ಜೈಪುರ್ : ವಿದ್ಯಾರ್ಥಿಗಳಿಂದ ಕಿಕ್ಕಿರಿದ ರಸ್ತೆಯಲ್ಲಿ ಥಾರ್ ಕಾರೊಂದು ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದುದ್ದಲ್ಲದೇ ನಂತರ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ರಾಜಸ್ಥಾನದ ಸಿಕಾರ್ನ ಪಿಪ್ರಾಲಿ ಪ್ರದೇಶದಲ್ಲಿ ನಡೆದಿದೆ. ಇದರಿಂದ ಆ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡು ಸುಮಾರು 8 ಗಂಟೆಗಳ ಕಾಲ ಜನರು ವಿದ್ಯುತ್ ಇಲ್ಲದೇ ಪರದಾಡುವಂತಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ, ಕೋಚಿಂಗ್ ಕ್ಲಾಸ್ ವಿದ್ಯಾರ್ಥಿಗಳ ದಂಡೇ ನಡೆದುಹೋಗುತ್ತಿದ್ದ ಕಾರಣ ರಸ್ತೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದರ ನಡುವೆ ಸಾಗಲು ಹೆಣಗಾಡುತ್ತಿದ್ದ ಥಾರ್ ಕಾರೊಂದು ಮುಂದೆ ಸಾಗುತ್ತಾ ಒಬ್ಬ ವಿದ್ಯಾರ್ಥಿಯ ಕಾಲಿನ ಮೇಲೆ ಹರಿದಿದೆ. ನಂತರ ಆ ವಿದ್ಯಾರ್ಥಿಯ ಜೊತೆಯಲ್ಲಿರುವ ಸ್ನೇಹಿತರು ಕಾರನ್ನು ಹಿಂದೆ ತೆಗೆದುಕೊಳ್ಳಲು ಹೇಳಿ ವಿದ್ಯಾರ್ಥಿಯನ್ನು ಕಾಪಾಡಿದ್ದಾರೆ. ನಂತರ ಆ ಕಾರು ಮುಂದೆ ಸಾಗಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮುಂದೆ ಹೋಗಿದೆ. ಇಡೀ ಘಟನೆಯು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
राजस्थान : सीकर में थार ने छात्र को मारी टक्कर, फिर तोड़ा बिजली का पोल
— News24 (@news24tvchannel) January 9, 2025
◆ इलाके में 8 घंटे तक नहीं आई बिजली
◆ मामले में पुलिस कार्रवाई जारी है #Rajasthan | #Sikar | #Thar | Rajasthan Thar | Sikar pic.twitter.com/bkRn3avoLR
ಅಂಕಿತ್ ಎಂಬ ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ನಂತರ, ಚಾಲಕ ಕಾರನ್ನು ಹಿಂದೆ ತೆಗೆದುಕೊಂಡು ರಸ್ತೆ ಬದಿಯ ಮೂಲಕ ಹಾದುಹೋಗಲು ಪ್ರಯತ್ನಿಸಿದನು. ಆದರೆ ಈ ಸಂದರ್ಭದಲ್ಲಿ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅದನ್ನು ಉರುಳಿಸಿದೆ. ಈ ಘಟನೆಯಿಂದಾಗಿ ಎಂಟು ಗಂಟೆಗಳ ಕಾಲ ಈ ಪ್ರದೇಶದಲ್ಲಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕೋಚಿಂಗ್ ಇನ್ಸ್ಟಿಟ್ಯೂಟ್ ನಿರ್ದೇಶಕ ವೀರೇಂದ್ರ ಢಾಕಾ ಅವರು ಸಿಕಾರ್ನ ಉದ್ಯೋಗ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಪಘಾತದಲ್ಲಿ ತಮ್ಮ ವಿದ್ಯಾರ್ಥಿಯೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಪರಾರಿಯಾಗಿರುವ ಕಾರಿನ ಚಾಲಕನನ್ನು ಹುಡುಕಾಡಿದ್ದಾರೆ ಮತ್ತು ಥಾರ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ:ಇದು ಓಯೋ ರೂಂ ಅಲ್ಲ… ʻರೋಮ್ಯಾನ್ಸ್ʼ ಮಾಡಿದರೆ ಹುಷಾರ್ ಎಂದ ಆಟೋ ಚಾಲಕ; ತಮಾಷೆ ಮಾಡಿದ ನೆಟ್ಟಿಗರು!
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 8 ಗಂಟೆಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು ಎಂದು ಸ್ಥಳೀಯರು ಸುದ್ದಿ ವರದಿಗಳಲ್ಲಿ ತಿಳಿಸಿದ್ದಾರೆ.