ತಿರುವನಂತಪುರಂ: ಕೆಲವೊಂದು ವ್ಯಕ್ತಿಗಳು ತಮ್ಮಲ್ಲಿರುವ ಕ್ರಿಯೇಟಿವಿಟಿ ಯೋಚನೆಗಳ ಮೂಲಕ ವೈರಲ್ ಆಗುತ್ತಾರೆ. ತಮ್ಮಲ್ಲಿರುವ ವಿಭಿನ್ನ ಜಾಣ್ಮೆಯನ್ನು ಪ್ರದರ್ಶಿಸುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ಕೇರಳದ ಬೈಕ್ ಪ್ರೇಮಿಯೊಬ್ಬ ತಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ವಾಹನದ ಬಿಡಿ ಭಾಗ ಬಳಸಿಕೊಂಡು ಕಲಾತ್ಮಕ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಯುವಕನ ಕಲಾತ್ಮಕ ಕ್ರಿಯೇಟಿವಿಟಿಗೆ ನೆಟ್ಟಿಗರು ಗ್ರೇಟ್ ಅನ್ನುತ್ತಿದ್ದಾರೆ(Viral Video)
ಕೇರಳದ ಪ್ರಿಯಮ್ ಸಾರಸ್ವತ್ ಎನ್ನುವ ಬೈಕ್ ಉತ್ಸಾಹಿಯೊಬ್ಬರು ಈ ಕಲಾತ್ಮಕ ಕ್ರಿಯೇಟಿವಿಟಿ ಮಾಡಿದ್ದಾರೆ. ತಮ್ಮ ಮನೆಯ ಪ್ರತಿಯೊಂದು ಕೋಣೆಯನ್ನು ವಾಹನದ ವಿವಿಧ ಬಿಡಿಭಾಗ ಬಳಸಿಕೊಂಡು ವಿನ್ಯಾಸಗೊಳಿಸಿದ್ದಾರೆ. ಬಜಾಜ್ ಸ್ಕೂಟರ್ ಹ್ಯಾಂಡಲ್‌ನಿಂದ ಮಾಡಿದ ಲೈಟ್, ಸ್ಕೂಟರ್ ಬಳಸಿ ರಚಿಸಲಾದ ಸೋಫಾ ಇವರ ಮನೆಯನ್ನು ಕಣ್ಮನ ಸೆಳೆಯುವಂತೆ ಮಾಡಿದೆ. ತನ್ನ ರೂಮ್‌ನಿಂದ ಹಿಡಿದು ಡೈನಿಂಗ್ ರೂಮ್‌ವರೆಗೆ ಪ್ರತಿ ಜಾಗವನ್ನು ಬೈಕ್‌ನ ಪಾರ್ಟ್ ಗಳಿಂದ ಸೃಜನಾತ್ಮಕವಾಗಿ ಅಲಂಕರಿಸಿದ್ದಾರೆ. ಐಐಟಿ ಪದವೀಧರರಾಗಿರುವ ಸಾರಸ್ವತ್ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿಯೂ ಕೆಲಸ ಮಾಡಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಯಮಹಾ RX100 ನ ಎಂಜಿನ್ ಪಾರ್ಟ್ ಬಳಸಿ ಲಿವಿಂಗ್ ರೂಮಿನಲ್ಲಿ ಟೇಬಲ್ ರಚಿಸಿದ್ದಾರೆ. ಹಳದಿ ಬಣ್ಣದ ಬಜಾಜ್ ಚೇತಕ್ ಸ್ಕೂಟರ್ ಅನ್ನು ಸೋಫಾ ಆಗಿ ಮಾಡಿಕೊಂಡಿದ್ದಾರೆ. ಹಳೆಯ ಅಂಬಾಸಿಡರ್ ಕಾರು ಪ್ರವೇಶದ್ವಾರದಲ್ಲಿ ಸುಂದರವಾಗಿ ಸ್ವಾಗತ ಕೋರುತ್ತಿದೆ. ಸ್ವಿಫ್ಟ್ ಡಿಸೈರ್‌ನ ಪ್ರೆಶರ್ ಪ್ಲೇಟ್ ಮೂಲಕ ಗಡಿಯಾರವಾಗಿ ಮಾಡಿಕೊಂಡಿದ್ದಾರೆ. ಬಾಗಿಲಿಗೆ ಲೈಟ್ ಹಾಕುವ ಬದಲಿಯಾಗಿ ಬಜಾಜ್ ಚೇತಕ್‌ನ ಹೆಡ್‌ಲೈಟ್ ಅನ್ನು ಗೋಡೆಗೆ ಜೋಡಿಸಿದ್ದಾರೆ. ಡೈನಿಂಗ್ ರೂಮ್ ಒಳಪ್ರವೇಶಿದಾಗ ನಟ್ ಬೋಲ್ಟ್ ಮತ್ತು ಸ್ಪ್ಯಾನರ್‌ಗಳಂತಹ ಬಿಡಿ ಭಾಗಗಳಿಂದ ಮಾಡಿದ ಡೈನಿಂಗ್ ಟೇಬಲ್, ಪೆಟ್ರೋಲ್ ಪಂಪ್ ನಳಿಕೆಯಿಂದ ಮಾಡಿದ ವಾಶ್ ಬೇಸಿನ್ ಕೂಡ ಅಷ್ಟೇ ಆಕರ್ಷಕವಾಗಿದೆ. ಮಹೀಂದ್ರಾ ಸ್ಟೀರಿಂಗ್ ಚಕ್ರವನ್ನು ಗೋಡೆಗೆ ಜೋಡಿಸಲಾಗಿದ್ದು ಸ್ವಿಫ್ಟ್ ಕಾರುಗಳ ಕೆಲವು ಪಾರ್ಟ್ ಗಳನ್ನು ಅಡುಗೆ ದೀಪಗಳಾಗಿ ಬಳಸಲಾಗಿದೆ.
ಬೈಕ್ ರೈಡಿಂಗ್‌ನಲ್ಲಿ ಅಪಾರ ಆಸಕ್ತಿ ಇದ್ದ ಇವರು ಕೆಲವೊಂದು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧನೆಗೈದ ಇವರು ಕೇವಲ ಏಳು ದಿನಗಳಲ್ಲಿ 1000 ಪ್ಲಸ್ ಕಿಲೋಮೀಟರ್‌ನಲ್ಲಿ ಬೈಕ್ ರೈಡಿಂಗ್ ಮಾಡಿದ್ದಾರೆ.
ಈತನ ಈ ಕಲಾತ್ಮಕ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು ಬಳಕೆದಾರರು ಆಟೋಮೊಬೈಲ್‌ಗಳ ಮೇಲಿನ ಉತ್ಸಾಹ ಕಂಡು ನಿಬ್ಬೆರಗಾಗಿದ್ದಾರೆ. ಈತನ ಈ ಕ್ರಿಯೇಟಿವಿಟಿಗೆ ಬಳಕೆದಾರರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಈತನ ಈ ಸೃಜನಶೀಲ ಕಲೆಗೆ ಲೆಜೆಂಡ್” ಎಂದು ಕಾಮೆಂಟ್ ಮಾಡಿದ್ದಾರೆ. ಇನೊಬ್ಬ ಬಳಕೆದಾರ ಯುವಕನ ಕ್ರೇಜ್ ಗೆ ಮೆಚ್ಚಲೇ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೊ ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ನಾಲ್ಕು ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ದುಬಾರಿ ಮದುವೆ; ವಧುವಿನ ಮನೆ ಮೇಲೆ ವಿಮಾನದಿಂದ ಹಣದ ಸುರಿಮಳೆ: ವಿಡಿಯೊ ವೈರಲ್