Sunday, 15th December 2024

Viral Video: ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಗ್ಯಾಂಗ್‌ ವಾರ್‌; ಆಘಾತಕಾರಿ ವಿಡಿಯೊ

Viral Video

ಕಾಲೇಜಿನಲ್ಲಿ ವಿದ್ಯಾರ್ಥಿನಿಯರ (Odisha College Girls) ಎರಡು ಗುಂಪಿನ ನಡುವೆ ಹೊಡೆದಾಟ ನಡೆದಿರುವ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ. ಇದು ಒಡಿಶಾದ ಕಾಲೇಜಿನಲ್ಲಿ(Odisha College ) ನಡೆದ ಘಟನೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಾಲೇಜು ಯುವತಿಯರ ನಡುವಿನ ಅತ್ಯಂತ ಭೀಕರ ಕಾಳಗವನ್ನು ಪ್ರದರ್ಶಿಸಿದೆ. ಎಕ್ಸ್ ಬಳಕೆದಾರರೊಬ್ಬರು ಮನೆಯ ಜಗಳ ಎನ್ನುವ ಶೀರ್ಷಿಕೆಯಡಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಮೊದಲು ವಿದ್ಯಾರ್ಥಿಗಳ ಗುಂಪಿನ ನಡುವೆ ವಾಗ್ವಾದ ಉಂಟಾಗಿದ್ದು, ಬಳಿಕ ಅದು ಸಂಘರ್ಷದ ಸ್ಥಳವಾಗಿ ಮಾರ್ಪಟ್ಟಿದೆ. ಇಬ್ಬರು ಹುಡುಗಿಯರ ವಾದ ವಿವಾದಗಳು ನಡೆದಿದ್ದು, ಬಳಿಕ ಒಬ್ಬಳು ಇನ್ನೊಬ್ಬಳಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ವಿದ್ಯಾರ್ಥಿನಿಯರ ಎರಡು ಗುಂಪುಗಳ ನಡುವೆ ಹೊಡೆದಾಟ ಪ್ರಾರಂಭವಾಗಿದೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಯುವತಿಯರ ಇಂತಹ ಆಕ್ರಮಣಕಾರಿ ನಡವಳಿಕೆಯ ಕಾರಣಗಳ ಬಗ್ಗೆ ಅನೇಕರು ಚರ್ಚಿಸಿದ್ದಾರೆ. ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಘರ್ಷ ಪರಿಹಾರ ಮತ್ತು ಸಂವಹನ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಬೇಕಿದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಶಾಲೆ, ಕಾಲೇಜುಗಳಲ್ಲಿ ಇಂತಹ ಜಗಳಗಳ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು, ಈ ರೀತಿ ಘರ್ಷಣೆಗಳು ಸಂಭವಿಸುವ ಮೊದಲು ಸಮಸ್ಯೆಗಳನ್ನು ಮೂಲದಲ್ಲೇ ಪರಿಹರಿಸಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿಯರ ನಡುವೆ ಯಾಕೆ ಜಗಳವಾಗಿದೆ ಎಂಬುದು ಸ್ಪಷ್ಟವಾಗಿಲ್ಲದೇ ಇದ್ದರೂ ಇವರ ವರ್ತನೆ ಹದಿಹರೆಯದ ಸಮಯದಲ್ಲಿ ಭಾವನೆಗಳನ್ನು ನಿಯಂತ್ರಿಸುವಲ್ಲಿ ಅಸಮರ್ಥರಾಗಿರುವುದು ತೋರಿಸಿದೆ. ಯುವ ಪೀಳಿಗೆಯಲ್ಲಿ ಇನ್ನೊಬ್ಬರನ್ನು ಗೌರವಿಸುವ ಸಂಸ್ಕೃತಿಯನ್ನು ನಿರ್ಮಿಸುವ ಅಗತ್ಯತೆಯ ಬಗ್ಗೆ ಇದು ಚರ್ಚಿಸುವಂತೆ ಮಾಡಿದೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋವನ್ನು 87 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರೆ. ಕಾಮೆಂಟ್ ವಿಭಾಗದಲ್ಲಿ ಒಬ್ಬರು ಮಹಿಳೆಯೇ ಮಹಿಳೆಯ ಶತ್ರು ಎಂದು ಹೇಳಿದ್ದಾರೆ.

Viral News: ನಾರ್ವೆಯ ಯುವರಾಜನೊಂದಿಗೆ ಹ್ಯಾಂಡ್‍ಶೇಕ್‌ ಮಾಡಲೊಪ್ಪದ ಮುಸ್ಲಿಂ ಮಹಿಳೆ!

ಇನ್ನೊಬ್ಬರು ನಿಜವಾದ ಯುದ್ಧ ಎಂದರೆ ಇದು ಎಂದು ಹೇಳಿದ್ದಾರೆ. ಮತ್ತೊಬ್ಬರು ಇವರ ಮಧ್ಯೆ ಯಾಕೆ ಜಗಳವಾಗಿದೆ, ಅವರನ್ನು ಕೆರಳಿಸಿದ್ದು ಏನು ಎಂದು ಪ್ರಶ್ನಿಸಿದ್ದಾರೆ.