, ಅವನ ಸಂಗಾತಿಯನ್ನು ಇಂಧನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಮುಂದೆ ನೋಡದೆ ಬೈಕ್ ಓಡಿಸಿದ್ದಾನೆ. ಈ ಘಟನೆ ನಡೆದ ದಿನಾಂಕ ಮತ್ತು ನಿಖರ ಸಮಯ ತಿಳಿದುಬಂದಿಲ್ಲ.
Reel जो न कराए…. कानपुर में चलती बाइक पर रोमांस हो रहा है. बाइक की टंकी पर बैठी लड़की गले में बाहें डालकर झूम रही है. pic.twitter.com/bOMWfzi20w
— बलिया वाले 2.0 (@balliawalebaba) January 11, 2025
ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಕಾನ್ಪುರ ಪೊಲೀಸರು ತ್ವರಿತ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ. ಆ ಯುವಕ ಕಾನ್ಪುರದ ಆವಾಸ್ ವಿಕಾಸ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಈಗಾಗಲೇ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಕನಿಷ್ಠ 10 ದಂಡಗಳನ್ನು ಕಟ್ಟಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಸುದ್ದಿಯನ್ನು ಓದಿ:ಬಸ್ಸಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಕಂಡಕ್ಟರ್; ವಿಡಿಯೊ ವೈರಲ್
ಈ ಹಿಂದೆ ಕಾನ್ಪುರದ ರಸ್ತೆಗಳಲ್ಲಿ ಇದೇ ರೀತಿಯ ಅಪಾಯಕಾರಿ ನಡವಳಿಕೆಗಳು ಕಂಡುಬಂದಿತ್ತು. ಕಳೆದ ವರ್ಷ ಜೂನ್‍ನಲ್ಲಿ ಚಲಿಸುತ್ತಿದ್ದ ಬೈಕಿನಲ್ಲಿ ನಿಂತು ಟೈಟಾನಿಕ್ ಪೋಸ್ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಗಳ ಮುಂದೆಯೇ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದಕ್ಕಾಗಿ 5,000 ರೂ.ಗಳ ದಂಡವನ್ನು ವಿಧಿಸಲಾಗಿತ್ತು.