Saturday, 28th December 2024

Viral Video: ಮದುವೆ ಮಂಟಪಕ್ಕೆ ವಧುವಿನ ಎಂಟ್ರಿ  ನೋಡಿ ನೆಟ್ಟಿಗರು ಫುಲ್‌ ಗರಂ! ವಿಡಿಯೊ ಇದೆ

Bride viral video

ನವ ದೆಹಲಿ: ಹಿಂದೆಲ್ಲ ಮದುವೆ ಮಂಟಪಕ್ಕೆ ವಧು-ವರರು ಸಾಮಾನ್ಯವಾಗಿ  ದಿಬ್ಬಣದ ಮೂಲಕ ಬರುವ ಸಂಪ್ರದಾಯವಿತ್ತು. ಆದರೆ ಈಗ ಕಾಲ ಬದಲಾಗಿದೆ. ಮದುವೆ ಎಂಬುದು  ಅನೇಕ ವರ್ಷಗಳ ತನಕವೂ ಸ್ಮರಣೀಯವಾಗಿ ಇರಬೇಕು ಎಂದು ವಿಶೇಷವಾಗಿ ಏನಾದರು ಮಾಡಲು ಸಾಧ್ಯವೇ ಎಂದು ಯೋಚಿಸುತ್ತಾರೆ.  ಕಾಲಕ್ಕೆ ತಕ್ಕ ಹಾಗೆ ಟ್ರೆಂಡ್ ಕೂಡಾ ಬದಲಾಗಿದ್ದು, ವಧು-ವರರು ಡ್ಯಾನ್ಸ್ ಮಾಡುತ್ತಾ ಮಂಟಪಕ್ಕೆ ಎಂಟ್ರಿ ಕೊಡುವಂತಹ, ವಿಶಿಷ್ಟವಾದ ದಿಬ್ಬಣದ ಮೂಲಕ ವಧು ವರರನ್ನು ಮದುವೆ ಮಂಟಪಕ್ಕೆ ಕರೆ ತರುವಂತಹ ಟ್ರೆಂಡ್ ಹೆಚ್ಚಾಗಿದೆ. ಅದೇ ರೀತಿ ಇಲ್ಲೊಂದು  ಮದುವೆ ವಿಡಿಯೋ ವೈರಲ್ ಆಗಿದ್ದು, ನವ ವಧು  ಆಧುನಿಕ ಶೈಲಿಯ ಮದುವೆ ಸಂಭ್ರಮ ಸಾಂಪ್ರದಾಯಿಕ ನಂಬಿಕೆಯ ಮೇಲೆ  ಧಕ್ಕೆ ತಂದಿರುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ‌ (Viral Video)

ವೈರಲ್ ಆದ ವಿಡಿಯೊ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ Shunilshilpkar ಎಂಬ ಖಾತೆ ಮೂಲಕ ಆಪ್ಲೋಡ್ ಮಾಡಲಾಗಿದೆ. ವಿಡಿಯೊದಲ್ಲಿ ವಧುವಿನ ಎಂಟ್ರಿ ವಿಚಾರವು ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗುತ್ತಿದೆ. ಹಾಗಾದರೆ ಈ  ವಿಡಿಯೊದಲ್ಲಿ  ಏನಿದೆ?

ಮದುವೆ  ಮಂಟಪಕ್ಕೆ ವಧುವನ್ನು  ಪಾರದರ್ಶಕ ಬಲೂನ್ (Transparent balloon)  ಮೂಲಕ ಕರೆತಂದಿರುವುದು. ಬಳಿಕ  ವಧುವಿನ ಮುಂಭಾಗದಲ್ಲಿ ರಾಧಾ ಕೃಷ್ಣ ವೇಷಧಾರಿಗಳು ನೃತ್ಯ ಮಾಡುತ್ತಾ ಆಕೆಯನ್ನು ಮಂಟಪಕ್ಕೆ ಸ್ವಾಗತಿಸುತ್ತಾರೆ. ರಾಧಾಕೃಷ್ಣ ಜೊತೆಗೆ ಇತರ ನೃತ್ಯಗಾರರು ಕೂಡ ಹಾಡಿಗೆ ಹೆಜ್ಜೆ  ಹಾಕುತ್ತಾರೆ. ಈ‌ ಮೂಲಕ ಆಧುನಿಕ ಮದುವೆ ಸೆಟಪ್‌ಗೆ ಪೌರಾಣಿಕ ಟಚ್ ಅಪ್ ನೀಡಿದಂತಾಗಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಘಟನೆ ವಿವರ

