ಹೊಸದಿಲ್ಲಿ: ಕಷ್ಟದಲ್ಲಿರುವ ಯಾವುದೇ ವ್ಯಕ್ತಿಯಾಗಲಿ ಅಥವಾ ಯಾವುದೇ ಜೀವಿಯಾಗಲಿ ಸಹಾಯ ಮಾಡಿದಾಗ ಸಿಗುವ ಖುಷಿ, ನೆಮ್ಮದಿ ಹೇಳತಿರದು. ತಮ್ಮ ಸ್ವಾರ್ಥ ನೋಡದೆಯೇ ಮತ್ತೊಬ್ಬರ ಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿ ಇತರರಿಗೆ ಸಹಾಯ ಮಾಡುವ ಉದ್ದೇಶ ಇದೆಯಲ್ಲ ಇದು ಯಾವತ್ತಿದ್ದರೂ ಒಳಿತು ಎನ್ನುವ ಮಾತಿದೆ. ಇಂತಹ ಅನೇಕ ಹೃದಯಸ್ಪರ್ಶಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ವಿಡಿಯೊವೊಂದು ನೆಟ್ಟಿಗರ ಗಮನ ಸೆಳೆದಿದೆ. ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವನ್ನು ಇಬ್ಬರು ಹೃದಯವಂತರು ಸೇರಿ ರಕ್ಷಿಸಿರುವ ದೃಶ್ಯ ಭಾರೀ ವೈರಲ್ ಆಗುತ್ತಿದೆ (Viral Video).
ಪಾರಿವಾಳವೊಂದು ವಿದ್ಯುತ್ ತಂತಿಯಲ್ಲಿ ಸಿಲುಕಿ ವಿಲ ವಿಲ ಒದ್ದಾಡುತ್ತಿದ್ದಂತೆ ಹೃದಯವಂತರಾದ ಇಬ್ಬರು ವ್ಯಕ್ತಿಗಳು ಪಾರಿವಾಳವನ್ನು ರಕ್ಷಣೆ ಮಾಡುವ ದೃಶ್ಯ ಇದು. ಮಾನವೀಯ ಮೌಲ್ಯವನ್ನು ಹೊಂದಿರುವ ಈ ವಿಡಿಯೊ ಸಹಜವಾಗಿಯೇ ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೊದಲ್ಲಿ ಏನಿದೆ?
ವಿದ್ಯುತ್ ತಂತಿಯಲ್ಲಿ ಪಾರಿವಾಳವೊಂದು ಸಿಲುಕಿ ಒದ್ದಾಡುತ್ತಿದೆ. ಈ ಸಂದರ್ಭ ಇಬ್ಬರು ಯುವಕರು ಸೇರಿ ಹಕ್ಕಿಯ ರಕ್ಷಣೆ ಮಾಡಲು ಮುಂದಾಗುತ್ತಾರೆ. ತಂತಿಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಪಾರಿವಾಳವನ್ನು ರಕ್ಷಿಸಲು ಒಬ್ಬ ವ್ಯಕ್ತಿ ನಿಂತಿರುವ ಕಾರಿನ ಮೇಲೆ ಏರುತ್ತಾನೆ. ಬಳಿಕ ಪುರುಷರಿಬ್ಬರು ಪರಸ್ಪರ ಹೆಗಲ ಮೇಲೆ ಏರಿ ತಕ್ಷಣ ಹಕ್ಕಿಯನ್ನು ವಿದ್ಯುತ್ ತಂತಿಯಿಂದ ಮುಕ್ತಗೊಳಿಸುವ ದೃಶ್ಯ ನೋಡುಗರು ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ. ಹೀಗೆ ಇಬ್ಬರು ಯುವಕರು ಪಾರಿವಾಳವನ್ನು ಸಂಕಟದಿಂದ ಪಾರು ಮಾಡುತ್ತಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ಮಾನವೀಯ ಮೌಲ್ಯದ ಈ ದೃಶ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಅನೇಕ ಬಳಕೆದಾರರು ಈ ಯುವಕರನ್ನು ನಿಜ ಜೀವನದ ಹೀರೋಗಳು ಎಂದು ಶ್ಲಾಘಿಸಿದರು. ಇನ್ನೊಬ್ಬ ಬಳಕೆದಾರರು ಇವರು ನಮಗೆ ಬೇಕಾದ ವೀರರು, ಧೈರ್ಯಶಾಲಿ, ದಯೆ ಮತ್ತು ಸಹಾನುಭೂತಿ ಯುಳ್ಳವರು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: Manmohan Singh: ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