Monday, 13th January 2025

Viral Video: ಶಾಲಾ ವಿದ್ಯಾರ್ಥಿಯ ಮಧುರ ಕಂಠಕ್ಕೆ ಮನಸೋತ  ನೆಟ್ಟಿಗರು; ವೈರಲ್‌ ವಿಡಿಯೊ ಇಲ್ಲಿದೆ

viral video

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ‌ ಇಂದು ಹಲವು ಪ್ರತಿಭಾವಂತರು  ಕ್ಷಣ ಮಾತ್ರದಲ್ಲಿ ಸ್ಟಾರ್‌ ಗಳಾಗುತ್ತಾರೆ. ಕೆಲವೊಂದು ವೈರಲ್ ಆದ ವಿಡಿಯೊ ನೆಟ್ಟಿಗರಿಗೆ  ಆಶ್ಚರ್ಯ ಉಂಟು ಮಾಡಿದರೆ ಇನ್ನು ಕೆಲವೊಂದು ದೃಶ್ಯಗಳು‌  ಬಹುಬೇಗನೆ ಹೃದಯಕ್ಕೆ ಹಿತ ನೀಡುತ್ತವೆ. ಇದೀಗ ಶಾಲಾ ವಿದ್ಯಾರ್ಥಿಯ ಮಧುರ ಧ್ವನಿಯ ವಿಡಿಯೊವೊಂದು ವೈರಲ್ ಆಗಿದ್ದು  ಯುವಕನ ಹಾಡಿಗೆ ನೆಟ್ಟಿಗರು ಮನ ಸೋತಿದ್ದಾರೆ (Viral Video).

ಶಾಲಾ ವಿದ್ಯಾರ್ಥಿ ʼದೇಖಾ ಏಕ್ ಖ್ವಾಬ್‌ʼ ಬಾಲಿವುಡ್ ಹಾಡನ್ನು ಹಾಡಿರುವ  ವಿಡಿಯೊ ಸದ್ಯ ಈ ರೀತಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಯುವಕನ ಮಧುರ ಧ್ವನಿಗೆ  ಕೇಳುಗರು ಮನ ಸೋತಿದ್ದಾರೆ. ರಾಹುಲ್ ಚುಂದಾವತ್ ನಾಯಕ್  ಎನ್ನುವವರು ಈ ಕ್ಲಿಪ್ ಹಂಚಿಕೊಂಡಿದ್ದು  ಐಕಾನಿಕ್ ಚಲನಚಿತ್ರ ʼಸಿಲ್ಸಿಲಾʼದ ರೋಮ್ಯಾಂಟಿಕ್ ಹಾಡು ‌ಯುವಕನ  ಧ್ವನಿಯಲ್ಲಿ ಮೂಡಿಬಂದಿದೆ. ಆತನ  ಮಧುರ ಧ್ವನಿಗೆ ಸಹಪಾಠಿಗಳು  ಮಾತ್ರವಲ್ಲದೆ ಶಾಲೆಯ ಶಿಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

ಆತನ ಧ್ವನಿಗೆ ಸಹಪಾಠಿಗಳು ಮತ್ತು ಶಿಕ್ಷಕರು ಸಂಪೂರ್ಣವಾಗಿ ಮಂತ್ರಮುಗ್ಧರಾಗಿರುವುದು ವಿಡಿಯೊದಲ್ಲಿ ಕಾಣಬಹುದು. ಆತನ ಶಾಂತವಾದ ಧ್ವನಿ ತರಗತಿಯಲ್ಲಿದ್ದ  ಎಲ್ಲರನ್ನು ಮೋಡಿ ಮಾಡುತ್ತದೆ. ವಿಡಿಯೊದ ಕೊನೆಯಲ್ಲಿ ಶಿಕ್ಷಕರ ಹೆಮ್ಮೆಯ ನಗು ಗಮನ ಸೆಳೆದಿದೆ.

ವಿಡಿಯೊ ನೋಡಿ

ತರಗತಿಯಲ್ಲಿ ಯುವಕ ʼದೇಖಾ ಏಕ್ ಖ್ವಾಬ್‌ʼ ಹಾಡನ್ನು ಮಧುರ ಧ್ವನಿ ಮೂಲಕ ಹಾಡುತ್ತಿರುವುದನ್ನು ಕಾಣಬಹುದು. ಸೋಶಿಯಲ್‌ ಮೀಡಿಯಾ ಬಳಕೆದಾರರು ಈ ಯುವಕನ ಪ್ರತಿಭೆಗೆ ಜೈ ಎಂದಿದ್ದಾರೆ.

ನೆಟ್ಟಿಗರು ಯುವಕನ  ಭಾವಪೂರ್ಣ ಧ್ವನಿಗೆ ಮನ ಸೋತಿದ್ದು ಬಳಕೆದಾರರೊಬ್ಬರು ತಮ್ಮ ಮೆಚ್ಚುಗೆಯನ್ನು ತಿಳಿಸಲು ಒಂದೇ ಒಂದು ಲೈಕ್ ಸಾಕಾಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅತ್ಯಂತ ಮಧುರವಾದ ಧ್ವನಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಅವಕಾಶ ಕೊಟ್ಟ ಶಿಕ್ಷಕನಿಗೆ ಒಂದು ಸಲಾಂ ಎಂದಿದ್ದಾರೆ.  ಮತ್ತೊಬ್ಬರು ಈ  ಹಾಡಿಗೆ ಮತ್ತಷ್ಟು ಹೊಳಪನ್ನು ತಂದಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ: Los Angeles Wildfire: ಅಮೆರಿಕಾದಲ್ಲಿ ಭೀಕರ ಕಾಡ್ಗಿಚ್ಚು; ಜೀವ ಪಣಕ್ಕಿಟ್ಟು ಮೊಲವನ್ನು ರಕ್ಷಿಸಿದ ಯುವಕ – ವಿಡಿಯೋ ವೈರಲ್

Leave a Reply

Your email address will not be published. Required fields are marked *