ಅಹ್ಮದಾಬಾದ್: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ತನ್ನ ಆಡಿ ಕಾರನ್ನು ಅತಿವೇಗವಾಗಿ ಓಡಿಸಿ ನಾಲ್ಕರಿಂದ ಐದು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ಇತ್ತೀಚೆಗೆ ನಡೆದಿದೆ. ಅಂಬ್ಲಿ-ಬೋಪಾಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಭೀಕರ ಅಪಘಾತ ಮಾಡಿದ ನಂತರ ಚಾಲಕ ಸಿಗರೇಟ್ ಸೇದಿರುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತವನ್ನು ಕಣ್ಣಾರೆ ನೋಡಿದ ಜನರು ಚಾಲಕನನ್ನು ಕಾರಿನಿಂದ ಹೊರಗೆಳೆದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
This happened on the Iskon-Ambli Road, one of the poshest area.
— Kumar Manish (@kumarmanish9) November 25, 2024
A broad daylight accident. Luckily, no one got injured.
The Audi car driver literally on high dragging a puff from what looks like a joint.
Carholes are let loose on #Ahmedabad.
pic.twitter.com/e7atBQRQnM
ರಿಪಾಲ್ ಪಾಂಚಾಲ್ ಎಂದು ಗುರುತಿಸಲ್ಪಟ್ಟ ಚಾಲಕ ಬೆಳಿಗ್ಗೆ 10 ಗಂಟೆ ಸುಮಾರಿಗೆ ಇಸ್ಕಾನ್ ಸೇತುವೆಯಿಂದ ಅಂಬಲಿಗೆ ತೆರಳುತ್ತಿದ್ದಾಗ ಕುಡಿದ ಮತ್ತಿನಲ್ಲಿ ಆಡಿ ಕಾರನ್ನು ಅಜಾಗರೂಕತೆಯಿಂದ ಓಡಿಸಿದ್ದಾನೆ. ನಂತರ ವಾಹನದ ನಿಯಂತ್ರಣವನ್ನು ಕಳೆದುಕೊಂಡು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
નશાની હાલતમાં કર્યો ગંભીર અકસ્માત!
— Sagar Patoliya (@kathiyawadiii) November 25, 2024
અમદાવાદમાં એક વ્યક્તિએ નશાની હાલતમાં અકસ્માત સર્જ્યો છે, CCTV સામે આવ્યા, એક્સિડેન્ટ કર્યા બાદ પણ તેને ખબર નથી કે તેણે શું કર્યું છે અને સિગારેટ ફૂંકે છે સાહેબ!!#Ahmedabad pic.twitter.com/AdPvGgRYNW
ವರದಿಗಳ ಪ್ರಕಾರ, ಚಾಲಕ ಮೊದಲು ಟಾಟಾ ಹ್ಯಾರಿಯರ್ ಎಸ್ ಯುವಿಗೆ ಡಿಕ್ಕಿ ಹೊಡೆದು ನಂತರ ಟೆಂಪೊಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ, ಆನಂತರ ಟಾಟಾ ಮೋಟಾರ್ಸ್ ಶೋರೂಂ ಹೊರಗೆ ನಿಂತಿದ್ದ ಟಾಟಾ ನೆಕ್ಸಾನ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ, ಇದರಿಂದಾಗಿ ನೆಕ್ಸಾನ್ ಕಾರು ಡಿವೈಡರ್ ಅನ್ನು ಹತ್ತಿದೆ. ಇಷ್ಟೆಲ್ಲಾ ನಡೆದ ಮೇಲೆ ಆಡಿ ಕಾರು ಚಾಲಕ ಸ್ಥಳದಿಂದ ಪರಾರಿಯಾಗುವ ಪ್ರಯತ್ನದಲ್ಲಿ, ನಿಲ್ಲಿಸಿದ ಕೆಲವು ಬೈಕುಗಳು ಮತ್ತು ಕಬ್ಬಿಣದ ಗೇಟ್ಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲಿದ್ದ ಜನರು ಈ ಘಟನೆಯನ್ನು ರೆಕಾರ್ಡ್ ಮಾಡಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.
જુઓ આ ધન્નાશેઠ આરોપી રિપલ પંચાલને કોઈ અફસોસ નથી, મીડિયાને કહ્યું, "મારો વકીલ જવાબ આપશે" #Ahmedabad #RoadAccident #viral #accident #viralvideo #Drinkanddrive #liquor #alcohol #ZEE24KALAK pic.twitter.com/uwESDrSwMI
— Zee 24 Kalak (@Zee24Kalak) November 25, 2024
ಸ್ಕೂಟರ್ ಹೋಗುತ್ತಿದ್ದ ಮಹಿಳೆ ಹಾಗೂ ಪುರುಷ ಕೂಡ ಚಾಲಕ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಗಂಭೀರ ಗಾಯಗಳು ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:15 ರೂ.ಯ ನೀರಿನ ಬಾಟಲಿ 20 ರೂ.ಗೆ ಮಾರಾಟ ಮಾಡಿದವನಿಗೆ 1 ಲಕ್ಷ ರೂ. ದಂಡ ವಿಧಿಸಿದ ಭಾರತೀಯ ರೈಲ್ವೆ
ಸ್ಥಳೀಯರು ಕೋಪಗೊಂಡು ಕಾರಿನ ಬಳಿ ಬಂದಾಗ ಅಪಘಾತ ಸಂಭವಿಸಿದ ನಂತರ ಚಾಲಕ ಕುಡಿದ ಮತ್ತಿನಲ್ಲಿದ್ದು, ಸಿಗರೇಟು ಸೇದುವುದರಲ್ಲೇ ಮಗ್ನರಾಗಿದ್ದಾನಂತೆ. ಕುಡಿದ ಮತ್ತಿನಲ್ಲಿದ್ದ ಚಾಲಕನ ಸ್ಥಿತಿಯನ್ನು ನೋಡಿ ಜನರು ಅವನನ್ನು ಹೊಡೆಯಲು ಶುರುಮಾಡಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರಂತೆ.