ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಅವರ ಡ್ಯಾನ್ಸ್‌ಗೆ ಹೆಚ್ಚಿನ ಮಂದಿ ಫಿದಾ ಆಗಿದ್ದಾರೆ. ಅದೇ ರೀತಿ ಇತ್ತೀಚಿನ ವಿಡಿಯೊವೊಂದರಲ್ಲಿ ವಯಸ್ಸಾದ ಮಹಿಳೆಯೊಬ್ಬರು ಸಲ್ಮಾನ್ ಖಾನ್‌ನ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ‘ದಬಾಂಗ್’ನ ಹಾಡೊಂದಕ್ಕೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ‘ಡ್ಯಾನ್ಸಿಂಗ್ ದಾದಿ’ ಎಂದು ಕರೆಯಲ್ಪಡುವ ರವಿ ಬಾಲಾ ಶರ್ಮಾ ‘ದಗಾಬಾಜ್ ರೇ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಶರ್ಮಾ ಇತ್ತೀಚೆಗೆ ಅಪ್‌ಲೋಡ್ ಮಾಡಿದ ರೀಲ್‍ನಲ್ಲಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ನರ್ತಿಸಿದ ಹಾಡನ್ನು ಆನಂದಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಜತೆಗೆ ಅವರು ಸಲ್ಮಾನ್ ಖಾನ್ ಡ್ಯಾನ್ಸ್ ಮಾಡಿದ ರೀತಿಯೇ ಹೆಜ್ಜೆ ಹಾಕಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ವೈರಲ್
ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಲಾದ ಈ ಹಿರಿಯ ನರ್ತಕಿಯ ರೀಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಡ್ಯಾನ್ಸ್ ವಿಡಿಯೊ ಇದುವರೆಗೆ 16 ಲಕ್ಷ ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್ಸ್‌ಗಳನ್ನು ಗಿಟ್ಟಿಸಿಕೊಂಡಿದೆ.
ಈ ಸುದ್ದಿಯನ್ನೂ ಓದಿ:ಭಾರತೀಯನನ್ನು ಮದುವೆಯಾದ ಅಮೆರಿಕನ್ ಮಹಿಳೆ ಅತ್ತೆ-ಮಾವನ ಬಗ್ಗೆ ಹೀಗಾ ಹೇಳೋದು…?
‘ದಗಾಬಾಜ್ ರೇ’ ಹಾಡಿಗೆ ಡ್ಯಾನ್ಸಿಂಗ್ ದಾದಿ ಅವರ ಪ್ರದರ್ಶನವನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. “ಬಹುತ್ ಹೈ ಬ್ಯೂಟಿಫುಲ್ ಪರ್ಫಾರ್ಮೆನ್ಸ್” ಎಂದು ಇನ್‌ಸ್ಟಾಗ್ರಾಂ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು ಇದನ್ನು “ಸೂಪರ್” ನೃತ್ಯ ಪ್ರದರ್ಶನ ಎಂದು ಕರೆದಿದ್ದಾರೆ.