ನವದೆಹಲಿ: ಗರಿಗರಿಯಾಗಿ ಉಬ್ಬಿದ ಬಿಸಿ ಬಿಸಿ ಪೂರಿ (poori) ಯಾರಿಗೆ ಇಷ್ಟವಿಲ್ಲ ಹೇಳಿ? ಕೆಲವರಿಗೆ ಪೂರಿ ಬಾಜಿ ಇಷ್ಟವಾದ್ರೆ ಇನ್ನು ಕೆಲವರಿಗೆ ಪೂರಿ ಕೂರ್ಮ ಇಷ್ಟ. ಮತ್ತೆ ಕೆಲವರಿಗೆ ಪೂರಿಯನ್ನು ಆಲೂ ಮಟರ್ ನಂತಹ ಗ್ರೇವಿಯೊಂದಿಗೆ ಸವಿಯುವುದು ಇಷ್ಟ.ಇದೆಲ್ಲಾ ನಮ್ಮ ಇಂಡಿಯನ್ಸ್ ಕಥೆಯಾದ್ರೆ, ಇಲ್ಲೊಂದು ಕೊರಿಯನ್ ಫ್ಯಾಮಿಲಿ ಆಲೂ ಪೂರಿ ಸವಿದು ಬಾಯಿ ಚಪ್ಪರಿಸಿದೆ. ಇನ್ನು ಇವರು ಎರಡೆರಡು ಕಡ್ಡಿ ಹಿಡ್ಕೊಂಡು ಆ ನೂಡಲ್ಸ್ ತಿನ್ನೋ ಬದ್ಲು, ಸ್ಟವ್‌ನಲ್ಲಿ ಪಾತ್ರೆ ಇಟ್ಟು ಎಣ್ಣೆಯಲ್ಲಿ ಪೂರಿ ಕಾಯಿಸ್ತಾರೇನೋ ಮಾರ್ರೆ..!? ಒಟ್ಟಿನಲ್ಲಿ ಈ ಕೊರಿಯನ್ (Korea) ಮಹಿಳೆ ಪೂರಿ ಸವಿಯುವ ವಿಡಿಯೋ ಹಾಗೂ ಇದಕ್ಕೆ ಫಿದಾ ಆಗಿರುವುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗಿದೆ.
ಕೊರಿಯನ್ ಮಹಿಳೆಯೊಬ್ಬರು ಮೊದಲ ಬಾರಿ ಭಾರತೀಯ ಆಹಾರವನ್ನು ಟ್ರೈ ಮಾಡಿ ಅದಕ್ಕೆ ಫಿದಾ ಆಗಿರುವ ವಿಡಿಯೋ ಇದಾಗಿದ್ದು, ಸದ್ಯಕ್ಕಿದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ ಸ್ಟಾ ಗ್ರಾಂನಲ್ಲಿ ಈ ವಿಡಿಯೋ ಇದೀಗ 25 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.
ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿಬಿಡಿ:
ಒಂದು ಲಕ್ಷ ಫಾಲೋವರ್ಸ್ ಗಳನ್ನು ಹೊಂದಿರುವ ‘ಸಬ್ಟ್ ಲ್ ಕ್ರೇಝಿ ಕೊರಿಯಾ’ (subtle_crazykorea) ಎಂಬ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ತನ್ನ ಸಂಬಂಧಿ ಕೊರಿಯನ್ ಮಹಿಳೆ ಭಾರತೀಯ ಡಿಶ್ ಪೂರಿಯನ್ನು ಸವಿಯುತ್ತಿರುವ ವಿಡಿಯೋವನ್ನು ಭಾರತೀಯ ವಿಲಾಗರ್ (vlogger) ಒಬ್ಬರು ಪೋಸ್ಟ್ ಮಾಡಿದ್ದಾರೆ.
‘ನನ್ನ ಕೊರಿಯನ್ ಕುಟುಂಬದ ಮೊದಲ ಭಾರತೀಯ ಆಹಾರ’ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋದಲ್ಲಿ ಯುವಕ ತನ್ನ ಸಂಬಂಧಿಕ ಮಹಿಳೆಗೆ ಪೂರಿ ಮತ್ತು ಆಲು ಮಟರ್ ಟೇಸ್ಟ್ ಮಾಡಲು ಹೇಳುತ್ತಿರುವುದು ರೆಕಾರ್ಡ್ ಆಗಿದೆ. ಆ ಕೊರಿಯನ್ ಮಹಿಳೆ ಈ ಭಾರತೀಯ ಫುಡ್ ಸವಿದು ಕ್ಲೀನ್ ಬೌಲ್ಡ್ ಆಗಿದ್ದಾರೆ. ತನ್ನ ಟೇಬಲ್ ಎದುರಿಗಿದ್ದ ಪೂರಿ ಮತ್ತು ಆಲೂ ಮಟರ್ ಖಾದ್ಯವನ್ನು ಸವಿದು ಖುಷಿಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: Himachal Horror: ರಕ್ಷಕರಾ ಇಲ್ಲ ಇವ್ರು ಭಕ್ಷಕರಾ? ಮದ್ಯ, ಊಟ ಇಲ್ಲಎಂದ ರೆಸಾರ್ಟ್ ಮ್ಯಾನೇಜರ್‌ನನ್ನೇ ಥಳಿಸಿ ಕೊಂದ ಪೊಲೀಸರು !
ಬಳಿಕ ಪ್ರತಿಕ್ರಿಯಿಸಿರುವ ಆಕೆ, ‘ಇದು ಚೆನ್ನಾಗಿದೆ..’ ಎಂದಿದ್ದಾರೆ. ಐದು ಪೂರಿಗಳನ್ನು ಸವಿದ ಬಳಿಕ ಈ ಮಹಿಳೆ ಒಂದು ಪ್ಲೇಟ್ ಕಿಮ್ಚಿ ಮತ್ತು ಅನ್ನವನ್ನು ಹಾಕಿಕೊಂಡು ತಿಂದಿದ್ದಾರೆ ಎಂದು ಆ ವಿ ಲಾಗರ್ ತನ್ನ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದೀಗ ಇದಕ್ಕ ಲೈಕ್ ಗಳ ಮಹಾಪೂರವನ್ನೇ ಹರಿಸಿದ್ದಾರೆ ಮತ್ತು ಕಮೆಂಟ್ ಗಳನ್ನು ಹಾಕಿದ್ದಾರೆ. ಆಲೂ ಮಟರ್ ಬಾಯಲ್ಲಿ ನೀರೂರುವಂತಿತ್ತು ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಕೆಲವೊಂದು ಸ್ಯಾಂಪಲ್ ಕಮೆಂಟ್‌ಗಳು ಇಲ್ಲಿವೆ ನೋಡಿ.