ಬೀಜಿಂಗ್: ಕಂಪೆನಿಗಳಲ್ಲಿ ಆರೋಗ್ಯಕರ ಕೆಲಸದ ವಾತಾವರಣವನ್ನು ನಿರ್ಮಿಸಲು ಟೀಂ ಬಿಲ್ಡಿಂಗ್ (Team Building) ಚಟುವಟಿಕೆಗಳು ನಡೆಯುತ್ತಿರುತ್ತದೆ. ಇದರಿಂದ ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವೂ ನಿರ್ಮಾಣಗೊಳ್ಳುತ್ತದೆ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಇಂತಹ ಚಟುವಟಿಕೆಗಳಲ್ಲಿ ಸಾಮಾನ್ಯವಾಗಿ ತಂಡ ಸಂವಾದ ಇರುತ್ತದೆ, ಆದರೆ ಇನ್ನೂ ಕೆಲವು ವಿಲಕ್ಷಣ ಚಟುವಟಿಕೆಗಳಲ್ಲಿ (Bizarre Activity) ಬೆಂಕಿ ನುಂಗುವ ಚಟುವಟಿಕೆ ಇದ್ದರೆ ಹೇಗಿದ್ದೀತು? ಯೆಸ್..! ನಾವು ಅದನ್ನೇ ಹೇಳಿದ್ದು, ಬೆಂಕಿ ನುಂಗುವ ಚಟುವಟಿಕೆ. ಇಂತಹ ಒಂದು ಚಟುವಟಿಕೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ (social Media) ಫುಲ್ ವೈರಲ್ (Viral Video) ಆಗುತ್ತಿದೆ. ಹಾಗಾದ್ರೆ, ಇದು ಎಲ್ಲಿಯ ವಿಡಿಯೋ? ಏನಿದರ ಕಥೆ? ನಾವು ಹೇಳ್ತೇವೆ ಕೇಳಿ!
ಚೀನಾದ (China) ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಹತ್ತಿ ಸುತ್ತಿದ ಕೋಲಿಗೆ ಬೆಂಕಿ ಹಚ್ಚಿ ಅದನ್ನು ತಮ್ಮ ಬಾಯಲ್ಲಿಟ್ಟುಕೊಳ್ಳಲು ನೀಡಿರುವ ಟಾಸ್ಕ್ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಅಗುವುದು ಮಾತ್ರವಲ್ಲದೇ ಪರ ವಿರೋಧ ಚರ್ಚೆಗಳಿಗೂ ಕಾರಣವಾಗಿದೆ.
ದಿ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ (The South China Morning Post) ತನ್ನ ವರದಿಯಲ್ಲಿ ಈ ವಿಚಿತ್ರ ಚಟುವಟಿಕೆ ಬಗ್ಗೆ ನೆಟಿಜನ್ಸ್ (netizens) ನಲ್ಲಿ ಈ ವಿಚಾರವನ್ನು ವರದಿ ಮಾಡಿದೆ. ಚೀನಾದ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಬೆಂಕಿ ನುಂಗುವ ಚಟುವಟಿಕೆಯನ್ನು ಮಾಡುವಂತೆ ಒತ್ತಾಯಿಸುತ್ತಿದೆ ಎಂದು ಅದು ತನ್ನ ವರದಿಯಲ್ಲಿ ಖಂಡಿಸಿದೆ. ಈ ವರದಿಯು ಆನ್ ಲೈನ್ ಬಳಕೆದಾರರ ಅಭಿಪ್ರಾಯಗಳನ್ನು ಕೋಟ್ ಮಾಡಿದ್ದು, ಈ ಟೀಂ ಬಿಲ್ಡಿಂಗ್ ಚಟುವಟಿಕೆಯನ್ನು ಅರ್ಥರಹಿತವೆಂದು ಟೀಕಿಸಿದೆ.
