ನವದೆಹಲಿ: ಸದ್ಯ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 ಸಿನಿಮಾದ ಹಾಡು ಬಹಳಷ್ಟು ಟ್ರೆಂಡಿಂಗ್ನಲ್ಲಿದೆ. ಅದರಲ್ಲೂ ಈ ಚಿತ್ರದ ಕಿಸಿಕ್ ಕಿಸಿಕ್ ಹಾಡು ಸಿಕ್ಕಾಪಟ್ಟೆ ಹಿಟ್ನಲ್ಲಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನದ್ದೇ ಹವಾ, ಅನೇಕರು ಈ ಹಾಡಿಗೆ ಸೊಂಟ ಬಳುಕಿಸಿ ರೀಲ್ಸ್ ಮಾಡಿದ್ದಾರೆ. ಇದೀಗ ವೃದ್ಧೆಯೊಬ್ಬರು ಈ ಹಾಡಿಗೆ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಅಜ್ಜಿಯ ಡ್ಯಾನ್ಸ್ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೊ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.(Viral Video)
ಅಜ್ಜಿಯೊಬ್ಬರು ಪುಷ್ಪಾ-2 ಚಿತ್ರದ ಪೀಲಿಂಗ್ಸ್ ಹಾಡಿಗೆ ಯುವಕನ ಜೊತೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಪೀಲಿಂಗ್ಸ್ ಹಾಡು ಕೇಳುತ್ತಿದ್ದಂತೆ ವೃದ್ಧೆ ಯುವಕ ನೊಂದಿಗೆ ಡ್ಯಾನ್ಸ್ ಮಾಡುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ಅಜ್ಜಿ ಕುಣಿಯುವ ಉತ್ಸಾಹ ಮತ್ತು ಉಲ್ಲಾಸ ನೋಡುಗರನ್ನೇ ಆಶ್ಚರ್ಯಗೊಳಿಸುವಂತೆ ಮಾಡಿದೆ. ರಶ್ಮಿಕಾ ಯಾವ ರೀತಿ ಸ್ಟೆಪ್ ಹಾಕಿದ್ದಾರೋ ಅದೇ ರೀತಿ ಸರಿ ಸಮಾನವಾಗಿ ಡ್ಯಾನ್ಸ್ ಮಾಡಿದ್ದಾರೆ. ಅಜ್ಜಿ 18ರ ಯುವತಿಯಂತೆ ಸ್ಟೆಪ್ಸ್ ಹಾಕಿರೋದನ್ನು ನೋಡಿ ನೆಟ್ಟಿಗರನ್ನೇ ಹುಬ್ರಿಬಸು ಮಾಡಿದೆ.
.@alluarjun ఎంత పని చేసావు తమ్ముడూ pic.twitter.com/QY6WbZWmhu
— MegaFamilyFanForEver (@JSPROYALSOLDIER) January 7, 2025
ಮೆಗಾ ಫ್ಯಾಮಿಲಿ ಫ್ಯಾನ್ ಫಾರೆವರ್ ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದ್ದು ಬಹಳಷ್ಟು ಮಂದಿ ಈ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಾಗೆಯೇ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿದ್ದು ರಶ್ಮಿಕಾ ಸೆಪ್ಟ್ ಅನ್ನು ಮೀರಿಸುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಪುಷ್ಪಾ-3ರಲ್ಲಿ ಅಜ್ಜಿಗೆ ಡ್ಯಾನ್ ಮಾಡಲು ಚಾನ್ಸ್ ಕೊಡಬೇಕು ಎಂದಿದ್ದಾರೆ. ಇನ್ನೊಬ್ಬರು ಅಜ್ಜಿ ಯುವತಿಯಾಗಿದ್ದಾಗ ಯಾವ ರೇಂಜ್ನಲ್ಲಿ ಡ್ಯಾನ್ಸ್ ಮಾಡಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಈ ಅಜ್ಜಿಯ ಕಾರ್ ಡ್ರೈವಿಂಗ್ ಜೋಷ್ ಕಂಡು ನೆಟ್ಟಿಗರೇ ಶಾಕ್! ವಿಡಿಯೊ ವೈರಲ್