Wednesday, 25th December 2024

Viral Video: ರೀಲ್ಸ್ ಲೋಕದ ಫೀಲಿಂಗ್ಸ್‌ಗೆ ಕಿಚ್ಚು ಹಚ್ಚಿದ ಲೇಡಿ ಪ್ರೊಫೆಸರ್! ‘ಪೀಲಿಂಗ್ಸ್’ ಹಾಡಿಗೆ ಸಖತ್ ಸ್ಟೆಪ್ಸ್

ಕೊಚ್ಚಿ: ಐಕಾನ್ ಸ್ಟಾರ್ (Icon Star) ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ-2 (Pushpa 2) ಮೂವಿ ದೇಶದೆಲ್ಲಡೆ ‘ಭವಾಲ್’ ಎಬ್ಬಿಸುತ್ತಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಈ ಚಿತ್ರದ ಹಾಡುಗಳು, ಡೈಲಾಗ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಂಕರ್ ಬಾಬು ಕಂಡುಕೂರಿ ಮತ್ತು ಲಕ್ಷ್ಮೀ ದಾಸ ಹಾಡಿರುವ ಈ ಚಿತ್ರದ ‘ಪೀಲಿಂಗ್ಸ್’ (Peelings) ಹಾಡಿಗೆ ಕಾಲೇಜು ಪ್ರೊಫೆಸರ್ ಒಬ್ರು ಸ್ಟೂಡೆಂಟ್ಸ್ ಜೊತೆ ಸೇರಿ ಹಾಕಿರುವ ಸಖತ್ ಸ್ಟೆಪ್ಸ್ ನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗಿದ್ದು ನೆಟ್ಟಿಗರ ಹಾರ್ಟ್‌ಬೀಟ್‌ ಜಾಸ್ತಿಮಾಡುತ್ತಿದೆ.

ಕೇರಳದ ಕೊಚ್ಚಿನ್ ವಿಶ್ವವಿದ್ಯಾನಿಲಯದ ಸೈನ್ಸ್ ಆಂಡ್ ಟೆಕ್ನಾಲಜಿಯ (CUSAT) ಮೈಕ್ರೋ ಬಯಾಲಜಿ ವಿಭಾಗದ ವಿಭಾಗ ಮುಖ್ಯಸ್ಥೆಯಾಗಿರುವ (HOD) ಪಾರ್ವತಿ ವೇಣು ಅವರೇ ತನ್ನ ಈ ಸೆನ್ಸೇಷನ್ ಸ್ಪೆಪ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಪ್ರೊಫೆಸರ್ ಆಗಿದ್ದಾರೆ. ತಮ್ಮ ಕಾಲೇಜಿನಲ್ಲಿ ನಡೆದ ಇವೆಂಟ್ ಒಂದರಲ್ಲಿ ಪುಷ್ಪ-2 ಚಿತ್ರದ ‘ಪೀಲಿಂಗ್’ (Peeling) ಹಾಡಿಗೆ ವಿದ್ಯಾರ್ಥಿನಿಯರು ಡ್ಯಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬರುವ ಪ್ರೊಫೆಸರ್ ಪಾರ್ವತಿ ಅವರು ಸೀರೆಯಲ್ಲೇ ವಿದ್ಯಾರ್ಥಿನಿಯರೊಂದಿಗೆ ಸ್ಟೆಪ್ಸ್ ಹಾಕಿದ್ದಾರೆ.

ಕಡು ನೀಲಿ ಬ‍ಣ್ಣದ ಸೀರೆ ಉಟ್ಟಿದ್ದ ಪಾರ್ವತಿ ಅವರು ಪ್ರಾರಂಭದಲ್ಲಿ ವಿದ್ಯಾರ್ಥಿನಿಯರ ಡ್ಯಾನ್ಸನ್ನು ಸ್ವಲ್ಪ ಹೊತ್ತು ನೋಡಿ ಬಳಿಕ, ತನ್ನ ಕೈಯಲ್ಲಿದ್ದ ಹ್ಯಾಂಡ್ ಬ್ಯಾಗನ್ನು ಅಲ್ಲೇ ಇದ್ದ ಚಯರ್ ನಲ್ಲಿರಿಸಿ ವಿದ್ಯಾರ್ಥಿನಿಯರನ್ನು ಸೇರಿಕೊಂಡು ತಾನೂ ಸಖತ್ ಸ್ಪೆಪ್ಸ್ ಹಾಕಲು ಪ್ರಾರಂಭಿಸಿದ್ದಾರೆ. ಇದು, ಡ್ಯಾನ್ಸ್ ಮಾಡ್ತಿದ್ದ ವಿದ್ಯಾರ್ಥಿನಿಯರ ಜೊಶನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ಅಲ್ಲಿದ್ದವರೆಲ್ಲಾ ಒಮ್ಮೆ ಶಾಕ್ ಗೆ ಒಳಗಾಗುವಂತೆ ಮಾಡಿದೆ.