ಈ ಚಟುವಟುಕೆಯಲ್ಲಿರುವಂತೆ, ಈ ಸಂಸ್ಥೆಯ ಉದ್ಯೋಗಿಗಳು ಹತ್ತಿ ಸುತ್ತಿದ್ದ ಕೋಲೊಂದನ್ನು ಹಿಡಿದುಕೊಳ್ಳಬೇಕು. ಬಳಿಕ, ಇದಕ್ಕೆ ಬೆಂಕಿಯನ್ನು ನೀಡಲಾಗುತ್ತದೆ ಮತ್ತು ಇದನ್ನು ಉದ್ಯೋಗಿಗಳು ಒಬ್ಬೊಬ್ಬರಾಗಿ ತಮ್ಮ ಬಾಯಲ್ಲಿ ಇರಿಸಿಕೊಳ್ಳಬೇಕೆಂದು ಈ ಚಟುವಟಿಕೆಯ ನಿಯಮವಾಗಿದೆ. ಈ ಚಟುವಟಿಕೆಯ ಮೂಲಕ ಉದ್ಯೋಗಿಗಳಲ್ಲಿರುವ ಭಯವನ್ನು ಹೋಗಲಾಡಿಸಬಹುದು ಹಾಗೂ ಅವರಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಚಟುವಟಿಕೆ ಸಹಕಾರಿಯಾಗುತ್ತದೆ ಎಂಬುದು ಇದರ ಉದ್ದೇಶವೆಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Viral Video: ಈ ಅಜ್ಜಿಯ ಕಾರ್ ಡ್ರೈವಿಂಗ್ ಜೋಷ್ ಕಂಡು ನೆಟ್ಟಿಗರೇ ಶಾಕ್! ವಿಡಿಯೊ ವೈರಲ್
ಇಷ್ಟಕ್ಕೂ ಕಂಪೆನಿಯೊಂದರಲ್ಲಿ ನಡೆದ ಈ ವಿಚಿತ್ರ ಘಟನೆ ಹೊರಪ್ರಪಂಚಕ್ಕೆ ತಿಳಿದುಬಂದಿದ್ದಾರೂ ಹೇಗೆ ಎಂದು ಹೇಳೋದಾದ್ರೆ, ಈ ಸಂಸ್ಥೆಯ ಉದ್ಯೋಗಿಯೊಬ್ಬರು ಇದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಕೆಲಸವನ್ನು ಉಳಿಸಿಕೊಳ್ಳುವ ಸಲುವಾಗಿ ನಾನು ಈ ಕಾರ್ಯವನ್ನು ಮಾಡಬೇಕಾಯಿತು ಎಂದು ಆಕೆ ಹೇಳಿಕೊಂಡಿದ್ದಾರೆ. ಹೀಗೆ ಬೆಂಕಿಯ ಹತ್ತಿ ಕೋಲನ್ನು ತನ್ನ ಬಾಯಿಯೊಳಗೆ ತೂರಿಸಿಕೊಳ್ಳುವ ಸಂದರ್ಭದಲ್ಲಿ ತನಗೆ ಬಹಳಷ್ಟು ಹೆದರಿಕೆಯಾಯಿತು ಎಂಬುದಾಗಿಯೂ ಆಕೆ ಹೇಳಿಕೊಂಡಿರುವುದನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
‘ಈ ಪರ್ಫರ್ಮ್ ಮಾಡುವವರು ತಮ್ಮ ಉಸಿರಾಟವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು, ತಮ್ಮ ಬಾಯಿಯ ತೇವಾಂಶವನ್ನು ಇರಿಸಿಕೊಳ್ಳಬೇಕು ಮತ್ತು ನಿಗದಿತ ಸಮಯದಲ್ಲೇ ಈ ಫರ್ಮಾರ್ಮೆನ್ಸ್ ಮುಗಿಸಬೇಕು ಎಂದು ಸೂಚನೆಯನ್ನು ನೀಡಲಾಗಿತ್ತು.