Tuesday, 7th January 2025

Viral Video: ಗೋವಾ ಬೀಚ್‍ನಲ್ಲಿ ಮಹಾಕುಂಭ ಮೇಳ; ವಿಡಿಯೊ ನೋಡಿ

Viral Video

ಪಣಜಿ: ಮಹಾ ಕುಂಭಮೇಳ  ಜನವರಿ 13 ರಿಂದ ಪ್ರಾರಂಭವಾಗಲಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್‍ನಲ್ಲಿ ನಡೆಯಲಿರುವ ಈ ಮೆಗಾ ಕಾರ್ಯಕ್ರಮಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ವಿಶ್ವದಾದ್ಯಂತ ಜನರು ಈ ‘ಪವಿತ್ರ ಉತ್ಸವ’ಕ್ಕೆ ಸಾಕ್ಷಿಯಾಗಲು ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಮಹಾ ಕುಂಭ ಮೇಳ 2025 ರ ಮರಳು ಮಾದರಿಯನ್ನು ವಿದೇಶಿಯರೊಬ್ಬರು ನಿರ್ಮಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ  ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಬ್ರಿಟಿಷ್ ಇತಿಹಾಸಕಾರ ನಿಕ್ ಬುಕರ್ ಅವರು ಮುಂಬರುವ ಈ ಉತ್ಸವದ ಬಗ್ಗೆ ವೀಕ್ಷಕರಿಗೆ ವಿವರಿಸುವ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಮತ್ತು ಅದರಲ್ಲಿ ಗೋವಾದ ಕಡಲತೀರದಲ್ಲಿ ರಚಿಸಲಾದ ಮರಳು ಮಾದರಿಯನ್ನು ಉಲ್ಲೇಖಿಸಿ ಅದರ ಮಹತ್ವವನ್ನು ಎತ್ತಿ ತೋರಿಸಿದ್ದಾರೆ. ಮಹಾ ಕುಂಭ ಮೇಳದ ಮರಳು ಮಾದರಿ ಬಗ್ಗೆ ವೀಕ್ಷಕರಿಗೆ ನಿಕ್ ಹೇಳುತ್ತಿರುವುದನ್ನು ವಿಡಿಯೊದ ಶುರುವಿನಲ್ಲಿ ತೋರಿಸಲಾಗಿದೆ. ಅಲ್ಲಿ ಅವರು ಉತ್ಸವದ ಕೆಲವು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ವಿವರಿಸಿದ್ದಾರೆ.  

ಕ್ಯಾಮೆರಾದಲ್ಲಿ ಮರಳು ಮಾದರಿಯನ್ನು ತೋರಿಸಿ ಮತ್ತು ಮಹಾ ಕುಂಭಮೇಳದ ಒಂದು ನೋಟವನ್ನು ವಿವರಿಸಿದ ಅವರು, “ಬಲಭಾಗದಲ್ಲಿ ಗಂಗೋತ್ರಿ, ಇಲ್ಲಿ ಹಿಮಾಲಯವಿದೆ.  ನಮಗೆ ಯಮುನೋತ್ರಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಗೋವಾ ಕಡಲತೀರದಲ್ಲಿ ಮರಳು ಆಧಾರಿತ ರಚನೆಯನ್ನು ಪ್ರದರ್ಶಿಸಿದ ಅವರು, ಪ್ರಯಾಗ್ರಾಜ್‍ನಲ್ಲಿ ನದಿಗಳು ಸೇರಿದಾಗ ನೀರಿನ ಬಣ್ಣ ಹೇಗೆ ಬದಲಾಗುತ್ತದೆ ಎಂಬುದನ್ನು ಹಂಚಿಕೊಂಡರು. “ಇದು ಸಂಗಮ. ಆದ್ದರಿಂದ ಇದು 400 ಮಿಲಿಯನ್ ಜನರು ಸೇರುವ ಸ್ಥಳವಾಗಿದೆ “ಎಂದು ನಿಕ್ ವಿಡಿಯೊದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ರಸ್ತೆಯಲ್ಲಿ ಪಾರಿವಾಳ ಹಿಡಿದು ಕೊಂಡೊಯ್ದ ಹಲಾಲ್‌ ಫುಡ್‌ ಟ್ರಕ್‌ ಕಾರ್ಮಿಕ! ವಿಡಿಯೊ ನೋಡಿ ಹೌಹಾರಿದ ನೆಟ್ಟಿಗರು

ವಿಷ್ಣು ಪುರಾಣ, ಮತ್ಸ್ಯ ಪುರಾಣ (ಮತ್ತು ಪ್ರಯಾಗರಾಜ್ ತೀರ್ಥ), ಮಹಾಭಾರತ ಮತ್ತು ರಾಮಾಯಣದ ಪುಸ್ತಕಗಳನ್ನು ಓದುತ್ತಿದ್ದೇನೆ. ಹಾಗೇ ಸ್ವಲ್ಪ ಸಮಯದಿಂದ ಪ್ರಯಾಗ್‌ರಾಜ್‌ ಮತ್ತು ಕುಂಭಮೇಳದ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಅವರ ವಿಡಿಯೊ ಈಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

Leave a Reply

Your email address will not be published. Required fields are marked *