ಭಾರತೀಯ ಮದುವೆಯಲ್ಲಿ (Indian Marriage) ಹಾಸ್ಯ, ವಿನೋದ ಮತ್ತು ಕೆಲವೊಮ್ಮೆ ಸಿನಿಮೀಯ ಟ್ವಿಸ್ಟ್ ಗಳಿರುತ್ತವೆ. ಅಂತಹ ಒಂದು ಸಖತ್ ಟ್ವಿಸ್ಟ್ ಇರುವ ಮದುವೆ ಸುದ್ದಿಯೊಂದನ್ನು ವಿಡಿಯೋ ಸಹಿತ ನಾವು ನಿಮಗೆ ನೀಡುತ್ತಿದ್ದೇವೆ. ಈ ಸೀನನ್ನು ಏನಾದ್ರೂ ಆ ಮದುವೆ ಗಂಡು ಇನ್ನೊಮ್ಮೆ ನೋಡಿದ್ರೆ ಆತ ನಿದ್ದೆಯಲ್ಲೂ ಬೆಚ್ಚಿ ಬೀಳಲಿದ್ದಾನೆ! ವಿಷ್ಯ ಏನಪ್ಪಾ ಅಂದ್ರೆ. ಒಂದು ಮದುವೆ ಸಮಾರಂಭಕ್ಕೆ ಸಿನಿಮೀಯ ಸ್ಟೈಲಲ್ಲಿ ಎಂಟ್ರಿ ಕೊಟ್ಟ ವರನ ಮಾಜಿ ಗರ್ಲ್ ಫ್ರೆಂಡ್, ಎಲ್ಲರೆದುರಲ್ಲೇ ವರನ ‘ಬ್ಯಾಕ್’ಗೆ ಜಾಡಿಸಿ ಒದ್ದಿದ್ದಾಳೆ! ಈ ಸೂಪರ್ ಆಕ್ಷನ್ ವಿಡಿಯೋ (Action Video) ಇದೀಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಈ ವಿಡಿಯೋದಲ್ಲಿರುವಂತೆ, ಮದುವೆ ಸಮಾರಂಭವೊಂದರಲ್ಲಿ ವರ ತನ್ನ ಕೈಯಲ್ಲಿ ಹೂವಿನ ಮಾಲೆಯನ್ನು ಹಿಡ್ಕೊಂಡು ಇನ್ನೇನು ತನ್ನ ಎದುರಿರುವ ವಧುವಿನ ಕೊರಳಿಗೆ ಹಾಕಬೇಕೆನ್ನುವಷ್ಟರಲ್ಲಿ, ಸುಂಟರಗಾಳಿಯಂತೆ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ, ವರನ ಗರ್ಲ್ ಫ್ರೆಂಡ್ ಎಂದು ಹೇಳಿಕೊಳ್ಳುತ್ತಿರುವ ಈ ಯುವತಿ ವರನ ಹಿಂಭಾಗಕ್ಕೆ ಸೇಮ್ ಮಾರಿಮುತ್ತು ಸ್ಟೈಲಿನಲ್ಲಿ ಜಾಡಿಸಿ ಒದೀತಾಳೆ!
ಆಕೆ ಒದ್ದ ರಭಸಕ್ಕೆ ವರ ಮುಂದೆ ಎಗರಿ ಬೀಳುತ್ತಾನೆ. ಮತ್ತು ಈ ಅನಿರೀಕ್ಷಿತ ಘಟನೆ ವರ, ವಧು ಸಹಿತ ಅಲ್ಲಿದ್ದವರನ್ನೆಲ್ಲಾ ಅಚ್ಚರಿ ಆಘಾತಕ್ಕೀಡು ಮಾಡುತ್ತದೆ. ಇಷ್ಟಕ್ಕೇ ಸುಮ್ಮನಾಗದ ಆ ಲೇಡಿ ರ್ಯಾಂಬೋ, ಆಗ ತಾನೆ ನೆಲಕ್ಕೆ ಎಗರಿ ಬಿದ್ದು ಪಿಳಿ ಪಿಳಿ ನೋಡುತ್ತಿದ್ದ ವರನನ್ನು ಹಿಡಿದೆತ್ತಿ, ಬಯ್ಯಲು ಪ್ರಾರಂಭಿಸುತ್ತಾಳೆ. ಅವರಿಬ್ಬರ ನಡುವಿನ ವಾಗ್ವಾದದ ಆಡಿಯೋ ಕ್ಲಿಯರ್ ಇಲ್ಲವಾದ್ರೂ, ಇವರಿಬ್ಬರ ನಡುವೆ ಏನೋ ಲಪ್ಡ ನಡೆದಿದೆ ಅನ್ನೋದಂತೂ ವಿಡಿಯೋ ನೋಡುವವರಿಗೆ ತಿಳಿಯುತ್ತದೆ.
