ಉತ್ತರಪ್ರದೇಶ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗ್ಬೇಕು ಅನ್ನೋದು ಬಹುತೇಕರ ಹಂಬಲ. ಪುಟ್ಟ ಕಂದಮ್ಮನಿಂದ ಹಿಡಿದು ಇಳಿವಯಸ್ಸಿನ ಮುದುಕರನ್ನು ಬಹಳ ಬೇಗ ಸೆಳೆಯುವುದು ರೀಲ್ಸ್. ಬೇಕಾ ಬಿಟ್ಟಿ ರೀಲ್ಸ್ ಮಾಡುತ್ತಾ ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವವರಿಗಿಂತ ಟ್ರೋಲ್ ಆಗುವವರೇ ಹೆಚ್ಚು. ಇಲ್ಲೊಬ್ಬ ರೀಲ್ಸ್ ಹುಚ್ಚಾಟದಿಂದ ಪೊಲೀಸ್ ಠಾಣೆ ಮೆಟ್ಟಿಲೇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಈತನ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ(Viral Video).
ಇತ್ತೀಚೆಗೆ ಯೂಟ್ಯೂಬರ್ ಒಬ್ಬ ತನ್ನ ಬೆಂಬಲಿಗರೊಂದಿಗೆ ಎಮ್ಮೆ ಸವಾರಿ ಮಾಡುತ್ತಾ ರೀಲ್ಸ್ ಮಾಡಿದ್ದಾನಂತೆ. ಇದರಿಂದಾಗಿ ಸಿಹೆಚ್ಸಿ ಆಸ್ಪತ್ರೆಯ ಹೊರಗಿನ ಬೀದಿಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಕೋಪಗೊಂಡ ಪೊಲೀಸರು ಪೊಲೀಸ್ ಠಾಣೆಯೊಳಗೆ ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೊಲೀಸರು ಯೂಟ್ಯೂಬರ್ ಅನ್ನು ಲಾಕ್ ಮಾಡಿ ಪೊಲೀಸ್ ಠಾಣೆಯೊಳಗೆ ಕೋಲುಗಳಿಂದ ಹೊಡೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯೂಟ್ಯೂಬರ್ ತನ್ನ ಬೆಂಬಲಿಗರೊಂದಿಗೆ ಎಮ್ಮೆ ಸವಾರಿ ಮಾಡುವಾಗ ರೀಲ್ಸ್ ತಯಾರಿಸಿದ್ದಾನೆ. ಇದರಿಂದಾಗಿ ಸಿಹೆಚ್ಸಿ ಆಸ್ಪತ್ರೆಯ ಹೊರಗಿನ ಬೀದಿಗಳಲ್ಲಿ ಗೊಂದಲ ಉಂಟಾಯಿತು. ಪೊಲೀಸರು ತಕ್ಷಣ ಯೂಟ್ಯೂಬರ್ ಅನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆತಂದಿದ್ದಾರಂತೆ.
#अमरोहा की #कोर्ट चौकी में पुलिस की दबंगई का वीडियो वायरल..#पुलिस ने #यूट्यूबर को बंद कर #लाठी डंडों से पीटा..#भैंसे पर सवार होकर यूट्यूबर पर बना रहा था #रील..चौकी इंचार्ज कोमल तोमर पर लगा आरोप..वीडियो वायरल होने पर पुलिस अधीक्षक ने दिए जांच के आदेश.. #UPPolice @amrohapolice pic.twitter.com/2qhaLXrNOO
— Vinit Tyagi(Journalist) (@tyagivinit7) November 25, 2024
ಮೌ ಚೌಕ್ ನಿವಾಸಿ ರೆಹಾನ್ ಎಂದು ಗುರುತಿಸಲ್ಪಟ್ಟ ಯೂಟ್ಯೂಬರ್ ಎಮ್ಮೆ ಸವಾರಿ ಮಾಡುತ್ತಾ ಅಮ್ರೋಹಾ ಪೊಲೀಸ್ ಠಾಣೆ ಪ್ರದೇಶದ ಅಡಿಯಲ್ಲಿ ಬರುವ ಸಿಹೆಚ್ಸಿ ಆಸ್ಪತ್ರೆಯ ಬಳಿಯ ಮಾರುಕಟ್ಟೆ ಪ್ರದೇಶಕ್ಕೆ ತಲುಪಿದಾಗ ಈ ಘಟನೆ ನಡೆದಿದೆಯಂತೆ. ಪೊಲೀಸರು ಸ್ಥಳಕ್ಕೆ ಬಂದು ರೆಹಾನ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಅವರ ಬೆಂಬಲಿಗರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ಶುರುಮಾಡಿದ್ದಾರೆ.
ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದ ಬೆಂಬಲಿಗರ ವಿರುದ್ಧ ಪೊಲೀಸರು ಕ್ರಮ ಕೈಗೊಂಡರು ಮತ್ತು ಜನಸಮೂಹವನ್ನು ಚದುರಿಸಲು ಕೋಲುಗಳಿಂದ ಅವರನ್ನು ಥಳಿಸಿದ್ದಾರೆ. ಪೊಲೀಸರು ಜನಸಮೂಹವನ್ನು ಕೋಲುಗಳಿಂದ ಕ್ರೂರವಾಗಿ ಹೊಡೆಯುವುದು ಮತ್ತು ಜನಸಮೂಹದಲ್ಲಿದ್ದ ಕೆಲವು ಪ್ರತಿಭಟನಾಕಾರರನ್ನು ಒದೆಯುವುದು ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಬೀದಿಯಲ್ಲಿ ಭಾರೀ ರಂಪಾಟ; ಮುಖಾಮೂತಿ ನೋಡದೇ ಬಡಿದಾಡಿಕೊಂಡ ವ್ಯಾಪಾರಿಗಳು! ವಿಡಿಯೊ ವೈರಲ್
ಘಟನೆಯ ತನಿಖೆಯ ಆಧಾರದ ಮೇಲೆ, ಅಮ್ರೋಹಾ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎನ್ನಲಾಗಿದೆ.