Wednesday, 4th December 2024

Viral Video: ಮಹಿಳಾ ಕಾನ್ಸ್‌ಟೇಬಲ್‌ ಜತೆ ಪುಂಡನ ಕಿರಿಕ್‌; ನಡುರಸ್ತೆಯಲ್ಲಿ ಕಪಾಳಮೋಕ್ಷ ಮಾಡಿ… ನಂತರ ಚುಂಬಿಸಿದ ಕಿಡಿಗೇಡಿ; ವಿಡಿಯೊ ಇದೆ.

Viral Video

ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ಹಾಡಹಗಲೇ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾನ್ಸ್‌ಟೇಬಲ್‌ ಮೇಲೆ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ  ಹಲ್ಲೆ ನಡೆಸಿದ್ದಾರೆ.  ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದೆ ಮತ್ತು ಈ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಅನೇಕರು ಇದನ್ನು ಕಂಡು ಆಘಾತಗೊಂಡಿದ್ದಾರೆ.  

ವೈರಲ್ ವಿಡಿಯೊದಲ್ಲಿ  ರಸ್ತೆಯ ಬದಿಯಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ವ್ಯಕ್ತಿ ಅವರ ಬಳಿ ಬೈಕ್ ನಿಲ್ಲಿಸಿದ್ದಾನೆ. ನಂತರ ಇಬ್ಬರ ನಡುವೆ ಮಾತುಕತೆ ನಡೆದು  ನಂತರ ಆತ ಮಹಿಳಾ ಕಾನ್ಸ್‌ಟೇಬಲ್‌ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಅವನು ಅವರನ್ನು ಬಲವಂತವಾಗಿ ಹಿಡಿದುಕೊಂಡು  ಸಾರ್ವಜನಿಕರ ಮುಂದೆ ಕಿಸ್ ಮಾಡಿದ್ದಾನೆ. ಮಹಿಳಾ ಕಾನ್ಸ್‌ಟೇಬಲ್‌ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತ ಆಗ ಕಪಾಳಮೋಕ್ಷ ಮಾಡಿ ರಸ್ತೆಯಲ್ಲಿ ಎಳೆದಾಡಿದ್ದಾನೆ. ನಂತರ ಅಲ್ಲಿದ್ದ ಜನರು ಅವರನ್ನು ಅವನಿಂದ ರಕ್ಷಿಸಿದ್ದಾರೆ. ನಂತರ ಜನರ ನಡುವೆ ವಾಗ್ವಾದ ನಡೆದು ಅವರಲ್ಲಿ ಕೆಲವು ಪುರುಷರು ಮತ್ತೆ ಮಹಿಳಾ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ ಮಾಡಿದ್ದಾರೆ.

ವರದಿ ಪ್ರಕಾರ, ಬೈಕ್ ಸವಾರನನ್ನು ಅಮ್ರೀನ್ ಎಂದು ಗುರುತಿಸಲಾಗಿದೆ. ಆತ  ಮಹಿಳಾ ಕಾನ್ಸ್‌ಟೇಬಲ್‌ಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ಅವರನ್ನು  ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಅಷ್ಟೇ ಅಲ್ಲದೇ ಬೈಕ್‌ನ ನಂಬರ್‌ ಪ್ಲೇಟ್‌ ಫೊಟೋ ತೆಗೆದುಕೊಳ್ಳಲು ಆಕೆ ಯತ್ನಿಸಿದಾಗ ಅಲ್ಲಿದ್ದ ಕೆಲವು ಪುರುಷರು ಮಹಿಳೆಯ ಹೊಟ್ಟೆಗೆ ಒದ್ದು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಪೊಲೀಸ್ ಠಾಣೆ ಸಿವಿಲ್ ಲೈನ್ಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಕಾನ್ಸ್‌ಟೇಬಲ್‌ನೊಂದಿಗೆ ಕೆಲವು ಜನರು ನಿಂದನೆ, ಹಲ್ಲೆ, ಅಸಭ್ಯ ವರ್ತನೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ, ಮೊರಾದಾಬಾದ್ ಪೊಲೀಸ್ ಠಾಣೆ ಸಿವಿಲ್ ಲೈನ್ಸ್‌ನಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತರ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದಾಗಿ  ಮೊರಾದಾಬಾದ್ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಹನುಮಂತನಿಗೆ ಅರ್ಪಿಸಿದ ಹಣ್ಣನ್ನು ತಿಂದ ಕೋತಿ; ಭಕ್ತರ ಸಂಭ್ರಮವೋ… ಸಂಭ್ರಮ! ವಿಡಿಯೊ ವೈರಲ್

ಈ ಘಟನೆಯ ಬಗ್ಗೆ  ದಾಖಲಾದ ಪ್ರಕರಣದಲ್ಲಿ, ತಾನು  ಕರ್ತವ್ಯದಲ್ಲಿರದ  ಸಮಯದಲ್ಲಿ ಅಮ್ರೀನ್  ಹಾಗೂ ಕೆಲವು ಪುರುಷರು ತನ್ನನ್ನು ನಿಂದಿಸಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಮಹಿಳಾ ಕಾನ್ಸ್‌ಟೇಬಲ್‌ ಉಲ್ಲೇಖಿಸಿದ್ದಾರೆ. ಈ ವಿಷಯವನ್ನು ಉದ್ದೇಶಿಸಿ ಮೊರಾದಾಬಾದ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಬಿಡುಗಡೆ ಮಾಡಿದ್ದು, ಮಹಿಳಾ ಕಾನ್ಸ್‌ಟೇಬಲ್‌ ಪ್ರಕರಣ ದಾಖಲಿಸಲಾಗಿದೆ ಮತ್ತು ಕಾನೂನು ಕ್ರಮ ನಡೆಯುತ್ತಿದೆ ಎಂದು ಹೇಳಿದ್ದಾರೆ.