ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಅಭಿನಯದ ಸೂಪರ್ ಹಿಟ್ ಸಾಂಗ್‍ಗಳಿಗೆ ಡ್ಯಾನ್ಸ್ ಮಾಡಿ ವೀಕ್ಷಕರನ್ನು ರಂಜಿಸುತ್ತಿದ್ದ ತಾಂಜೇನಿಯಾದ ಪ್ರಭಾವಶಾಲಿ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್ (Kili Paul) 2025ರ ಹೊಸ ವರ್ಷವನ್ನು ಬಹಳ ವಿಶೇಷವಾಗಿ ಸ್ವಾಗತಿಸಿದ್ದಾರೆ. ಯಾವಾಗಲೂ ಬಾಲಿವುಡ್ ಸಾಂಗ್‍ಗಳಿಗೆ ಡ್ಯಾನ್ಸ್ ಮಾಡುತ್ತಿದ್ದ ಕಿಲಿ ಈ ಬಾರಿಯೂ ಹಿಂದಿಯ ಈ ಜನಪ್ರಿಯ ಹಾಡಿಗೆ ಲಿಪ್-ಸಿಂಕ್ ಮಾಡಿದ್ದಾರೆ. ಆ ಮೂಲಕ ಅವರು ಹೊಸ ವರ್ಷವನ್ನು ದೇಸಿ ಶೈಲಿಯಲ್ಲಿ ಸ್ವಾಗತಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಕಿಲಿ 2001ರ ರೊಮ್ಯಾಂಟಿಕ್ ಚಿತ್ರ ‘ತುಮ್ ಬಿನ್’ನ ‘ತುಮ್ಹರೆ ಶಿವ’ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಈ ಹಾಡು ಜನಪ್ರಿಯ ಗಾಯಕರಾದ ಅನುರಾಧಾ ಪೌಡ್ವಾಲ್ ಮತ್ತು ಉದಿತ್ ನಾರಾಯಣ್ ಅವರ ಧ್ವನಿಯಲ್ಲಿ ಮೂಡಿ ಬಂದಿದೆ. ಕಿಲಿ ತನ್ನ ನೃತ್ಯ ಮತ್ತು ಲಿಪ್-ಸಿಂಕ್ ರೀಲ್‍ಗಳಿಗೆ ಜನಪ್ರಿಯರಾಗಿದ್ದಾರೆ. ಈ ಹೊಸ ವರ್ಷದ ಸಂದರ್ಭವನ್ನು ಆಚರಿಸುವಾಗ ಅವರು ಬಾಲಿವುಡ್ ಬೀಟ್‍ಗೆ ಲಿಪ್-ಸಿಂಕ್ ಮಾಡಿದ್ದಾರೆ.
ಆಗಾಗ್ಗೆ ತನ್ನ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿಲಿ ತನ್ನ ಇತ್ತೀಚಿನ ರೀಲ್‍ಗಾಗಿ ಕ್ಯಾಶುಯಲ್ ವೆಸ್ಟರ್ನ್ ಶರ್ಟ್ ಧರಿಸುವ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದಾರೆ. ವಿಡಿಯೊದಲ್ಲಿ, ಕಿಲಿ ತನ್ನ ಕುಟುಂಬದ ಪುಟ್ಟ ಹುಡುಗನ ಜತೆ ಕುರ್ಚಿಯ ಮೇಲೆ ಕುಳಿತು ಕ್ಯಾಮೆರಾವನ್ನು ನೋಡಿ ಮುಗುಳ್ನಕ್ಕು ಭಾರತೀಯ ಹಾಡಿನ ಸಾಹಿತ್ಯವನ್ನು ಆನಂದಿಸಿದ್ದಾರೆ.
ಕಿಲಿ ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುವ ವಿಡಿಯೊವನ್ನು ಇನ್‌ಸ್ಟಾಗ್ರಾಂ ಹಂಚಿಕೊಂಡಿದ್ದಾರೆ. “ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂಬ ಸಂದೇಶದೊಂದಿಗೆ ಅವರು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:ಮದ್ಯಸೇವನೆಗೆ ಹಣ ನೀಡದ ವ್ಯಕ್ತಿಗೆ ಬಿಯರ್ ಬಾಟಲ್‌ನಿಂದ ಚುಚ್ಚಿ ಹತ್ಯೆ
ಕಿಲಿ ಅವರ ಹೊಸ ವರ್ಷದ ಶುಭಾಶಯಗಳ ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್‍ಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ, ಅಭಿಮಾನಿಗಳು ಅವರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಕೆಲವು ನೆಟ್ಟಿಗರು ಕಿಲಿ ಮೇಲಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಹಾರ್ಟ್ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.