ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಎಂಎಸ್ ಹಲಾಲ್ ಫುಡ್ ಕಾರ್ಟ್‍ನ ಕಾರ್ಮಿಕನೊಬ್ಬ ಪಾರಿವಾಳವನ್ನು ಬರಿಗೈಯಿಂದ ಹಿಡಿದಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಫುಡ್ ಕಾರ್ಟ್‍ನ ಕಾರ್ಮಿಕ ಬೀದಿಯಲ್ಲಿರುವ ಪಾರಿವಾಳಗಳನ್ನು ಹಿಡಿದು ಪ್ಲಾಸ್ಟಿಕ್‍ನಲ್ಲಿ ಹಾಕಿಕೊಂಡು ಹೋಗಿರುವುದು ಈ ವಿಡಿಯೊದಲ್ಲಿ ಕಂಡುಬಂದ ಬಳಿಕ ಆಹಾರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.
ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಎಂಎಸ್ ಹಲಾಲ್ ಕಾರ್ಟ್‍ನ ಕಾರ್ಮಿಕನೊಬ್ಬ ನ್ಯೂಯಾರ್ಕ್ ನಗರದ ಜನನಿಬಿಡ ಪಾದಚಾರಿ ಮಾರ್ಗದಲ್ಲಿ ಪಾರಿವಾಳವನ್ನು ಹಿಡಿದು ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಂಡು ಹೋಗಿದ್ದಾರೆ. ಆ ವ್ಯಕ್ತಿಯ ಈ ವರ್ತನೆ ಕಂಡು ಎಂದು ನೋಡುಗರು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ಆತ ಅದನ್ನು ಹಿಡಿದು ನೇರವಾಗಿ ಫುಡ್‌ಕಾರ್ಟ್‌ನೊಳಗೆ ಕೊಂಡೊಯ್ದಿರುವುದು ಹಲವು ಅನುಮಾನಗಳುಗೆ ಎಡೆಮಾಡಿಕೊಟ್ಟಿದೆ.
ಡಿಸೆಂಬರ್ 29 ರಂದು ಕ್ವೀನ್ಸ್ ಬೌಲೆವಾರ್ಡ್‍ನರೆಗೊ ಸೆಂಟರ್ ಮಾಲ್ ಬಳಿ ಈ ಘಟನೆ ನಡೆದಿದ್ದು, ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ವೈರಲ್ ವಿಡಿಯೊದಲ್ಲಿ ಕಾರ್ಮಿಕನು ಪಾರಿವಾಳವನ್ನು ಹಿಡಿದು ಫುಡ್ ಟ್ರಕ್‍ನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ. ಹಾಗಾಗಿ ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ.
A dude in NYC just caught a pigeon with his bare hands and took it back into his food truck… pic.twitter.com/GDNYeErHGv
— American AF 🇺🇸 (@iAnonPatriot) January 4, 2025
ಇದೀಗ ಆಹಾರದ ಸುರಕ್ಷತೆಯ ಬಗ್ಗೆ ಭಯಭೀತರಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು ವ್ಯಂಗ್ಯವಾಗಿ ಕಾಮೆಂಟ್ ಮಾಡಿ, “ಪಾಪ, ಪಾರಿವಾಳನ್ನು ನಾಯಿಗಳಿಗೆ ಬಡಿಸುವ ಡ್ಯೂಡ್, ಪಾರಿವಾಳದ ಸಲಾಡ್, ಪಾರಿವಾಳ ಬರ್ಗರ್, ಪಾರಿವಾಳ ನೂಡಲ್ ಸೂಪ್‍ಗೆ ಬಳಸಲಾಗುತ್ತದೆ.”ಎಂದಿದ್ದಾರೆ. ಇನ್ನೊಬ್ಬರು “ವೆರೀ ಹಲಾಲ್” ಎಂದು ಹೇಳಿದ್ದಾರೆ.
ಕೆಲವು ನೆಟ್ಟಿಗರು ತ್ವರಿತವಾಗಿ ಪ್ರತಿಕ್ರಿಯಿಸಿ, “ಫುಡ್ ಟ್ರಕ್ ವಿಶೇಷತೆ ಏನು ಎಂದು ಈಗ ನಮಗೆ ತಿಳಿದಿದೆ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಪಾರಿವಾಳ ಹಲಾಲ್ ಆಹಾರವೇ? ಅಧಿಕಾರಿಗಳು ಎಲ್ಲಿದ್ದಾರೆ? ಎಂದು ಕೇಳಿದ್ದಾರೆ. ಇತರರು ಬೀದಿ ಬದಿಯ ಆಹಾರದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಈ ವೃದ್ಧನ ಸಾಹಸಕ್ಕೊಂದು ಸಲಾಂ! ಹಗ್ಗದಲ್ಲೇ 1 ಕಿ.ಮೀ. ದೂರ ಜಾರಿದ ವಿಡಿಯೊ ವೈರಲ್
“ದಿನಸಿ ವಸ್ತುಗಳ ಬೆಲೆ ಹೆಚ್ಚಳದ ಪರಿಣಾಮ ವ್ಯಾಪಾರಿಗಳು ವ್ಯವಹಾರದಲ್ಲಿ ಲಾಭ ಪಡೆಯಲು ಇಂತಹ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ” ಎಂದು ವ್ಯಂಗ್ಯವಾಗಿ ನೆಟ್ಟಿಗರೊಬ್ಬರು ಬರೆದಿದ್ದಾರೆ.