ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ವಿಶೇಷ ಮಹತ್ವವಿದೆ. ಮದುವೆಯಲ್ಲಿ ಹಾಡು , ನೃತ್ಯ ಕುಣಿತ ಇವೆಲ್ಲವೂ ಸಾಮಾನ್ಯ. ಸ್ನೇಹಿತರೆಲ್ಲರೂ ಸೇರಿ ನವದಂಪತಿಗೆ ಕಿಚಾಯಿಸಿ, ಕೀಟಲೆ ಕೊಡುತ್ತಾರೆ. ಅಂತಹುದೇ ಮದುವೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದ್ದು, (Viral Video) ಪುರೋಹಿತರು ಮಂತ್ರ ಜಪಿಸಿ, ಆಶೀರ್ವಾದ ನೀಡುವ ಸಂದರ್ಭದಲ್ಲಿ ವರನ ಸ್ನೇಹಿತರು ಕೀಟಲೆ ಮಾಡಿದ್ದಾರೆ ಇದರಿಂದ ಕೋಪಗೊಂಡ ಪುರೋಹಿತರು ಸಿಟ್ಟಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Kalesh b/w a Pandit ji and Some Guys over throwing Flower during Marriage Ritual's:
— Ghar Ke Kalesh (@gharkekalesh) December 26, 2024
pic.twitter.com/qC3vSabKRj
ವೈರಲ್ ವೀಡಿಯೊದಲ್ಲಿ ಪುರೋಹಿತರು ಮದುವೆ ಮಾಡಿಸುತ್ತಿರುವಾಗ ವರನ ಸ್ನೇಹಿತರು ನವ ದಂಪತಿಗಳ ಮೇಲೆ ಹೂ ಎಸೆದಿದ್ದಾರೆ. ನೆರೆದಿದ್ದ ಕುಟುಂಬಸ್ಥರು ಕೂಡ ಅವರಿಗೆ ಸಾಥ್ ನೀಡಿದ್ದಾರೆ. ಇದು ಅತೀರೇಕಕ್ಕೆ ಹೋದಾಗ ಪುರೋಹಿತರಿಗೆ ಕೋಪ ಬಂದಿದೆ. ಅವರು ತಮ್ಮ ಕೈಯಲ್ಲಿದ್ದ ಹೂವಿನ ಬಟ್ಟಲನ್ನು ಯುವಕರ ಮೇಲೆ ಎಸೆದಿದ್ದಾರೆ. ಅದು ಬಿಳಿ ಸೂಟ್ ಧರಿಸಿದ್ದ ವ್ಯಕ್ತಿಗೆ ತಗುಲಿದೆ. ಈ ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ವಧು ಮತ್ತು ವರರು ಕೂಡ ಗೊಂದಲಕ್ಕೊಳಗಾದರು.
ವೈರಲ್ ಆದ ಈ ವಿಡಿಯೋ ಎಕ್ಸ್‌ನಲ್ಲಿ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆ ಹೊಂದಿದೆ. 300 ಕ್ಕೂ ಹೆಚ್ಚು ಬಾರಿ ಮರುಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ಪುರೋಹಿತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ಬಳಕೆದಾರರು ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ ಶೋಕಿ ,ಫೋಟೋಗಾಗಿ ಮದುವೆಯಾಗಬೇಡಿ. ಒಂದು ವೇಳೆ ನಿಮಗೆ ಆಚರಣೆ, ಸಂಪ್ರದಾಯಗಳ ಮೇಲೆ ನಂಬಿಕೆ ಇಲ್ಲದೆ ಹೋದರೆ ಅವರನ್ನು ಕರೆಯಬೇಡಿ, ಇದೇ ರೀತಿ ನಿಮ್ಮ ಸ್ನೇಹಿತರನ್ನು ಕರೆಸಿ ಮದುವೆಯಾಗಿ ಎಂದು ಹೇಳಿದ್ದಾರೆ.
ತೆಂಗಿನಕಾಯಿ ಮದುವೆ
ತಮಿಳುನಾಡಿನ ಪೊಲ್ಲಚ್ಚಿಯ ತೆಂಗಿನಕಾಯಿ ವ್ಯಾಪಾರಿಯ ಮನೆಯ ಮದುವೆಯ ಸಂಭ್ರಮಕ್ಕಿಂತ ಅಲ್ಲಿ ಸಿದ್ಧಗೊಂಡ ಊಟೋಪಚಾರದ ವ್ಯವಸ್ಥೆಯ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ತನ್ನ ತೆಂಗಿನ ಕಾಯಿಯ ವ್ಯಾಪಾರದ ಥೀಮ್ ಇಟ್ಟುಕೊಂಡು ಇಡೀ ಮದುವೆ ಮನೆಯನ್ನು ಸಿಂಗಾರಗೊಳಿಸಲಾಗಿದೆ. ಊಟಕ್ಕೆ ಕೂರುವ ಅತಿಥಿಗಳಿಗೆ ಒಡೆದು ಹೊಳಾದ ತೆಂಗಿನಕಾಯಿ ಮಾದರಿಯ ಒಂದು ಗೂಡಿನಲ್ಲಿ ಕೂರಿಸಿ ತೆಂಗಿನಕಾಯಿ ಹೋಳಿನ ರೀತಿಯ ಟೇಬಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಭಿನ್ನ ಹಾಗೂ ವಿಶೇಷ ಪ್ರಯತ್ನದ ವ್ಯವಸ್ಥೆಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಈ ಸುದ್ದಿಯನ್ನೂ ಓದಿ : Viral Video: ಅದ್ದೂರಿ ಮದುವೆ ಇದು! ವರನಿಗೆ 2.5 ಕೋಟಿ ರೂ. ಪುಲ್ ಕ್ಯಾಶ್ ಗಿಫ್ಟ್; ವಿಡಿಯೊ ಭಾರೀ ವೈರಲ್