ವಧುವಿಗೆ ಹೂವಿನ ಸ್ವಾಗತ, ವಧು-ವರರು ಡಾನ್ಸ್ ಮಾಡುತ್ತಾ ಮಂಟಪಕ್ಕೆ ಎಂಟ್ರಿ ಕೊಡುವಂತಹ, ವಿಶಿಷ್ಟವಾದ ದಿಬ್ಬಣದ ಮೂಲಕ ವಧು ವರರನ್ನು ಮದುವೆ ಮಂಟಪಕ್ಕೆ  ಬರ  ಮಾಡಿಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ.  ಆದರೆ ಈ ಮದುವೆ ಮಂಟಪದಲ್ಲಿ  ರಾಧಾ ಕೃಷ್ಣ ವೇಷಧಾರಿಗಳು ವಧುವನ್ನು ಮಂಟಪಕ್ಕೆ  ಸ್ವಾಗತಿಸುತ್ತಿದ್ದಾರೆ. ಬಂಧನ್ ಕಿ ಏಸಿ ಲಗನ್ ಹಾಡಿಗೆ ಎರಡು ಜೋಡಿ ರಾಧಾ ಕೃಷ್ಣರು ನೃತ್ಯ ಮಾಡಿ ವಧುವನ್ನು ಮಂಟಪಕ್ಕೆ  ಸ್ವಾಗತಿಸುತ್ತಾರೆ. ವಧುವಿನ ಸುತ್ತ  ಆಕೆಯ ಕುಟುಂಬಸ್ಥರು ಮತ್ತು ಸ್ನೇಹಿತರ ಬಳಗ ಇದ್ದು  ಎಲ್ಲರೂ ಕೂಡ ಈ ನೃತ್ಯವನ್ನು ಬಹಳ ಖುಷಿಯಿಂದ ವೀಕ್ಷಿಸುತ್ತಾರೆ. ಆದರೆ  ಈ ರೀತಿ ಆಧುನಿಕ ಶೈಲಿಯ ಮದುವೆಗೆ ಸಾಂಪ್ರದಾಯಿಕ ನಂಬಿಕೆಯ ಧಕ್ಕೆ ತರುವುದು ಸರಿಯೇ ಎಂಬ ಬಗ್ಗೆ ಚರ್ಚೆ ಆಗುತ್ತಿದೆ.

ರಾಧಾ ಮತ್ತು ಕೃಷ್ಣ ದೇವರನ್ನು ಹಿಂದು ಧರ್ಮದಲ್ಲಿ ಪೂಜ್ಯನೀಯವಾಗಿ ಕಾಣಲಾಗುತ್ತದೆ. ಹಾಗೆಂದ ಮೇಲೆ ಮದುವೆ ಆಚರಣೆ ಹೆಸರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ ಎಂದು ಹೇಳಲಾಗುತ್ತಿದೆ.  ಕೆಲವರು ಇದು ಸರಿಯಾದ ಕ್ರಮ ಅಲ್ಲ  ಇದು ನಮ್ಮ ಸಂಪ್ರದಾಯಕ್ಕೆ ಅಪಹಾಸ್ಯ ಮಾಡಿದಂತೆ ಎಂದು ಕಮೆಂಟ್ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಾಗಿ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ನಲ್ಲಿ ಇದೆ ಎನ್ನಬಹುದು.

ಈ ಸುದ್ದಿಯನ್ನೂ ಓದಿ: Viral Video: ಸಂಸತ್‌ ಕಲಾಪದ ವೇಳೆ ಧಮ್ ಎಳೆದ ಸಂಸದೆ- ವಿಡಿಯೊ ಭಾರೀ ವೈರಲ್!