ರೆಸ್ಟೋರೆಂಟ್‍ನ ಫುಡ್ ಟೇಬಲ್ ಮೇಲೆ ಬಾಲಕನೊಬ್ಬ ನೃತ್ಯ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದನ್ನು ಕಂಡು ಅನೇಕ ನೆಟ್ಟಿಗರು ಕಿಡಿಕಾರಿದ್ದಾರೆ. ಊಟ ಮಾಡಲು ಇರುವಂತಹ ಟೇಬಲ್ ಮೇಲೆ ಬಾಲಕ ಡ್ಯಾನ್ಸ್ ಮಾಡಿದ್ದಕ್ಕೆ ನೆಟ್ಟಿಗರು ಬಾಲಕ ಮತ್ತು ಆತನ ಪೋಷಕರ ಮೇಲೆ ಸಿಟ್ಟಾಗಿದ್ದಾರೆ. ವೈರಲ್ ವಿಡಿಯೊದಲ್ಲಿ, ಬಾಲಕ ಸ್ತ್ರೀ 2 ಚಿತ್ರದ ಟ್ರೆಂಡಿಂಗ್ ಹಾಡಾದ ‘ಆಜ್ ಕಿ ರಾತ್’ ಗೆ ಹೆಜ್ಜೆ ಹಾಕಿದ್ದಾನೆ. ನೆಟ್ಟಿಗರು ಟೇಬಲ್ ಮೇಲೆ ಬಾಲಕ ಡ್ಯಾನ್ಸ್ ಮಾಡಿದ್ದು ನೋಡಿ ಇದೆಂಥಾ ಸಂಸ್ಕಾರವೆಂದು ಪೋಷಕರ ವಿರುದ್ಧ ಹರಿಹಾಯ್ದಿದ್ದಾರೆ.
“ನಿಮ್ಮ ಮಗನ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಲು ಬಯಸಿದರೆ ಅದನ್ನು ನೆಲದ ಮೇಲೆ ಮಾಡಿ. ಟೇಬಲ್ ಇರುವುದು ಆಹಾರವನ್ನು ಬಡಿಸಲು. ಸಾರ್ವಜನಿಕ ಸ್ಥಳದಲ್ಲಿ ಇದೆಂಥಾ ಕೆಟ್ಟ ವರ್ತನೆ” ಎಂದು ನೆಟ್ಟಿಗರೊಬ್ಬರು ಈ ಘಟನೆಯನ್ನು ಖಂಡಿಸಿದ್ದಾರೆ. “ಎಂತಹ ನಾಚಿಕೆಗೇಡಿನ ಸಂಗತಿ! ಇದನ್ನೇ ನೀವು ನಿಮ್ಮ ಮಕ್ಕಳಿಗೆ ಹೇಳಿಕೊಡುವುದಾ? ಎಂದು ಮತ್ತೊಬ್ಬರು ಪೋಷಕರ ಮೇಲೆ ಕಿಡಿಕಾರಿದ್ದಾರೆ.
ರೆಸ್ಟೋರೆಂಟ್ ಸಿಬ್ಬಂದಿಗಳು ಯಾರೂ ಆ ಬಾಲಕನನ್ನು ತಡೆಯಲಿಲ್ಲ ಹಾಗಾಗಿ ಅವನು ಫುಡ್ ಟೇಬಲ್ ಮೇಲೆ ನೃತ್ಯ ಮಾಡಲು ಅವರಿಗೆ ಯಾವುದೇ ಆಕ್ಷೇಪವಿಲ್ಲ ಎಂದು ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ.
“ಮೇಜಿನ ಮೇಲೆ ನೃತ್ಯ ಮಾಡುವ ವಿಷಯಕ್ಕೆ ಬಂದರೆ, ಅವನು ಮಗು! ಅವನು ಬೂಟುಗಳನ್ನು ಸಹ ಧರಿಸಿಲ್ಲ. ಪೋಷಕರು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ನಿಮ್ಮ ಮಗುವಿನೊಂದಿಗೆ ಸಮಯ ಕಳೆಯುವುದು ಮತ್ತು ಅವರ ಪ್ರತಿಭೆಯನ್ನು ಪೋಷಿಸುವುದು ನಿಜವಾದ ಪೋಷಣೆ – ” ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.
“ಇಲ್ಲಿ ದೂಷಿಸಿ ಕಾಮೆಂಟ್‍ಗಳನ್ನು ಪೋಸ್ಟ್ ಮಾಡುತ್ತಿರುವ ಜನರ ಬಗ್ಗೆ ನನಗೆ ಬೇಸರವಾಗಿದೆ. ನೀವು ವಿಷಯಗಳನ್ನು ಪ್ರೀತಿಸಲು ಕಲಿಯಿರಿ ಮತ್ತು ನಿಮ್ಮ ಸ್ವಂತ ಮತ್ತು ಇತರರ ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ಮತ್ತು ಪ್ರೋತ್ಸಾಹದಾಯಕವಾಗಿರಲು ಪ್ರಯತ್ನಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ “ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ದುಬಾರಿ ಕಾರಿನಲ್ಲಿ ಬಂದು ಮೊಟ್ಟೆ ವ್ಯಾಪಾರಿಗೆ ಟೋಪಿ ಹಾಕಿದ “ಅಂಡಾ ಚೋರ್”! ವಿಡಿಯೊ ವೈರಲ್
ಹೀಗೆ ಅನೇಕ ನೆಟ್ಟಿಗರು ವೈರಲ್ ವಿಡಿಯೊವನ್ನು “ಕೆಟ್ಟ ಪೋಷಕರ” ಉದಾಹರಣೆ ಎಂದು ಕರೆದರೆ, ಕೆಲವು ನೆಟ್ಟಿಗರು ಮಗುವಿನ ನೃತ್ಯ ಪ್ರದರ್ಶನವನ್ನು ಹೊಗಳಿ ಅವನನ್ನು “ರಾಕ್ ಸ್ಟಾರ್” ಎಂದು ಕರೆದಿದ್ದಾರೆ.