ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತಮ್ಮ ವಿಮಾನ ಟಿಕೆಟ್ ಮತ್ತು ಗುರುತಿನ ವಿಮಾನ ನಿಲ್ದಾಣದ ಚೆಕ್ಕಿಂಗ್ ಪಾಯಿಂಟ್‍ನಲ್ಲಿ ಹಾಜರುಪಡಿಸಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ತಮ್ಮ ಟಿಕೆಟ್‍ಗಳ ಡಿಜಿಟಲ್ ಪ್ರತಿ ಅಥವಾ ಅಗತ್ಯ ಪ್ರಯಾಣ ದಾಖಲೆಗಳ ಎ 4 ಪ್ರಿಂಟ್ ಔಟ್ ಅನ್ನು ಒಯ್ಯುತ್ತಿದ್ದರೆ, ಇಲ್ಲೊಬ್ಬ ವ್ಯಕ್ತಿ ದೊಡ್ಡ ಸೈಜ್ ಪೇಪರ್‌ನಲ್ಲಿ ಪ್ರಿಂಟ್ ಮಾಡಿದ ಬೋರ್ಡಿಂಗ್ ಪಾಸ್ ತೋರಿಸಿ ಭದ್ರತಾ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿದ್ದಾನೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಜನರ ಗುಂಪಿನ ನಡುವೆ ವ್ಯಕ್ತಿಯೊಬ್ಬ ತಮ್ಮ ದೊಡ್ಡ ಬೋರ್ಡಿಂಗ್ ಪಾಸ್ ಹಿಡಿದುಕೊಂಡು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಪ್ರವೇಶದ್ವಾರದಲ್ಲಿ ನಿಂತು ಭದ್ರತಾ ತಪಾಸಣಾ ಸೆಂಟರ್‌ನ ಅಧಿಕಾರಿಗೆ ಆ ವ್ಯಕ್ತಿಯು ದೊಡ್ಡ ಪ್ರಿಂಟ್ ಔಟ್ ಅನ್ನು ತೋರಿಸಿದ್ದಾನೆ. ಅದನ್ನು ಕಂಡು ಅವರು ದಿಗ್ಭ್ರಮೆಗೊಂಡಿದ್ದಾರೆ.
ಇಂತಹ ಅಸಾಮಾನ್ಯವಾದ ಬೋರ್ಡಿಂಗ್ ಪಾಸ್ ಅನ್ನು ನೋಡಿದ ಭದ್ರತಾ ಅಧಿಕಾರಿ ಕುತೂಹಲದಿಂದ ಮುಗುಳ್ನಕ್ಕಿದ್ದಾರೆ. ಪ್ರಯಾಣಿಕನು ತನ್ನ ಟಿಕೆಟ್ ಅನ್ನು ಭದ್ರತಾ ಸಿಬ್ಬಂದಿಗೆ ತೋರಿಸಿ, ದೊಡ್ಡ ಗಾತ್ರದ ಕಾಗದದಲ್ಲಿ ಮುದ್ರಿಸಿದ ವಿವರಗಳನ್ನು ತೋರಿಸಿದ್ದಾನೆ.
ಡಿಸೆಂಬರ್ ಕೊನೆಯಲ್ಲಿ ಶೇರ್ ಮಾಡಲಾದ ಈ ವಿಡಿಯೊ ಇನ್ಸ್ಟಾಗ್ರಾಂನಲ್ಲಿ 19 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ವೈರಲ್ ಆಗಿದೆ. “ಅವರು ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿರಬೇಕು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರು ತಮಾಷೆಭರಿತ ಕಾಮೆಂಟ್‍ಗಳನ್ನು ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:ನಡುರಸ್ತೆಯಲ್ಲಿ ಡೇಂಜರಸ್ ಸ್ಟಂಟ್! ಹುಚ್ಚಾಟ ಮೆರೆದ ಯುವಕರಿಗೆ ಚುರುಕು ಮುಟ್ಟಿಸಿದ ಖಾಕಿ!
“ಇದು ಕೇವಲ ಬೋರ್ಡಿಂಗ್ ಪಾಸ್ ಅಥವಾ ಅವರು ಇಡೀ ವಿಮಾನವನ್ನೇ ಖರೀದಿಸಿದ್ದಾರೆಯೇ?” ಎಂದು ಒಬ್ಬರು ಕೇಳಿದ್ದಾರೆ. “ವಿಮಾನ ರದ್ದುಗೊಂಡರೆ, ನಾನು ಇದರಲ್ಲಿ ಕಾಗದದ ವಿಮಾನವನ್ನು ತಯಾರಿಸಿ ಹಾರುತ್ತೇನೆ” ಎಂದು ಇನ್ನೊಬ್ಬರು ಹೇಳಿದ್ದಾರೆ. ಹಾಗೇ ಅನೇಕರು ನಗುವ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.