ಒಟ್ಟಾ_ಮೈಂಡ್ (ottta_mynd) ಎಂಬ ಇನ್ ಸ್ಟಾ (Instagram) ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದೆ. ‘ನಿಮ್ಮ ಹೆಚ್.ಒ.ಡಿ. ಮೇಡಂ ನಿಮ್ಗಿಂತ ‘ವೈಬ್’ ಆದಾಗ..’ ಎಂಬ ಕ್ಯಾಪ್ಷನ್ ಈ ವಿಡಿಯೋಗೆ ನಿಡಲಾಗಿದೆ. ಈ ವೈಬ್ ವಿಡಿಯೋ ಈಗಾಗಲೇ 8 ಮಿಲಿಯನ್ ವೀಕ್ಷಣೆಯನ್ನು ಪಡದುಕೊಂಡಿದೆ. ಇದನ್ನು ನೋಡಿದವರೆಲ್ಲರೂ ಪ್ರೊಫೆಸರ್ ಮೇಡಂನ ಆತ್ಮವಿಶ್ವಾಸ ಮತ್ತು ಆಕರ್ಷಕ ವ್ಯಕ್ತಿತ್ವನ್ನು ಹೊಗಳುತ್ತಿದ್ದಾರೆ. ಮತ್ತು ತನ್ನ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯುವ ಆಕೆಯ ಗುಣವನ್ನು ಹಲವರು ಮೆಚ್ಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: 2024ರಲ್ಲಿ ಸ್ವಿಗ್ಗಿಗೆ ಆರ್ಡರ್‌ಗಳ ಸುಗ್ಗಿ- ನೀವು ಸ್ವಿಗ್ಗಿ ಪ್ರಿಯರಾಗಿದ್ರೆ ಈ ಇಂಟ್ರೆಸ್ಟಿಂಗ್ ಮಾಹಿತಿ ಮಿಸ್ ಮಾಡ್ಕೋಬೇಡಿ!

‘ಇವರು ತಮ್ಮ ಕಾಲೇಜು ದಿನಗಳಲ್ಲಿ ಹೇಗಿದ್ದರಬಹುದು!?’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಹುಡ್ಗೀರೇ ಇದು ನಿಮ್ದೇ ಜಮಾನಾ ಮತ್ತು ನಾವು ಈ ಜಮಾನದಲ್ಲಿ ಬದುಕ್ತಿದ್ದೇವೆ’ ಎಂದು ಇನ್ನೊಬ್ರು ಕಮೆಂಟ್ ಹಾಕಿದ್ದಾರೆ. ‘ಇವರ ಎನರ್ಜಿ ನೋಡಿ ಖುಷಿಯಾಯ್ತು’ ಎಂದು ಇನ್ನೊಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ‘ನಾನಿದನ್ನು ನನ್ನ ಹೆಚ್.ಒ.ಡಿ.ಗೆ ಸೆಂಡ್ ಮಾಡ್ತೇನೆ’ ಎಂದು ಒಬ್ರು ತಮಾಷೆಯಾಗಿ ಕಮೆಂಟ್ ಹಾಕಿದ್ದಾರೆ. ಇನ್ನು, ‘ಇವ್ರು ಕ್ಲಾಸೀಯಾಗಿದ್ದಾರೆ..’, ‘ಇಂತಹ ಮೇಡಂ ನಮ್ಗೂ ಸಿಗ್ಬೇಕು..’, ‘ನಾನು ಇದುವರೆಗೂ ನೋಡಿದ ಕೂಲೆಸ್ಟ್ ಹೆಚ್.ಒ.ಡಿ.’ ಮತ್ತು ‘ತಮ್ಮದೇ ಲೋಕದಲ್ಲಿ ತೇಲಾಡುತ್ತಿರುವ ಮಹಿಳೆಯರು’ ಎಂಬೆಲ್ಲಾ ರೀತಿಯ ಕಮೆಂಟ್ ಗಳೂ ಬಂದಿದ್ದು, ಒಟ್ಟಿನಲ್ಲಿ ಈ ವೈಬ್ರೆಂಟ್ ವಿಡಿಯೋಗೆ ಕಮೆಂಟ್ ಮತ್ತು ಲೈಕ್ ಗಳ ಮಹಾಪೂರವೇ ಹರಿದುಬಂದಿದೆ.