Thursday, 9th January 2025

Viral Video: ಬಾಹ್ಯಾಕಾಶದಲ್ಲಿ ಹಸಿರು ಬಣ್ಣದ ಅರೋರಾದ ಬೆಳಕಿನಾಟ! ವಿಸ್ಮಯಕಾರಿ ವಿಡಿಯೊ ವೈರಲ್

aurora viral video

ನವದೆಹಲಿ: ಬಾಹ್ಯಾಕಾಶದಲ್ಲಿ ಉಂಟಾಗುವ ಕೆಲವೊಂದು ಅಚ್ಚರಿಯ ಘಟನೆ, ಬಾಹ್ಯಾಕಾಶದಿಂದ ಸೆರೆಹಿಡಿಯಲಾದ ಚಿತ್ರ ಮತ್ತು ವಿಡಿಯೊವನ್ನು ಗಗನಯಾತ್ರಿಗಳು ಹಂಚಿಕೊಳ್ಳುತ್ತಾರೆ. ಈ ನೋಟವು  ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬಾಹ್ಯಾಕಾಶದಲ್ಲಿ ಉಂಟಾಗುವ ಅಚ್ಚರಿಯ ಸಂಗತಿಗಳಲ್ಲಿ ಬಣ್ಣದ ಅರೋರಾಗಳು ಕೂಡ ಪ್ರಮುಖವಾಗಿದೆ. ಇದೀಗ ನಾಸಾದ  ಗಗನಯಾತ್ರಿಯೊಬ್ಬರು ನೀವು ಹಿಂದೆಂದೂ ನೋಡಿರದ  ಅರೋರಾದ ವಿಡಿಯೊ ಹಂಚಿಕೊಂಡಿದ್ದಾರೆ. ತೀವ್ರ  ಹಸಿರು  ಬಣ್ಣದ ಅರೋರಾದ ಅದ್ಭುತ ನೋಟದ ದೃಶ್ಯ  ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ಸುಂದರವಾದ ಅರೋರಾವನ್ನು ಗಗನಯಾತ್ರಿಯೊಬ್ಬರು ಹಂಚಿಕೊಂಡಿದ್ದು, ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ  ಬಹಳಷ್ಟು ವೈರಲ್‌ ಆಗಿದೆ(Viral Video).

NASA ಗಗನಯಾತ್ರಿ ಡಾನ್ ಪೆಟ್ಟಿಟ್ ಎನ್ನುವವರು  ಬಾಹ್ಯಾಕಾಶದಿಂದ ಸೆರೆಹಿಡಿಯಲಾದ ಅರೋರಾದ ಸಮ್ಮೋಹನಗೊಳಿಸುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಫ್ಲೈಟ್ ಇಂಜಿನಿಯರ್ ಮತ್ತು ಎಕ್ಸ್‌ಪೆಡಿಶನ್ 72 ಸಿಬ್ಬಂದಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಂಟಾದ  ಅರೋರಾದ ಹಸಿರು ಬಣ್ಣದ ನೋಟವನ್ನು ಶೇರ್ ಮಾಡಿದ್ದಾರೆ. ಈ ದೃಶ್ಯ ನೋಡೋದೆ ಒಂದು ಅದ್ಭುತ!  ಫ್ಲೈಯಿಂಗ್ ಓವರ್ ಅರೋರಾ, ತೀವ್ರ ಹಸಿರು ಎನ್ನುವ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೊ  ನೋಡುಗರ ಗಮನ ಸೆಳೆದಿದ್ದು ವಿಡಿಯೊ 130.4K ಹೆಚ್ಚು ವೀಕ್ಷಣೆ ಗಳಿಸಿದೆ.

ಅರೋರಾದ ಪಚ್ಚೆ ಹಸಿರು ಬಣ್ಣವನ್ನು ನೋಡಿ ಹೆಚ್ಚಿನ ಜನರು ದಿಗ್ಭ್ರಮೆಗೊಂಡರೆ, ಕೆಲವರು ISS ಭೂಮಿಗೆ ಅಷ್ಟು ಸಮೀಪದಲ್ಲಿ ಹಾರಲು ಸಾಧ್ಯವಿಲ್ಲ ಇದು ನಕಲಿ‌ ವೀಡಿಯೊ ಎಂದು ಹೇಳಿದ್ದಾರೆ. ಕೆಲವರು ಇದನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಡಿಯೊ ನೋಡಿದ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ಹಲವಾರು ಬಳಕೆದಾರರು ಈ ಸೌಂದರ್ಯವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಇದು ಮ್ಯಾಜಿಕ್ ರೀತಿ ಇದೆ ಎಂದಿದ್ದಾರೆ. ಇನ್ನೊಬ್ಬರು ವಾವ್, ನಿಜವಾಗಿಯೂ ಅದ್ಭುತ!  ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇದು ಎಐನಂತೆ ತೋರುತ್ತಿದೆ, ಅರೋರಾ ಸುತ್ತಲೂ ಚಲಿಸುತ್ತದೆ, ಇದು ಕೇವಲ ಮಿನುಗುವ ಸ್ಥಿರ ಚಿತ್ರವಲ್ಲ. ಇದು ನಕಲಿ ವಿಡಿಯೊ ಅಂದಿದ್ದಾರೆ.

ಏನಿದು ಆರೋರಾ?

ಅರೋರಾ ಎಂದರೆ  ಆಕಾಶದಲ್ಲಿ  ಉಂಟಾಗುವ ನೈಸರ್ಗಿಕ ಬೆಳಕಿನ ಪ್ರದರ್ಶನವಾಗಿದ್ದು, ಧ್ರುವ ಪ್ರದೇಶಗಳಲ್ಲಿ ರಾತ್ರಿಯ ಸಮಯ ಆಗಸದಲ್ಲಿ ವರ್ಣರಂಜಿತ ಬೆಳಕಿನಾಟದಂತೆ ಕಾಣಸಿಗಲಿದೆ. ಸೂರ್ಯನ ಚಾರ್ಜ್ಡ್ ಕಣಗಳು ಭೂಮಿಯ ಕಾಂತಕ್ಷೇತ್ರದೊಂದಿಗೆ ಸಂವಹನ ನಡೆಸಿದಾಗ ಮತ್ತು  ವಾತಾವರಣದಲ್ಲಿನ ಅನಿಲಗಳೊಂದಿಗೆ ಘರ್ಷಿಸಿದಾಗ ಈ ವಿದ್ಯಮಾನವು ಸಂಭವಿಸಿ ಹಸಿರು, ನೇರಳೆ, ಕೆಂಪು ಮತ್ತು ನೀಲಿ ಬಣ್ಣಗಳಂತಹ ರೋಮಾಂಚಕ ಬಣ್ಣಗಳನ್ನು ಉಂಟುಮಾಡುತ್ತದೆ.

ಈ ಸುದ್ದಿಯನ್ನು ಓದಿ:Police Harassment: ಠಾಣೆಗೆ ಬಂದ ಮಹಿಳೆ ಮೇಲೆ ಡಿವೈಎಸ್‌ಪಿ ಲೈಂಗಿಕ ವಿಕೃತಿ, ವಿಡಿಯೋ ವೈರಲ್‌

Leave a Reply

Your email address will not be published. Required fields are marked *