ನವದೆಹಲಿ: ಪಕೋಡಾ ಎಲ್ಲರ ಇಷ್ಟದ ತಿನಿಸು. ಅದರಲ್ಲೂ ಈ ಚಳಿಗಾಲದಲ್ಲಿ ಬಿಸಿಬಿಸಿ ಪಕೋಡಾ ಸವಿದರೆ ಬಹಳಷ್ಟು ರುಚಿ.ನೀವೆಲ್ಲ ಮೆಣಸಿನ ಕಾಯಿ ಪಕೋಡ, ಆಲೂಗಡ್ಡೆ ಪಕೋಡ,ಈರುಳ್ಳಿ ಪಕೋಡ ತಿಂದಿರಬಹುದು! ಆದರೆ ಗುಲಾಬಿ ಹೂವಿನ ಪಕೋಡ(Rose Pakoda) ತಿಂದಿದ್ದೀರಾ? ಅರೆರೇ… ಇದೇನು ವಿಚಿತ್ರ ಪಕೋಡಾ! ಏನಪ್ಪಾ ಇದೆಲ್ಲಾ ಅಂತೀರಾ? ಇಂತಹ ಚಿತ್ರ ವಿಚಿತ್ರ ಹೊಸ ರುಚಿಯ ಪ್ರಯೋಗದ ದೃಶ್ಯಗಳು ಸದಾ ಸೋಶಿಯಲ್ ಮೀಡಿಯಾದಲ್ಲೂ ಕಾಣಸಿಗುತ್ತವೆ. ಅಂತಹುದೇ ಈ ಡೈಸಿ ಫ್ಲವರ್ ಪಕೋಡ ಪಾಕವಿಧಾನ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ (Viral Video) ಆಗುತ್ತಿದೆ.
ಮಹಿಳೆಯೊಬ್ಬರು ಗುಲಾಬಿ ಹೂವುಗಳನ್ನು ಬಳಸಿ ಅದನ್ನು ಹಿಟ್ಟಿನಲ್ಲಿ ಅದ್ದಿ ಅದು ಗರಿಗರಿಯಾಗುವವರೆಗೆ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡುವ ವಿಡಿಯೊ ಇದಾಗಿದೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ವ್ಲಾಗಿಂಗ್ ಪೇಜ್ foodiiijunction ಮೂಲಕ ಅಪ್‌ಲೋಡ್ ಮಾಡಲಾಗಿದ್ದು ಈ ವಿಡಿಯೊ ಈಗ ನೆಟ್ಟಿಗರ ಗಮನ ಸೆಳೆದಿದೆ. ಮಿಲಿಯನ್‌ಗಟ್ಟಲೆ ವೀಕ್ಷಣೆ ಮತ್ತು ಸಾಕಷ್ಟು ಪ್ರತಿಕ್ರಿಯೆ ಗಳಿಸಿದೆ. ಆದರೆ, ಈ ದೃಶ್ಯ ನೋಡಿದ ಬಹುತೇಕರು ಈ ವಿಚಿತ್ರ ಪ್ರಯೋಗದ ಬಗ್ಗೆ ಕಿಡಿಕಾರಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಈ ಪಕೋಡ ತಯಾರಿಸಲು ಮೊದಲು ಮಸಾಲೆ ಹಿಟ್ಟಿನಲ್ಲಿ ಗುಲಾಬಿ ಹೂಗಳನ್ನು ನೆನೆಸಲಾಗುತ್ತದೆ. ಬಳಿಕ ಗುಲಾಬಿಗಳನ್ನು ಹಿಟ್ಟಿನಿಂದ ಲೇಪಿಸಿ, ಕುದಿಯುವ ಎಣ್ಣೆಯ ಪ್ಯಾನ್ ನಲ್ಲಿ ಪ್ರೈ ಮಾಡಿ, ಅವುಗಳನ್ನು ಪ್ಲೇಟ್‌ಗಳಲ್ಲಿ ಇರಿಸಿ ಮಹಿಳೆಯೊಬ್ಬಳು ತಿನ್ನುವ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದು.
ಬಳಕೆದಾರರು ಈ ವಿಡಿಯೊ ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವಿಡಿಯೊ ನೋಡಿದ ನೆಟ್ಟಿಗರಿಗೆ ಈ ಹೊಸ ಡಿಶ್ ಕುರಿತು ಆಶ್ಚರ್ಯ ಹುಟ್ಟಿಸುತ್ತೆ. ವಿಡಿಯೊದಲ್ಲಿ ಸಿದ್ಧಪಡಿಸಿದ ತಿಂಡಿ ವಿಚಾರವನ್ನು ಒಪ್ಪದ ನೆಟಿಜನ್‌ಗಳು ಜಸ್ಟೀಸ್ ಫಾರ್ ರೋಸ್’ ಎಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವು ಬಳಕೆದಾರರು ಅರೇ ಇದು ಯಾವ ಪಕೋಡ ಎಂದಿದ್ದಾರೆ. ಈ ರೀತಿಯ ವಿಚಿತ್ರ ತಿನಿಸಿನ ದೃಶ್ಯ ನೋಡಿದ ಬಹುತೇಕರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ.
ಈ ಸುದ್ದಿಯನ್ನೂ ಓದಿ:2024 Flashback: 2024ರಲ್ಲಿ ಹೆಚ್ಚು ವೈರಲ್ ಆದ ಫೋಟೊ, ವಿಡಿಯೊ ಯಾವುದು ಗೊತ್ತಾ?