ಲಖನೌ: ಪ್ರೇಮ ವೈಫಲ್ಯದಿಂದ ಮನನೊಂದು ಕೆಲವರು ಬದುಕಿಗೆ ಕೊನೆ ಹಾಡಲು ಮುಂದಾಗುತ್ತಾರೆ. ಅದರಲ್ಲೂ ಕೆಲವರು ಸಾವಿಗೂ ಮುನ್ನ ವಿಡಿಯೋ ಮಾಡಿ ನಂತರ ಸಾವಿಗೆ ಶರಣಾಗುವುದನ್ನು ನೋಡಿರ್ತೇವೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪ್ರೇಯಸಿ ಜತೆಗಿನ ಸಂಬಂಧ ಮುರಿದು ಬಿದ್ದ ಬಳಿಕ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಸೊಳ್ಳೆ ನಿವಾರಕ ದ್ರಾವಣವನ್ನು ಕುಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಯುವಕನನ್ನು ರಕ್ಷಿಸಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಸಂಬಂಧ ಮುರಿದು ಬಿದ್ದ ಬಳಿಕ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾನೆ. ತೀವ್ರ ಖಿನ್ನತೆಗೆ ಒಳಗಾಗಿದ್ದ ಆತ ಶುಕ್ರವಾರ ತಡರಾತ್ರಿ ಸೊಳ್ಳೆಗಳನ್ನು ಕೊಲ್ಲುವ ರಾಸಾಯನಿಕ ಸೇವಿಸುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ್ದಾನೆ. ಈ ಆತಂಕಕಾರಿ ಪೋಸ್ಟ್ ವೈರಲ್ ಆಗಿ ಸ್ಥಳೀಯ ಪೊಲೀಸರಿಗೆ ತಲುಪಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ಯುವಕನನ್ನು ರಕ್ಷಿಸಲು ಮುಂದಾದರು.
आगरा में युवती ने युवक को प्यार में धोखा दे दिया।
— Madan Mohan Soni (आगरा वासी) (@madanjournalist) November 9, 2024
युवक ने विषाक्त पदार्थ का सेवन कर इंस्टाग्राम पर वीडियो अपलोड कर दिया।
युवक अस्पताल में भर्ती है और इलाज जारी है। pic.twitter.com/9t4ZKqNBUu
ಮುಂಜಾನೆ ಸರಿಸುಮಾರು 3.30ಕ್ಕೆ ಯುವಕನ ಮನೆಗೆ ಆಗಮಿಸಿದ ಪೊಲೀಸರು ಬಲವಂತವಾಗಿ ಬಾಗಿಲು ಮುರಿದು ಆತನ ಕೊನೆ ಪ್ರವೇಶಿಸಿ ಆತನನ್ನು ರಕ್ಷಿಸಿದರು. ಕೂಡಲೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತನ ಜೀವ ಉಳಿಸಲಾಗಿದೆ. ಯುವತಿಯಿಂದ ದೂರವಾದ ಬಳಿಕ ಯುವಕ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಪೊಲೀಸ್ ಆಯುಕ್ತರ ಮಾಧ್ಯಮ ವಿಭಾಗ ಈ ವಿಡಿಯೋವನ್ನು ಸ್ವೀಕರಿಸಿತ್ತು. ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ವಿಷ ಸೇವಿಸುತ್ತಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಸಾಯುವ ಉದ್ದೇಶ ಹೊಂದಿದ್ದಾನೆ ಎಂದು ಸಂದೇಶದಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿಗಳಾದ ದುರ್ಗಾಶಂಕರ್ ಮತ್ತು ಮನೋಜ್ ಕುಮಾರ್ ಅವರು ಆಗ್ರಾದ ನಾರೈಚ್‌ನ ಸತಿ ನಗರ ಪ್ರದೇಶದಲ್ಲಿರುವ ಯುವಕನ ಮನೆಗೆ ಸೂಚನೆಯ ಮಾಹಿತಿಯನ್ನು ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ತಲುಪಿದರು.
MS Dhoni: ಥಾಯ್ಲೆಂಡ್ ಬೀಚ್‌ನಲ್ಲಿ ಧೋನಿ ಎಂಜಾಯ್; ವಿಡಿಯೊ ವೈರಲ್
ಅಧಿಕಾರಿಗಳು ಮೊದಲು ಯುವಕನ ಕೊಠಡಿಯ ಬಾಗಿಲು ತಟ್ಟಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ಅವರು ಬಾಗಿಲು ಮುರಿದು ಮನೆಯೊಳಗೇ ಪ್ರವೇಶಿಸಿದ್ದಾರೆ. ಯುವಕ ಅರೆಪ್ರಜ್ಞಾವಸ್ಥೆಯಲ್ಲಿದ್ದುದನ್ನು ನೋಡಿ ಕೂಡಲೇ ಆತನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಆರೈಕೆಯ ಅನಂತರ ಆತನ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ಸೊಳ್ಳೆ ನಿವಾರಕ ರಾಸಾಯನಿಕವನ್ನು ಸೇವಿಸಿದ್ದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಯುವಕ ನಾರೈಚ್‌ನ ಸತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಮೂಲತಃ ಆಗ್ರಾದವನಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.