ನವದೆಹಲಿ: ಹಿರಿಯ ಪೈಲಟ್ ಒಬ್ಬರು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆ ತಮ್ಮ ಕೊನೆಯ ವಿಮಾನ ಪ್ರಯಾಣದ ದಿನ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದ್ದು, ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಇದು ಒಂದು ಭಾವನಾತ್ಮಕ ಕ್ಷಣವಾಗಿದ್ದು, ಕೈಯಲ್ಲಿ ಆನ್-ಏರ್ ಅನೌನ್ಸ್‌ಮೆಂಟ್ ಫೋನ್ ಅನ್ನು ಹಿಡಿದುಕೊಂಡು ಕ್ಯಾಪ್ಟನ್ ಆಗಿ ಇದು ಕೊನೆಯ ಹಾರಾಟ ಎಂದು ಜನರಿಗೆ ತಿಳಿಸಿದ್ದಾರೆ.
ಮಿಯಾಮಿಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಪೈಲಟ್ ಅವರೊಂದಿಗೆ ಅವರ ಕುಟುಂಬ ಮತ್ತು ಸ್ನೇಹಿತರು ಮತ್ತು ಅವರ ಮಗಳು ಹಾಗೂ ಕಾಕ್ ಪಿಟ್(ಪೈಲಟ್ ಆಸನ) ಅನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಮಗಳು ಸಹ-ಪೈಲಟ್ ಎಂದು ಪರಿಚಯಿಸಿದ್ದಾರೆ.
ಪೈಲಟ್ ಕಾಕ್‍ಪಿಟ್‍ನಲ್ಲಿ ತನ್ನ ಕೊನೆಯ ದಿನದ ಬಗ್ಗೆ ಜನರಿಗೆ ಹೇಳುವ ಮತ್ತು ತಮ್ಮ ವೃತ್ತಿಜೀವನದಲ್ಲಿ ವಿಮಾನವನ್ನು ಎಷ್ಟು ಬಾರಿ ಹಾರಿಸಿದ್ದಾರೆ ಎಂದು ಘೋಷಿಸುವ ಈ ವಿಡಿಯೊ ವಿಶ್ವಾದ್ಯಂತ ಅನೇಕ ಜನರ ಮನಸ್ಸನ್ನು ಗೆದ್ದಿದೆ. ವಿಡಿಯೊದಲ್ಲಿ, ಪೈಲಟ್ “ಇದು ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ನನ್ನ ಕೊನೆಯ ದಿನ… 11,835 ದಿನಗಳು ಕಾಲ ನಾನು ಈ ವಿಮಾನದಲ್ಲಿ ಕೆಲಸ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ಪೈಲಟ್ ಕಾಕ್ ಪಿಟ್ ಹೊರಗೆ ನಿಂತು ವಿಮಾನ ಪ್ರಕಟಣೆಯ ಮೈಕ್‍ನಲ್ಲಿ ಮಾತನಾಡುತ್ತಾ ಮಿಯಾಮಿಗೆ ಪ್ರಯಾಣಿಸುವ ಈ ವಿಮಾನದ ಪೈಲಟ್ ಆಗಿ ಇಂದು ಕೊನೆಯ ದಿನ ಎಂದು ಅವರು ತಮ್ಮ ಹಾರಾಟದ ಅನುಭವದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ಏವಿಯೇಷನ್ ಫಾರ್ ಏವಿಯೇಟರ್ಸ್’ ಎಂಬ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಈ ವಿಡಿಯೊ ತುಣುಕನ್ನು ಅಪ್ಲೋಡ್ ಮಾಡಿದೆ.
ಇದನ್ನೂ ಓದಿ:ರೈಲಿನ ಎಂಜಿನೊಳಗೆ ಹಾವು; ಹೌಹಾರಿದ ಲೋಕೊ ಪೈಲಟ್!
ಇವರ ಮಗಳು ಕೂಡ ಪೈಲೆಟ್ ಆಗಿದ್ದಾರೆ. ಈ ಸಂದರ್ಭದಲ್ಲಿ ತಂದೆ ಮಗಳನ್ನು ಹೊಗಳಿದ್ದಾರೆ. ತಂದೆಯ ಹೊಗಳಿಕೆಯಿಂದ ಮಗಳು ಖುಷಿಯಿಂದ ನೃತ್ಯ ಮಾಡಿದ್ದಾಳೆ. ಈ ವಿಡಿಯೊ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, 60,000 ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.