ಈ ವಿಡಿಯೋ ಇದೀಗ ಸೋನುಕುಮಾರ್ ಗಿರಿ396 (sonukumargiri396) ಎಂಬ ಇನ್ ಸ್ಟಾಗ್ರಾಂ (Instagram) ಅಕೌಂಟಿನಲ್ಲಿ ಅಪ್ಲೋಡ್ ಆಗಿದ್ದು. ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದು, ಫನ್ನಿ ಕಮೆಂಟ್ ಗಳೇ ಜಾಸ್ತಿಯಾಗಿ ಬಂದಿದೆ.
‘ಇದಕ್ಕೇ ನಾವು ಹೇಳೋದು ಮದುವೆ ಮತ್ತು ಹಳೇ ಸಂಬಂಧಗಳನ್ನು ಮಿಕ್ಸ್ ಮಾಡ್ಬೇಡ್ರಪ್ಪಾ ಅಂತ..! ಇದು ಬಾಲಿವುಡ್ (Bollywood) ಸಿನೆಮಾ ರೀತಿ ಇತ್ತು ಆದ್ರೆ ಲೈವ್ ಆಗಿ ಇತ್ತಷ್ಟೆ!’ ಎಂದು ಒಬ್ರು ಕಮೆಂಟ್ ಮಾಡಿದ್ದಾರೆ. ‘ಆಕೆಯ ಕಿಕ್ ಮಾತ್ರ ಕರೆಕ್ಟ್ ಪಾಯಿಂಟ್ ಗೇ ಬಿದ್ದಿದೆ, ಆಕೆ ಇದನ್ನು ಬಹಳಷ್ಟು ಸಲ ಪ್ರಾಕ್ಟೀಸ್ ಮಾಡಿರ್ಬೇಕು! ಮತ್ತು ಅಲ್ಲಿ ನಡೆದ ವಾದ-ವಿವಾದ? ಕಂಪ್ಲೀಟ್ ಎಂರ್ಟೈನ್ಮೆಂಟ್. ಆದ್ರೆ, ಎಲ್ಲಾ ಕಮೆಂಟ್ ಗಳೂ ಫನ್ನಿಯಾಗಿಲ್ಲ, ಕೆಲವೊಂದು ಸೀರಿಯಸ್ ಕಮೆಂಟ್ ಗಳೂ ಬಂದಿವೆ. ಕೆಲವರು ಈ ಘಟನೆ ನಡೆದ ಸನ್ನಿವೇಶವನ್ನು ಟೀಕಿಸಿದ್ದಾರೆ. ‘ಆತ ಎಲ್ಲರೊಂದಿಗೂ ಪ್ರಾಮಾಣಿಕವಾಗಿದ್ದಿದ್ದಲ್ಲಿ ಈ ಅವಮಾನಕರ ಸನ್ನಿವೇಶವನ್ನು ತಪ್ಪಿಸಬಹುದಿತ್ತು’ ಎಂದು ಒಬ್ರು ಕಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ‘ಇವ್ರ ರೀಲ್ ಹುಚ್ಚಿಗೆ ಬೆಂಕಿ ಬೀಳ..!’ : ಹೆದ್ದಾರಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ – ವಿಡಿಯೊ ನೋಡಿ
ಇತ್ತೀಚಿನ ದಿನಗಳಲ್ಲಿ ಭಾರತೀಯ ಮದುವೆಗಳಲ್ಲಿ ಕೆಲವೊಂದು ನಾಟಕೀಯ ಘಟನೆಗಳನ್ನು ಕ್ರಿಯೇಟ್ ಮಾಡಲಾಗುತ್ತದೆ. ಹಾಗಾಗಿ, ಈ ಘಟನೆಯ ಬಗ್ಗೆಯೂ ಕೆಲವರು ಸಂಶುಯ ವ್ಯಕ್ತಪಡಿಸಿದ್ದು, ಇದು ನಿಜವಾಗಿಯೂ ಆದದ್ದೋ? ಅಥವಾ ಪ್ರಿಪ್ಲ್ಯಾನ್ ಘಟನೆಯೋ? ಎಂದು ಪ್ರಶ್ನಿಸಿದ್ದಾರೆ. ಅದೇನೇ ಇದ್ರೂ ಈ ವಿಡಿಯೋ ನೋಡಿದವರ ಮುಖದಲ್ಲೊಂದು ನಗು ಅರಳೋದು ಗ್ಯಾರಂಟಿ ಮತ್ತು ಆ ಪಾಪದ ವರನ ಬಗ್ಗೆ ಒಂದು ಸಿಂಪಥಿಯೂ ಮೂಡಿ ಮರೆಯಾಗುತ್ತದೆ.